Advertisement

Deepawali 2023: ಸುಪ್ರೀಂ ಕೋರ್ಟ್ ಆದೇಶವಿದ್ದರೂ ಪಟಾಕಿ ಹಚ್ಚಿದ ಹೊಸದಿಲ್ಲಿ ಜನತೆ

09:11 AM Nov 13, 2023 | Team Udayavani |

ಹೊಸದಿಲ್ಲಿ: ವಾಯು ಮಾಲಿನ್ಯದಿಂದ ತತ್ತರಿಸಿ ಹೋಗಿರುವ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮತ್ತೆ ಪರಿಸ್ಥಿತಿ ಹದಗೆಟ್ಟಿದೆ. ಸುಪ್ರೀಂ ಕೋರ್ಟ್ ನ ಆದೇಶವಿದ್ದರೂ ದೀಪಾವಳಿ ಪ್ರಯುಕ್ತ ಜನರು ಪಟಾಕಿ ಹೊಡೆದಿದ್ದು, ಮಾಲಿನ್ಯ ಮಿತಿ ಮೀರಿದೆ. ಹಲವು ಸ್ಥಳಗಳಲ್ಲಿ ಜನರು ಗುಂಪುಗೂಡಿ ಪಟಾಕಿ ಹಚ್ಚಿದ್ದು, ರವಿವಾರ ಸಂಜೆ ನಾಲ್ಕು ಗಂಟೆಯಿಂದ ತಡರಾತ್ರಿಯವರೆಗೆ ಪಟಾಕಿ ಸದ್ದು ಕೇಳಿಸಿದೆ.

Advertisement

ದೆಹಲಿಯ ಶಹಪುರ್ ಜಾಟ್, ಹೌಜ್ ಖಾಸ್, ಡಿಫೆನ್ಸ್ ಕಾಲೋನಿ, ಛತ್ತರ್‌ಪುರ್, ಕೈಲಾಶ್ ಪೂರ್ವ, ಮಂದಿರ್ ಮಾರ್ಗ್ ಮತ್ತು ಪಹರ್‌ಗಂಜ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಪಟಾಕಿಗಳಿಂದ ದೊಡ್ಡ ಶಬ್ದಗಳು ಕಂಡುಬಂದವು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಟಾಕಿಯ ತೀವ್ರತೆ ಕಡಿಮೆಯಾಗಿತ್ತು. ಹಲವರು ಮನೆಯಿಂದ ಹೊರಬರದೆ ಈ ಬಾರಿ ದೀಪಾವಳಿ ಆಚರಿಸಿದರು.

ಸೋಮವಾರ ಬೆಳಗ್ಗೆ, ದೆಹಲಿಯ ಗೋಲೆ ಮಾರ್ಕೆಟ್, ಪಹರ್‌ಗಂಜ್, ರಾಮ್ ನಗರ ಮಾರುಕಟ್ಟೆ ಮತ್ತು ಮಂದಿರ ಮಾರ್ಗದಂತಹ ಹಲವಾರು ಪ್ರದೇಶಗಳಲ್ಲಿ ಪಟಾಕಿ ತ್ಯಾಜ್ಯ ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next