Advertisement

Deep Fake; ತಮ್ಮದೇ ವೀಡಿಯೋ ನೋಡಿ ಸಚಿನ್‌ ತೆಂಡುಲ್ಕರ್‌ ದಿಗ್ಭ್ರಮೆ!

12:09 AM Jan 16, 2024 | Team Udayavani |

ಹೊಸದಿಲ್ಲಿ: ಕ್ರಿಕೆಟ್‌ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್‌ ತೆಂಡು ಲ್ಕರ್‌ ಅವರ ಡೀಪ್‌ಫೇಕ್‌ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಚಿನ್‌ ಆತಂಕ ವ್ಯಕ್ತಪಡಿಸಿ ದ್ದಾರೆ. ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ವೊಂದನ್ನು ಸಚಿನ್‌ ಅವರು ಪ್ರಚುರ ಪಡಿಸುತ್ತಿರುವಂತೆ ನಕಲಿ ವೀಡಿಯೋ ಸೃಷ್ಟಿಸಿ ಹರಿಬಿಡಲಾಗಿದೆ.

Advertisement

ಇದು ಗಮನಕ್ಕೆ ಬರುತ್ತಿದ್ದಂತೆಯೇ ಈ ಕುರಿತು ಎಕ್ಸ್‌ನಲ್ಲಿ ಕಳವಳ ವ್ಯಕ್ತಪಡಿಸಿ, ವೀಡಿಯೋಸಂದೇಶ ನೀಡಿರುವ ಸಚಿನ್‌ ತೆಂಡುಲ್ಕರ್‌, ಈ ವೀಡಿಯೋನಕಲಿ. ತಂತ್ರಜ್ಞಾನದ ದುರ್ಬಳಕೆ ಆಗುತ್ತಿರು ವುದನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ದೂರುಗಳು ಹಾಗೂ ಎಚ್ಚರಿಕೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಡೀಪ್‌ಫೇಕ್‌ ಹಾಗೂ ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಯಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ. ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ ಅರ್ಹತೆ ಬಗ್ಗೆ ತೆಂಡುಲ್ಕರ್‌ ಮಾತನಾಡುವುದನ್ನು ವೀಡಿಯೋ ತೋರಿಸುತ್ತದೆ. ಇದರಿಂದ ತುಂಬಾ ಸುಲಭವಾಗಿ ಹಣ ಸಂಪಾದಿಸಬಹುದು. ನನ್ನ ಮಗಳೂ ಇದನ್ನು ಬಳಸುತ್ತಿದ್ದಾಳೆ ಎಂದು ನನಗೆ ತಿಳಿದಿರಲಿಲ್ಲ ಎಂದು ಸಚಿನ್‌ ಹೇಳುವಂತೆ ನಕಲಿ ವೀಡಿಯೋಸೃಷ್ಟಿಸಲಾಗಿದೆ. ಸಚಿನ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಮಾಹಿತಿ ಹಾಗೂ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಕಠಿನ  ನಿಯಮ ರೂಪಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next