Advertisement

Deep Fake: ಇನ್ಫಿ ಮೂರ್ತಿಯನ್ನೂ ಬಿಡದ ಡೀಪ್‌ ಫೇಕ್‌ ವಂಚಕರು

09:12 PM Dec 14, 2023 | Pranav MS |

ನವದೆಹಲಿ: ಐಟಿ ದಿಗ್ಗಜ ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಅವರು ಡೀಪ್‌ ಫೇಕ್‌ ಜಾಲಕ್ಕೆ ತುತ್ತಾಗಿದ್ದಾರೆ. ಅವರ ಹೆಸರಿನಲ್ಲಿ ಹೂಡಿಕೆ ಮಾಡುವ ಜಾಲದ ಬಗ್ಗೆ ಖುದ್ದು ಮೂರ್ತಿಯವರೇ ವಿಡಿಯೋದಲ್ಲಿ ಹೇಳಿದಂತೆ ವಂಚಕರು ವಿಡಿಯೋ ಅಪ್‌ ಲೋಡ್‌ ಮಾಡಿದ್ದಾರೆ.

Advertisement

ಆ ವಿಡಿಯೋ ಪ್ರಕಾರ “ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಅವರೊಂದಿಗಿನ ನಮ್ಮ ನೂತನ ಪ್ರಾಜೆಕ್ಟ್ ಕುರಿತು ನಿಮಗೆ ತಿಳಿಯಬಯಸುತ್ತೇನೆ. ನಮ್ಮ ತಂಡ ಹಾಗೂ ಎಲಾನ್‌ ಮಸ್ಕ್ ಅವರ ತಂಡ ಸೇರಿಕೊಂಡು ವಿಶ್ವದ ಮೊದಲ ಕ್ವಾಂಟಮ್‌ ಕಂಪ್ಯೂಟಿಂಗ್‌ ಸಾಫ್ಟ್ವೇರ್‌ “ಕ್ವಾಂಟಮ್‌ ಎಐ” ಅನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಶೇ.94ರಷ್ಟು ಯಶಸ್ಸಿನ ದರ ಹೊಂದಿದೆ. ಇದನ್ನು ಬಳಸುವ ಬಳಕೆದಾರರು ಮೊದಲ ದಿನವೇ ಸುಮಾರು 2.5 ಲಕ್ಷ ರೂ.ಗಳನ್ನು ಗಳಿಸಬಹುದು’ ಎಂದು ಉಲ್ಲೇಖೀಸಲಾಗಿದೆ.

ಡೀಪ್‌ ಫೇಕ್‌ ವಿಡಿಯೋದಲ್ಲಿ ನಾರಾಯಣಮೂರ್ತಿ ಅವರು ಹೇಳಿದಂತೆ ಆಡಿಯೋ ಮಾರ್ಫ್‌ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಾರಾಯಾಣಮೂರ್ತಿ ಅವರು, “ಈ ರೀತಿಯ ಡೀಪ್‌ ಫೇಕ್‌ ವಿಡಿಯೋಗಳ ಕುರಿತು ಎಚ್ಚರಿಕೆ ವಹಿಸಿ. ಇಂಥ ವಿಡಿಯೋಗಳಿಂದ ವಂಚನೆಗೆ ಒಳಗಾಗದಿರಿ” ಎಂದು ಹೇಳಿದ್ದಾರೆ. ಇತ್ತೀಚಿಗೆ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಕತ್ರಿಕಾ ಕೈಫ್ ಅವರ ಡೀಪ್‌ ಫೇಕ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next