Advertisement
ದೀಪಿಕಾ ಮತ್ತು ರಣವೀರ್ ನಡುವೆ ಅನುರಾಗ ಅರಳಿ ಬರೋಬ್ಬರಿ ಐದು ವರ್ಷವೇ ಆಯಿತು. 2013ರಲ್ಲಿ ಗೋಲಿಯೋಂ ಕಿ, ರಾಸ್‌ಲೀಲಾ ರಾಮ್ -ಲೀಲಾ ಚಿತ್ರದ ಶೂಟಿಂಗ್ ವೇಳೆ ಅವರು ಪರಸ್ಪರ ಹತ್ತಿರವಾಗಿದ್ದರು. ಐದು ವರ್ಷದ ಒಡನಾಟದಲ್ಲಿ ಪರಸ್ಪರರನ್ನು ಅರಿತುಕೊಂಡ ಬಳಿಕ ಮದುವೆಯ ತೀರ್ಮಾನಕ್ಕೆ ಬಂದಿದ್ದಾರೆ. ಮದುವೆಯಬಗ್ಗೆ ದೀಪಿಕಾ ಹೇಳುವುದು ಹೀಗೆ: “ಹೊಸ ಚಿತ್ರಕ್ಕೆ ಸಹಿ ಹಾಕುವಾಗ ಎಷ್ಟು ರೋಮಾಂಚನವಾಗುತ್ತದೆಯೋ ಅಷ್ಟೇ ರೋಮಾಂಚನ ಮದುವೆ ವಿಚಾರದಲ್ಲೂ ಆಗುತ್ತಿದೆ. ಎಲ್ಲ ಹುಡುಗಿಯರಂತೆ ಮದುವೆಯಾಗಿ ಗೃಹಿಣಿಯಾಗಿ ಬದುಕಬೇಕೆಂದು ಆಶೆ ಪಟ್ಟಿದ್ದೆ. ಅದೀಗ ನೆರವೇರುತ್ತಿದೆ’.ರಣವೀರ್ ಕುರಿತು ಆಕೆಯ ಅಭಿಪ್ರಾಯ ಹೀಗಿದೆ, “ರಣವೀರ್‌ನ ಭಾವನಾತ್ಮಕ ಮತ್ತು ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ತಿಳಿಸುವ ಗುಣ ಮೆಚ್ಚುಗೆಯಾಗಿದೆ.ಆದರೆ, ಜೀವನಶೈಲಿಯನ್ನು ದ್ವೇಷಿಸುತ್ತೇನೆ ಮತ್ತು ಫ್ಯಾಷನ್ ಕುರಿತಾದ ಅಭಿರುಚಿಯನ್ನು ಸಹಿಸಿಕೊಂಡಿದ್ದೇನೆ’. ದೀಪಿಕಾಗೆ ಮದುವೆಯಾಗಲು ಸ್ಫೂರ್ತಿಯಾದದ್ದು ತಂದೆ ಮತ್ತು ತಾಯಿಯಂತೆ. ಹೆತ್ತವರ ದಾಂಪತ್ಯ ಜೀವನವನ್ನು ಹತ್ತಿರದಿಂದ ನೋಡುತ್ತ ಬೆಳೆದವಳು ನಾನು. ಇಷ್ಟೆಲ್ಲ ವರ್ಷ ಅವರು ನೆಮ್ಮದಿಯ ಸಂತೃಪ್ತ ಜೀವನ ನಡೆಸಿದ್ದಾರೆ. ಅವರ ಮಾದರಿಯಲ್ಲೇ ಗೃಹಿಣಿಯಾಗಿ ಬಾಳಬೇಕು ಎನ್ನುವ ಕಲ್ಪನೆ ಇಟ್ಟುಕೊಂಡಿದ್ದೇನೆ ಎಂದು ತನ್ನ ಮನದಾಳವನ್ನು ಬಿಚ್ಚಿಟ್ಟಿದ್ದಾಳೆ ದೀಪಿಕಾ.