Advertisement

ಕರಾವಳಿಯಾದ್ಯಂತ ದೀಪಾವಳಿ ಸಡಗರ : ಕೃಷ್ಣಮಠದಲ್ಲಿ ಬಲೀಂದ್ರ ಪೂಜೆ

03:51 PM Oct 25, 2022 | Team Udayavani |

ಮಂಗಳೂರು/ಉಡುಪಿ : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ.

Advertisement

ದ.ಕ.ಜಿಲ್ಲೆಯ ಹೆಚ್ಚಿನ ಕಡೆ ಬುಧವಾರ ದೀಪಾವಳಿ ಹಬ್ಬ ನಡೆಯಲಿದ್ದರೆ, ಉಡುಪಿ ಜಿಲ್ಲೆಯಲ್ಲಿ ಸೋಮವಾರವೇ ವಿಜೃಂಭಣೆಯಿಂದ ಹಬ್ಬ ಆಚರಿಸಲಾಯಿತು. ದೀಪಾವಳಿಯ ಸಂಭ್ರಮ ಬುಧವಾರವೂ ಇರಲಿದೆ.

ವಿವಿಧ ಕಚೇರಿ- ಮನೆಗಳಲ್ಲಿ ಲಕ್ಷ್ಮೀಪೂಜೆ ನೆರವೇರಿತು. ವಿವಿಧ ದೇಗುಲಗಳಲ್ಲಿ ವಿವಿಧ ಪೂಜೆ ಸಂಪನ್ನಗೊಂಡಿತು. ಸಾವಿರಾರು ಮಂದಿ ಭಕ್ತರು ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಹೂವಿನ ಅಲಂಕಾರದೊಂದಿಗೆ ಮನೆ, ಕಚೇರಿಗಳನ್ನು ಸಿಂಗರಿಸಿ ಜನ ಸಂಭ್ರಮಿಸಿದರು. ಮನೆ ಮುಂಭಾಗ ರಂಗೋಲಿ ಹಾಕಿ ದೀಪ ಹಚ್ಚಿ ದೀಪಾವಳಿಯನ್ನು ಆಚರಿಸಲಾಯಿತು. ಕೆಲವು ಕಡೆಗಳಲ್ಲಿ ವಾಹನ, ಅಂಗಡಿಗಳಿಗೂ ಪೂಜೆ ನೆರವೇರಿಸಿದರು. ಇನ್ನು ಕೆಲವೆಡೆ ಬುಧವಾರ ಪೂಜೆ ನಡೆಯಲಿದೆ.

ಮನೆ-ಮನೆಗಳಲ್ಲಿ ವಿವಿಧ ಬಣ್ಣ- ವಿನ್ಯಾಸಗಳ ಗೂಡುದೀಪಗಳು, ಆಕರ್ಷಕ ವಿದ್ಯುತ್‌ ದೀಪಗಳು ಶೋಭಿಸುತ್ತಿವೆ. ಮನೆಯ ಆವರಣದಲ್ಲಿ ಹಣತೆಗಳಲ್ಲಿ ದೀಪ ಬೆಳಗಿಸಿ ಪಟಾಕಿ ಸಿಡಿಸಿ ಸಂಭ್ರಮಿ ಸಲಾಗುತ್ತದೆ.

ಉಡುಪಿ: ಶ್ರೀಕೃಷ್ಣಮಠದಲ್ಲಿ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಸೋಮವಾರ ರಾತ್ರಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು “ಬಲೀಂದ್ರ ಪೂಜೆ” ನಡೆಸಿದರು. ಬಳಿಕ ಪಂಚ ದೀಪ ಪ್ರಜ್ವಲನೆಯೊಂದಿಗೆ ವಾದ್ಯ ಮೇಳ ಸಹಿತ ಶ್ರೀಕೃಷ್ಣ ಮಠದ ಎಲ್ಲ ಪ್ರದೇಶ ಮತ್ತು ಪರ್ಯಾಯ ಕೃಷ್ಣಾಪುರ ಮಠಕ್ಕೂ ದೀಪವನ್ನು ಪ್ರದರ್ಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next