Advertisement

ಹೆಮ್ಮೆಯ ಕ್ರೀಡಾ ರತ್ನ ದೀಪಾ ಮಲಿಕ್‌

09:54 AM Aug 30, 2019 | sudhir |

ಹೊಸದಿಲ್ಲಿ: ಪ್ಯಾರಾಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್‌ ಅವರಿಗೆ ರಾಷ್ಟ್ರೀಯ “ಕ್ರೀಡಾದಿನ’ವಾದ ಗುರುವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ 2019ನೇ ಸಾಲಿನ ಪ್ರತಿಷ್ಠಿತ “ರಾಜೀವ್‌ ಗಾಂಧಿ ಖೇಲ್‌ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಗೌರವಕ್ಕೆ ಪಾತ್ರರಾದ ಮತ್ತೋರ್ವ ಕ್ರೀಡಾತಾರೆ, ಖ್ಯಾತ ಕುಸ್ತಿಪಟು ಭಜರಂಗ್‌ ಪೂನಿಯ ರಶ್ಯದಲ್ಲಿ ತರಬೇತಿ ಪಡೆಯುತ್ತಿದ್ದ ಕಾರಣ ಸಮಾರಂಭಕ್ಕೆ ಗೈರಾದರು.

Advertisement

02: ದೀಪಾ ಮಲಿಕ್‌ ಖೇಲ್‌ ರತ್ನಕ್ಕೆ ಪಾತ್ರರಾದ 2ನೇ ಪ್ಯಾರಾ ಆ್ಯತ್ಲೀಟ್‌. ದೇವೇಂದ್ರ ಜಜಾರಿಯಾ ಮೊದಲಿಗ.

03: ದ್ರೋಣಾಚಾರ್ಯ ಮತ್ತು ಜೀವಮಾನ ಸಾಧನೆ ಪ್ರಶಸ್ತಿ ಪಡೆದವರು.

04: ಭಜರಂಗ್‌ ಪೂನಿಯ, ರವೀಂದ್ರ ಜಡೇಜ, ತೇಜಿಂದರ್‌ ಪಾಲ್‌ ತೂರ್‌, ಮೊಹಮ್ಮದ್‌ ಅನಾಸ್‌ ಸೇರಿದಂತೆ 4 ಪ್ರಮುಖರು ಗೈರು.

05: ಧ್ಯಾನ್‌ಚಂದ್‌ ಪ್ರಶಸ್ತಿ ಪಡೆದವರು.

Advertisement

05: ಅರ್ಜುನ ಪ್ರಶಸ್ತಿ ಮೊತ್ತ (ಲಕ್ಷ ರೂ.)

7.5: ಖೇಲ್‌ ರತ್ನದ ಪ್ರಶಸ್ತಿ ಮೊತ್ತ (ಲಕ್ಷ ರೂ.)

19: ಅರ್ಜುನ ಪ್ರಶಸ್ತಿಗೆ ಪಾತ್ರರಾದವರು.

49: ದೀಪಾ ಮಲಿಕ್‌ ಖೇಲ್‌ ರತ್ನಕ್ಕೆ ಭಾಜನರಾದ ಅತೀ ಹಿರಿಯ ಕ್ರೀಡಾಪಟು. ಅವರ ವಯಸ್ಸು 49 ವರ್ಷ.

ಕ್ರೀಡಾ ಪ್ರಶಸ್ತಿ ಪುರಸ್ಕೃತರು :

ಖೇಲ್‌ ರತ್ನ
– ದೀಪಾ ಮಲಿಕ್‌ (ಪ್ಯಾರಾ ಆ್ಯತ್ಲೀಟ್‌)
– ಭಜರಂಗ್‌ ಪೂನಿಯ (ಕುಸ್ತಿ)

