Advertisement

ರಾಜಸ್ಥಾನದ ಪೇಸ್‌ ಬೌಲರ್‌ ದೀಪಕ್‌ ಚಹರ್‌ ಐಪಿಎಲ್​ಗೆ ಫಿಟ್‌

11:43 PM Feb 21, 2023 | Team Udayavani |

ಜೈಪುರ: ಕಳೆದ ವರ್ಷದ ಎರಡು ಶಸ್ತ್ರಚಿಕಿತ್ಸೆ ಗಳಿಂದ ಚೇತರಿಸಿ ಕೊಂಡ ರಾಜಸ್ಥಾನದ ಪೇಸ್‌ ಬೌಲರ್‌ ದೀಪಕ್‌ ಚಹರ್‌ ತಾನು ಫಿಟ್‌ ಆಗಿರುವುದನ್ನು ಘೋಷಿಸಿದ್ದು, ಐಪಿಎಲ್‌ ಆಡಲು ಸಜ್ಜಾಗಿರುವುದಾಗಿ ಹೇಳಿದ್ದಾರೆ. ಅವರಿನ್ನು ಅಧಿಕೃತವಾಗಿ ಫಿಟ್‌ನೆಸ್‌ ಟೆಸ್ಟ್‌ನಲ್ಲಿ ತೇರ್ಗಡೆಯಾಗಬೇಕಿದೆ.

Advertisement

2022ರ ಸಾಲಿನಲ್ಲಿ ದೀಪಕ್‌ ಚಹರ್‌ ಭಾರತದ ಪರ 15 ಪಂದ್ಯಗಳನ್ನಷ್ಟೇ ಆಡಿದ್ದರು. ಟಿ20 ವಿಶ್ವಕಪ್‌ನಿಂದಲೂ ಹೊರಬಿದ್ದಿದ್ದರು. ಬೆಂಗಳೂರಿನ ಎನ್‌ಸಿಎಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ದೀಪಕ್‌ ಚಹರ್‌, ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

2018ರಲ್ಲಿ ಟೀಮ್‌ ಇಂಡಿಯಾವನ್ನು ಪ್ರವೇಶಿಸಿದ ದೀಪಕ್‌ ಚಹರ್‌ 13 ಏಕದಿನ ಹಾಗೂ 24 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next