Advertisement
ಗುರುವಾರ ಭೂಮಿ ಪೂಜೆ ನಡೆಯಲು ಸಿದ್ಧತೆ ನಡೆಯುತ್ತಿದ್ದಂತೆಯೇ ಅಪರಾಹ್ನದಿಂದ ವಿವಿಧೆಡೆ ಮಳೆ ಸುರಿಯಿತು. ವರುಣದೇವ ಪನ್ನೀರ ವರ್ಷಧಾರೆ ಸುರಿಸುತ್ತಿದ್ದಂತೆಯೇ ರೈತಾಪಿ ವರ್ಗ ಕೃಷಿಕಾರ್ಯಕ್ಕೆ ತೊಡಕಾದ ಕುರಿತು ಪ್ರಾರ್ಥನೆ ಸಲ್ಲಿಸಿತು. ಭೂಮಿ ಪೂಜೆಯನ್ನು ದೀಪಾವಳಿ ಹಬ್ಬದ ಪ್ರಯುಕ್ತ ನಡೆಸಲಾಯಿತು. ನಗರ, ಗ್ರಾಮಾಂತರ ಪ್ರದೇಶದ ಅಂಗಡಿ ಗಳಲ್ಲಿ ಲಕ್ಷ್ಮೀ ಪೂಜೆ ನಡೆಯಿತು. ಅಮಾವಾಸ್ಯೆ ದಿನ ಹಾಗೂ ಪಾಡ್ಯದ ದಿನ ವಾಹನ ಪೂಜೆ ನಡೆಯುತ್ತಿದೆ.
Related Articles
Advertisement
ದೀಪಾವಳಿ ಹಬ್ಬದ ಮೊದಲ ದಿನ ಬುಧವಾರ ನೀರು ತುಂಬುವ ಶಾಸ್ತ್ರ ತಾಲೂಕಿನಾದ್ಯಂತ ನಡೆಯಿತು. ನೀರು ತುಂಬಿಸುವ ಪಾತ್ರೆ ಮತ್ತು ನೀರು ಕಾಯಿಸುವ ಹಂಡೆಗಳನ್ನು ತೊಳೆದು ಬಾವಿ, ಕೆರೆ ನದಿಯಿಂದ ನೀರು ತಂದು ತುಂಬಿಸಿ ಗಂಗೆ ಪೂಜೆ ನಡೆಸಲಾಯಿತು. ಎಣ್ಣೆ ಸ್ನಾನದಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬ ನಂಬಿಕೆಯಿಂದ ಎಲ್ಲರೂ ಈ ಆಚರಣೆ ನಡೆಸಿದರು. ಎಣ್ಣೆ ಸ್ನಾನದಿಂದ ಆಯುರಾರೋಗ್ಯ ವೃದ್ಧಿಸುವುದೆಂದು ಮತ್ತು ಸಕಲ ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.
ತಾಲೂಕಿನ ವಿವಿಧ ಕಡೆಗಳಲ್ಲಿ ಲಕ್ಷ್ಮೀ ಪೂಜೆ ಹಾಗೂ ಬಲಿಪಾಡ್ಯಮಿ ಪೂಜೆಗೆ ಸಿದ್ಧತೆಗಳು ಭರಪೂರವಾಗಿ ನಡೆದಿದೆ.
ಗೃಹಿಣಿಯರು, ವ್ಯಾಪಾರಿಗಳು, ಉದ್ಯಮಿ ಗಳಲ್ಲಿ ಕೆಲ ವ ರು ಗುರುವಾರವೇ ಲಕ್ಷ್ಮೀ ಪೂಜೆ, ನಡೆಸಿದರೆ ಇನ್ನು ಕೆಲವರು ಶುಕ್ರವಾರದ ಬಲಿಪಾಡ್ಯಮಿ ದಿನ ಲಕ್ಷ್ಮೀ ಪೂಜೆ, ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು.
ಶುಕ್ರವಾರ ಗೋಪೂಜೆಯೂ ನಡೆಯಲಿದ್ದು ಹಟ್ಟಿ, ಗೋಶಾಲೆಗಳನ್ನು ಸ್ವತ್ಛವಾಗಿಸುವ, ಹೂ ಹಣ್ಣುಗಳನ್ನು ಸಂಗ್ರಹಿಸಿಡುವ ಸಿದ್ಧತೆಗಳನ್ನು ನಡೆ ಸಿ ದರು. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ತಾಂಡವೇಶ್ವರನಿಗೆ ಕಡಲ ತಡಿಯಲ್ಲಿ ದೀಪಾವಳಿಯ ವಿಶೇಷ ಪೂಜೆ :
ಕೋಟೇಶ್ವರ: ಕೋಟಿ ಲಿಂಗೇಶ್ವರ ದೇಗುಲದಲ್ಲಿ ದೀಪಾವಳಿಯ ಹಬ್ಬದ ಸಲುವಾಗಿ ತಾಂಡವೇಶ್ವರ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಸಮುದ್ರ ಸ್ನಾನಕ್ಕಾಗಿ ಅಮಾವಾಸ್ಯೆ ಕಡು ಕಡಲತೀರಕ್ಕೆ ಧಾರ್ಮಿಕ ವಿಧಿ ಗಳೊಡನೆ ಭಕ್ತರ ಸಮ್ಮುಖದಲ್ಲಿ ಒಯ್ಯಲಾಯಿತು.
ಬೀಜಾಡಿಯ ಅಮಾವಾಸ್ಯೆ ಕಡು ಕಡಲ ತೀರದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಡನೆ ತಾಂಡವೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇಗುಲದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ಪೂಜೆ ನಡೆಯಿತು. ಸ್ಥಳೀಯರು ಶ್ರೀ ದೇವರಿಗೆ ಪೂಜೆ ಸಲ್ಲಿಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸಮಿತಿ ಸದಸ್ಯರಾದ ಸುರೇಶ ಬೆಟ್ಟಿನ್, ಶಾರದಾ, ಭಾರತಿ, ಚಂದ್ರಿಕಾಧನ್ಯ, ಮಂಜುನಾಥ ಆಚಾರ್ಯ, ವಿವಿಧ ಸಂಘಟನೆಗಳ ಪ್ರಮುಖರು, ಗ್ರಾಮಸ್ಥರು, ಕಾರ್ಯ ನಿರ್ವಹಣಾಧಿ ಕಾರಿ ಗಣೇಶ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ, ಮಾಜಿ ಆಡಳಿತ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ, ಮಾಜಿ ಸದಸ್ಯರಾದ ಬಿ.ಎಂ. ಗುರುರಾಜ್ ರಾವ್, ಸುಮತಿ ದೇವಾಡಿಗ, ವನಜಾ ಪೂಜಾರಿ, ಉದ್ಯಮಿ ಸುರೇಂದ್ರ ಶೆಟ್ಟಿ ಅಂಕದಕಟ್ಟೆ, ಗಣೇಶ ಭಟ್ ಗೋಪಾಡಿ ಭಾಗವಹಿಸಿದ್ದರು.