Advertisement
ಚುನಾವಣ ಆಯೋಗ ದಿನಾಂಕ ಘೋಷಿಸುವ ಕೆಲವೇ ನಿಮಿಷಗಳ ಮೊದಲು ಈ ಬೆಳವಣಿಗೆ ನಡೆದಿದ್ದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಯ ಎಲ್ಲಾ ಉದ್ಯೋಗಿಗಳಿಗೆ 28,000 ರೂ.ಗಳ ದೀಪಾವಳಿ ಬೋನಸನ್ನು ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಇದು ಕಳೆದ ವರ್ಷ ಘೋಷಿಸಿದ ಬೋನಸ್‌ಗಿಂತ 3,000 ರೂ. ಹೆಚ್ಚಳವಾಗಿದೆ.
ಲಡ್ಕಿ ಬೆಹನ್ ಯೋಜನೆಯ ಮಹಿಳಾ ಫಲಾನುಭವಿಗಳಿಗೆ 2024ರ ದೀಪಾವಳಿ ಬೋನಸ್ ಅಂಗವಾಗಿ 4 ಮತ್ತು 5 ನೇ ಕಂತಿನಲ್ಲಿ ರೂ. 3,000 ಬ್ಯಾಂಕ್ ಖಾತೆಗಳಿಗೆ ನೇರ ಜಮಾ ಮಾಡುವುದಾಗಿ ಸರ್ಕಾರ ಹೇಳಿದೆ. ಲಡ್ಕಿ ಬೆಹನ್ ಯೋಜನೆಯು ವಾರ್ಷಿಕ 2.5 ಲಕ್ಷ ರೂ.ಕ್ಕಿಂತ ಕಡಿಮೆ ಆದಾಯವಿರುವ ಕುಟುಂಬದ ಮಹಿಳೆಯರು ಮಾಸಿಕವಾಗಿ 1,500 ರೂ. ಸಹಾಯಧನ ಪಡೆಯುತ್ತಿದ್ದರು. ಶಿಂಧೆ ಸರಕಾರದಿಂದ ಮಹಿಳಾ ಮತದಾರರ ಗುರಿ:
ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದರಿಂದ ಚುನಾವಣೆ ವರ್ಷದಲ್ಲಿ ಏಕನಾಥ್ ಶಿಂಧೆ ಸರಕಾರವು ಮಹಿಳೆಯರು, ವೃದ್ಧರು ಮತ್ತು ಯುವಕರ ಗುರಿಯಾಗಿಸಿ ಸರ್ಕಾರ ಎಂಟು ಪ್ರಮುಖ ಕಲ್ಯಾಣ ಯೋಜನೆಗಳ ಅನಾವರಣಗೊಳಿಸಿದೆ. ವರ್ಷಕ್ಕೆ ಮೂರು ಉಚಿತ ಸಿಲಿಂಡರ್ ಹಾಗೂ ತೀರ್ಥಕ್ಷೇತ್ರಗಳಿಗೆ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ, ಆರ್ಥಿಕವಾಗಿ ಸಬಲರಲ್ಲದ ಉಚಿತ ಔದ್ಯೋಗಿಕ ಶಿಕ್ಷಣವನ್ನು ಘೋಷಿಸಿದೆ.
Related Articles
Advertisement
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 48 ಸ್ಥಾನಗಳಲ್ಲಿ 31 ಸ್ಥಾನ ಮಹಾ ವಿಕಾಸ್ ಅಘಾಡಿ (ಎಂವಿಎ) ಗೆದ್ದಿತ್ತು. ಈ ಸೋಲಿನ ನಂತರ ಮಹಾಯುತಿ ಮೈತ್ರಿಕೂಟಕ್ಕೆ ವಿಧಾನಸಭೆ ಚುನಾವಣೆಯು ನಿರ್ಣಾಯಕವಾಗಿವೆ. ಮಹಾರಾಷ್ಟ್ರದ ವಿಧಾನಸಭೆಗೆ ನ.20ರಂದು ಮತದಾನ ನಡೆಯಲಿದೆ.