Advertisement
ದೀಪಾವಳಿಗೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. ವಾರದಿಂದಲೇ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಗುರು ವಾರ ಖರೀದಿ ಇನ್ನಷ್ಟು ಬಿರುಸುಗೊಂಡಿ ತ್ತು. ನಗರದ ಫ್ಯಾನ್ಸಿ ಅಂಗಡಿಗಳು ಸಹಿತ ಗೂಡುದೀಪ ಮಾರಾಟ ಅಂಗಡಿಗಳ ಮುಂಭಾಗದಲ್ಲಿ ವಿವಿಧ ಬಣ್ಣಗಳ ವೈವಿಧ್ಯಮಯ ಗೂಡುದೀಪಗಳು ರಾರಾಜಿಸುತ್ತಿದ್ದು, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಸುಮಾರು 100 ರೂ. ಗಳಿಂದ ಗೂಡುದೀಪಗಳ ಬೆಲೆ ಆರಂಭವಾಗುತ್ತವೆ.
ಈ ವರ್ಷದ ದೀಪಾವಳಿಗೆ ಮಾರು ಕಟ್ಟೆಯಲ್ಲಿ ಸೆಗಣಿಯ ಹಣತೆಗೆ ಬೇಡಿಕೆ ಕೇಳಿಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಘೋಷಿಸಿದಂತೆ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಮೌಲ್ಯ ವೃದ್ಧಿಯಾಗಿದೆ. ಹಂಪನಕಟ್ಟೆ, ರಥಬೀದಿ ಮುಂತಾದೆಡೆಗಳಲ್ಲಿ ಸೆಗಣಿಯಿಂದ ಮಾಡಲ್ಪಟ್ಟ ಹಣತೆಗಳಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ಮಾರಾಟಗಾರರು. ಸುರತ್ಕಲ್‌ನ ಎಚ್ಚಣ್ಣ ಡೈರಿ ಸರ್ವೀಸಸ್ ಮುಖಾಂತರ ಸೆಗಣಿಯ ಹಣತೆಗಳನ್ನು ತಯಾರಿಸಿ ಮಂಗಳೂರಿನ ವಿವಿಧ ಅಂಗಡಿಗಳಿಗೆ ಒದಗಿಸಲಾಗುತ್ತಿದ್ದು, ದಿನಕ್ಕೆ ಸಾವಿರಾರು ಹಣತೆಗಳು ಮಾರಾಟ ವಾಗುತ್ತಿವೆ ಎಂದು ಸಂಸ್ಥೆಯ ಮಾಲಕ ಹರಿಕೃಷ್ಣ ಹೇಳುತ್ತಾರೆ.
Related Articles
Advertisement
ವೈವಿಧ್ಯ ಲೈಟಿಂಗ್ಸ್‌ನತ್ತ ಜನರ ಚಿತ್ತನಗರದ ಕೆಲವು ಕಡೆ ಬೆಳಕಿನಹಬ್ಬದಂದು ಮನೆಗಳನ್ನು ಎಲ್‌ಇಡಿ ಲೈಟ್‌ಗಳಿಂದ ಶೃಂಗರಿಸಲಾಗುತ್ತದೆ. ಹೀಗಾಗಿ ಮಾಲೆ ಮಾದರಿಯ ಎಲ್‌ಇಡಿ ಲೈಟ್‌ಗಳಿಗೆ ಹೆಚ್ಚು ಬೇಡಿಕೆಯಿದೆ. ನಗರದ ಮಾರ್ಕೆಟ್ ರಸ್ತೆ, ದುಬಾೖಮಾರ್ಕೆಟ್ ಮುಂತಾದೆಡೆ ಜನ ಎಲ್‌ಇಡಿ ಲೈಟ್‌ಗಳನ್ನು ಖರೀದಿ ಮಾಡುವುದು ಕಂಡುಬರುತ್ತಿದೆ.