ಹೆಬ್ರಿ: ಶಾಸನ ಬದ್ಧ ಹಕ್ಕನ್ನು ಪಡೆಯಲು ರೈತರು ಇಂದು ಹೋರಾಡಬೇಕಾದ ಪರಿಸ್ಥಿತಿ ಬಂದಿ ರುವುದು ಬೇಸರದ ಸಂಗತಿ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರವಾಗಿದೆ ಎನ್ನುತ್ತಿದ್ದಾರೆ. ಆದರೆ ಸಮಸ್ಯೆ ಇನ್ನೂ ಜೀವಂತವಾಗಿದೆ. ಈ ಬಗ್ಗೆ ಸರಕಾರ ಸ್ಪಷ್ಟ ಉತ್ತರ ನೀಡಲಿ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು.
ಅವರು ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ಹೆಬ್ರಿಯಲ್ಲಿ ನಡೆದ ರೈತ ಮುಖಂಡರ ಮತ್ತು ರೈತರ ಸಭೆಯಲ್ಲಿ ರೈತರ ಸಮಸ್ಯೆಗಳಿಗೆ ಉತ್ತರಿಸಿ ಮಾತನಾಡಿದರು.
ಸಂಘದ ವಕ್ತಾರ ವಿಕಾಸ್ ಹೆಗ್ಡೆ, ಪ್ರತಿಯೊಬ್ಬ ರೈತರು ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಸಂಘಕ್ಕೆ ಮತ್ತಷ್ಟು ಶಕ್ತಿ ಬರುತ್ತದೆ ಎಂದರು.
ರೈತರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ರಾಜೀವ ಶೆಟ್ಟಿ, ಸಂಜೀವ ಶೆಟ್ಟಿ, ಬೇಳಂಜೆ ಹರ್ಷ ಶೆಟ್ಟಿ ರಮೇಶ್ ಶೆಟ್ಟಿ ಮೇಗದ್ದೆ, ರೈತ ಸಂಘದ ಹೆಬ್ರಿ ಮಂಡಲದ ಅಧ್ಯಕ್ಷ ನವೀನ್ ಅಡ್ಯಂತಾಯ ಮಾತನಾಡಿದರು.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಸೀತಾರಾಮ ಗಾಣಿಗ, ಜಿಲ್ಲಾ ರೈತ ಸಂಘದ ಚಾರ ಮಂಡಲದ ಅಧ್ಯಕ್ಷ ವಾದಿರಾಜ್ ಶೆಟ್ಟಿ, ಕುಚ್ಚಾರು ಮಂಡಲದ ಅಧ್ಯಕ್ಷ ಕಿರಣ್ ತೋಳಾರ್, ಮುಖಂಡರಾದ ಕೇದೂರು ಸದಾನಂದ ಶೆಟ್ಟಿ,ಶರತ್‌ಚಂದ್ರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಸಂತೋಷ, ಪ್ರದೀಪ್ ಬಲ್ಲಾಳ್, ಶರತ್ ಕುಮಾರ್ ಶೆಟ್ಟಿ, ಬೋಜ ಕುಲಾಲ್ ಉಪಸ್ಥಿತರಿದ್ದರು.
ನವೀನ್ ಅಡ್ಯಂತಾಯ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ ವಂದಿಸಿದರು. ಜಿಲ್ಲಾ ರೈತ ಸಂಘದ ಸದಸ್ಯ ಚೋರಾಡಿ ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.