Advertisement

Kannada Movie: ಮಿ.ರಾಣಿ ಎಂದ ದೀಪಕ್‌ ಸುಬ್ರಹ್ಮಣ್ಯ

04:32 PM Sep 15, 2024 | Team Udayavani |

ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ ಚಿತ್ರದ ನಿರ್ದೇಶಕ ಮಧುಚಂದ್ರ ಈಗ ಹೊಸ ಚಿತ್ರದೊಂದಿಗೆ ಮತ್ತೆ ಬಂದಿದ್ದಾರೆ. ಈ ಬಾರಿ ಅವರು ಕಾಮಿಡಿ ಜಾನರ್‌ ಮೊರೆ ಹೋಗಿದ್ದು, ಚಿತ್ರಕ್ಕೆ “ಮಿ.ರಾಣಿ’ ಎಂಬ ಟೈಟಲ್‌ ಇಡಲಾಗಿದೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ದೀಪಕ್‌ ಸುಬ್ರಹ್ಮಣ್ಯ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Advertisement

ಪ್ರಸ್ತುತ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದೆ. ನಟ ದೀಪಕ್‌ ಸುಬ್ರಹ್ಮಣ್ಯ ಅವರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಆ ಪೈಕಿ 108 ಜನ ಅಭಿಮಾನಿಗಳ ಮನೆಗೆ ಮಿ.ರಾಣಿ ಚಿತ್ರತಂಡ ಭೇಟಿ ನೀಡಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ದರ್ಶನ ಪಡೆದು, ಅವರ ಮೂಲಕ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿಸಿದ್ದಾರೆ.

ಈ ಮೂಲಕ ವಿನೂತನ ಪ್ರಚಾರಕ್ಕೆ ತಂಡ ನಾಂದಿಯಾಡಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ನವೆಂಬರ್‌ ನಲ್ಲಿ ಚಿತ್ರವನ್ನು ತೆರೆಗೆ ಪ್ರಯತ್ನ ನಡೆಯುತ್ತಿದೆ. ದೀಪಕ್‌ ಸುಬ್ರಹ್ಮಣ್ಯ ಅವರಿಗೆ ನಾಯಕಿಯಾಗಿ ಪಾರ್ವತಿ ನಾಯರ್‌ ನಟಿಸಿದ್ದಾರೆ. ಎಕ್ಸೆಲ್‌ ಆರ್ಬಿಟ್‌ ಕ್ರಿಯೇಶನ್ಸ್‌ನಡಿ ನೂರಕ್ಕೂ ಹೆಚ್ಚು ಜನರು ಬಂಡವಾಳ ಹೂಡಿ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next