Advertisement

ಶಾಸಕ ಬಾವಾಗೆ ದೀಪಕ್‌ ರಾವ್‌ ಕುಟುಂಬಸ್ಥರ ತರಾಟೆ 

02:06 PM Jan 05, 2018 | |

ಸುರತ್ಕಲ್‌:  ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ದೀಪಕ್‌ ರಾವ್‌ ಅವರ ಕಾಟಿಪಳ್ಳದ ನಿವಾಸಕ್ಕೆ ಸಾಂತ್ವನ ಹೇಳಲು ಬಂದಿದ್ದ ಸ್ಥಳೀಯ ಶಾಸಕ ಮೋಯಿದ್ದೀನ್‌ ಬಾವಾ ಅವರನ್ನು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಬಗ್ಗೆ ವರದಿಯಾಗಿದೆ.

Advertisement

ಬೆಂಬಲಿಗರೊಂದಿಗೆ ಮನೆಗೆ ಬಂದ ಬಾವಾ ಬಾವಾ ಅವರು ನೀಡಿದ ಪರಿಹಾರ ಹಣವನ್ನು ಸ್ವೀಕರಿಲು ನಕಾರ ವ್ಯಕ್ತಪಡಿಸಿದ ದೀಪಕ್‌ ರಾವ್‌ ಕುಟುಂಬಸ್ಥರು ‘ನಿನ್ನೆ ಬರಬೇಕಿತ್ತು ಅಂತ್ಯಕ್ರಿಯೆಗೆ, ಇಂದು ಯಾಕೆ ಬಂದಿದ್ದೀರಿ’ ಎಂದು ಪ್ರಶ್ನಿಸಿರುವುದಾಗಿ  ವರದಿಯಾಗಿದೆ.

‘ನಿನ್ನೆ ಉದ್ವಿಗ್ನ ಸ್ಥಿತಿ ಇದ್ದ ಕಾರಣ  ಶಾಂತಿ ಭಂಗವಾಗಬಹುದು ಎಂಬ  ಕಾರಣಕ್ಕೆ ಪೊಲೀಸರು ಅಂತ್ಯಕ್ರಿಯೆಗೆ ಬರಬೇಡಿ ಎಂದಿದ್ದರು, ಹಾಗಾಗಿ ಬರಲಿಲ್ಲ, ನಾನು ಮನೆಯಲ್ಲೇ ದುಃಖತಪ್ತನಾಗಿ ಕುಳಿತಿದ್ದೆ’ ಎಂದು ಬಾವಾ ಪ್ರತಿಕ್ರಿಯೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next