ಪುತ್ತೂರು: ದೇವಾಲಯದಿಂದ ಹೊರಟ ದೀಪದ ಬೆಳಕು ಪ್ರತೀ ಮನೆ-ಮನವನ್ನು ಬೆಳಗಲಿ. ಮನೆ ದೇವಸ್ಥಾನ ಆಗಲಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಆಹ್ವಾನಿತ ಸದಸ್ಯ ಡಾ|ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ವಿಭಾಗದ ವತಿ ಯಿಂದ ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನದ ಸಹಯೋಗದೊಂದಿಗೆ ಉರ್ಲಾಂಡಿ ನಾಯರಡ್ಕದ ಮನೆ ಗಳಿಗೆ ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನ ದಿಂದ ನೀಡಲಾದ ದೀಪ ಬೆಳಕನ್ನು ಪ್ರದಾನ ಮಾಡಿದ ಬಳಿಕ ನಾಯ ರಡ್ಕ ಸತ್ಯ ನಾರಾಯಣ ಪೂಜಾ ಕಟ್ಟೆ ಯಲ್ಲಿ ಗೋ ಪೂಜೆಯಲ್ಲಿ ಅವರು ಮಾತನಾಡಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಾ|ಪ್ರಭಾಕರ್ ಭಟ್ ಕಲ್ಲಡ್ಕ ಅವರ ಉಪಸ್ಥಿತಿಯಲ್ಲಿ ಉಪೇಕ್ಷಿತ ಬಂಧುಗಳಿಗೆ ದೇಗುಲದಿಂದ ದೀಪ ಪ್ರದಾನ ನಡೆಯಿತು. ಅಲ್ಲಿಂದ ಜ್ಯೋತಿ ಬೆಳಗಿದ ನಂದಾ ದೀಪವನ್ನು ಉರ್ಲಾಂಡಿಯಿಂದ ನಾಯರಡ್ಕದ ತನಕ ಪ್ರತೀ ಮನೆ ಮನೆಗಳಿಗೆ ತೆರಳಿ ಮನೆಗಳ ದೀಪ ಪ್ರಜ್ವಲಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಮಹಾ ಲಿಂಗೇಶ್ವರ ದೇವಸ್ಥಾನದಿಂದ ದೇವರ ಭಾವಚಿತ್ರ, ಬೆಳ್ಳಿಯ ಗಣಪತಿ, ಲಕ್ಷಿ$¾à ಇರುವ ಪದಕವನ್ನು ಉಪೇಕ್ಷಿತ ಬಂಧುಗಳಿಗೆ ವಿತರಣೆ ಮಾಡಲಾಯಿತು. ಆರ್ಥಿಕ ಸಂಕಷ್ಟದ ನಡುವೆಯೂ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ 4 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ, ಸಾಮರಸ್ಯ ಮಂಗಳೂರು ವಿಭಾಗ ಸಂಚಾಲಕ ರವೀಂದ್ರ ಪಿ., ಪುತ್ತೂರು ವಿಭಾಗದ ಸಂಯೋಜಕ ದಯಾನಂದ್, ಪ್ರಸನ್ನ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ| ಸುಧಾ ಎಸ್. ರಾವ್, ವೀಣಾ ಬಿ.ಕೆ., ಬಿ.ಐತ್ತಪ್ಪ ನಾಯ್ಕ, ರವೀಂದ್ರನಾಥ ರೈ ಬಳ್ಳಮಜಲು, ನಗರಸಭೆ ಸದಸ್ಯರಾದ ಪಿ.ಜಿ. ಜಗನ್ನಿವಾಸ ರಾವ್, ಸಂತೋಷ್ ಬೊಳುವಾರು, ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಅಶೋಕ್ ಬಲಾ°ಡು, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಕಾರ್ಯವಾಹ ರಮೇಶ್, ಲಕ್ಷ್ಮೀಪ್ರಸಾದ್ ಬೊಟ್ಯಾಡಿ, ಸಂತೋಷ್ ಬೋನಂತಾಯ ಉಪಸ್ಥಿತರಿದ್ದರು. ಶರತ್ ಸ್ವಾಗತಿಸಿದರು. ಚೇತನಾ ವಂದಿಸಿಸರು. ಅಶೋಕ್ ಕುಂಬ್ಳೆ ನಿರೂಪಿಸಿದರು.
ಸಹಕಾರ ಗುಣ ಬೆಳೆಯಲಿ :
ತಾರತಮ್ಯ ಸಮಾಜದ ಶಕ್ತಿಯನ್ನು ಕುಂದಿಸುತ್ತದೆ. ನಮ್ಮ ಸಮಾಜದ ಶಕ್ತಿಯನ್ನು ಕುಂದಿಸಲು ಅನ್ಯಮತೀಯರು ಕಾಯುತ್ತಿದ್ದಾರೆ. ಉಪೇಕ್ಷಿತ ಬಂಧುಗಳ ದಾರಿಯನ್ನು ತಪ್ಪಿಸುವ ಕೆಲಸ ಮಾಡುವವರು ಹಲವರಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮಕ್ಕೆ ಅನ್ಯಾಯ ಆಗಬಾರದು ಎಂದಾದರೆ ನಮ್ಮಲ್ಲಿ ಸಹಕಾರ ಮಾಡುವ ಗುಣ ಬೆಳೆಯಬೇಕು ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.