ಅರ್ಜುನ ಪ್ರಶಸ್ತಿ
– ತೇಜಿಂದರ್‌ಪಾಲ್‌ ಸಿಂಗ್‌ ತೂರ್‌ (ಆ್ಯತ್ಲೆಟಿಕ್ಸ್‌)
– ಮೊಹಮ್ಮದ್‌ ಅನಾಸ್‌ (ಆ್ಯತ್ಲೆಟಿಕ್ಸ್‌)
– ಎಸ್‌. ಭಾಸ್ಕರನ್‌ (ಬಾಡಿ ಬಿಲ್ಡಿಂಗ್‌)
– ಸೋನಿಯಾ ಲಾಥರ್‌ (ಬಾಕ್ಸಿಂಗ್‌)
– ರವೀಂದ್ರ ಜಡೇಜ (ಕ್ರಿಕೆಟ್‌)
– ಚಿಂಗ್ಲೆನ್ಸಾನ ಸಿಂಗ್‌ (ಹಾಕಿ)
– ಅಜಯ್‌ ಠಾಕೂರ್‌ (ಕಬಡ್ಡಿ)
– ಗೌರವ್‌ ಸಿಂಗ್‌ ಗಿಲ್‌ (ಮೋಟಾರ್‌ ನ್ಪೋರ್ಟ್ಸ್)
– ಪ್ರಮೋದ್‌ ಭಗತ್‌ (ಪ್ಯಾರಾ ಬ್ಯಾಡ್ಮಿಂಟನ್‌)
– ಅಂಜುಮ್‌ ಮೌದ್ಗಿಲ್‌ (ಶೂಟಿಂಗ್‌)
– ಹರ್ಮೀತ್‌ ರಜುಲ್‌ ದೇಸಾಯಿ (ಟೇಬಲ್‌ ಟೆನಿಸ್‌)
– ಪೂಜಾ ಧಂಡಾ (ಕುಸ್ತಿ)
– ಫೌವಾದ್‌ ಮಿರ್ಜಾ (ಈಕ್ವೆಸ್ಟ್ರಿಯನ್‌)
– ಗುರುಪ್ರೀತ್‌ ಸಿಂಗ್‌ ಸಂಧು (ಫ‌ುಟ್‌ಬಾಲ್‌)
– ಪೂನಂ ಯಾದವ್‌ (ಕ್ರಿಕೆಟ್‌)
– ಸ್ವಪ್ನಾ ಬರ್ಮನ್‌ (ಆ್ಯತ್ಲೆಟಿಕ್ಸ್‌)
– ಸುಂದರ್‌ ಸಿಂಗ್‌ ಗುರ್ಜರ್‌ (ಪ್ಯಾರಾ ಆ್ಯತ್ಲೆಟಿಕ್ಸ್‌)
– ಬಿ. ಸಾಯಿ ಪ್ರಣೀತ್‌ (ಬ್ಯಾಡ್ಮಿಂಟನ್‌)
– ಸಿಮ್ರಾನ್‌ ಸಿಂಗ್‌ ಶೆರ್ಗಿಲ್‌ (ಪೋಲೊ)

ದ್ರೋಣಾಚಾರ್ಯ ಪ್ರಶಸ್ತಿ
– ವಿಮಲ್‌ ಕುಮಾರ್‌ (ಬ್ಯಾಡ್ಮಿಂಟನ್‌)
– ಸಂದೀಪ್‌ ಗುಪ್ತಾ (ಟೇಬಲ್‌ ಟೆನಿಸ್‌)
– ಮೊಹಿಂದರ್‌ ಸಿಂಗ್‌ ಧಿಲ್ಲೋನ್‌ (ಆ್ಯತ್ಲೆಟಿಕ್ಸ್‌)

ಧ್ಯಾನ್‌ಸಿಂಗ್‌ ಪ್ರಶಸ್ತಿ
– ಮ್ಯಾನ್ಯುಯೆಲ್‌ ಫ್ರೆಡ್ರಿಕ್ಸ್‌ (ಹಾಕಿ)
– ಅರೂಪ್‌ ಬಸಾಕ್‌ (ಟೇಬಲ್‌ ಟೆನಿಸ್‌)
– ಮನೋಜ್‌ ಕುಮಾರ್‌ (ಕುಸ್ತಿ)
– ನಿತಿನ್‌ ಕೀರ್ತನೆ (ಟೆನಿಸ್‌)
– ಲಾಲ್ರೆಮ್ಸಂಗ (ಆರ್ಚರಿ)

ಜೀವಮಾನ ಸಾಧನೆ ಪ್ರಶಸ್ತಿ
– ಮೆರ್ಜ್‌ಬಾನ್‌ ಪಟೇಲ್‌ (ಹಾಕಿ)
– ರಾಮ್‌ಬೀರ್‌ ಸಿಂಗ್‌ ಖೋಕರ್‌ (ಕಬಡ್ಡಿ)
– ಸಂಜಯ್‌ ಭಾರದ್ವಜ್‌ (ಕ್ರಿಕೆಟ್‌)

Advertisement

Udayavani is now on Telegram. Click here to join our channel and stay updated with the latest news.

Next