Advertisement

ಪೂಜಾ ಇನ್ನು ಗೀತಾರ್ಥ ಪ್ರಿಯ ಶ್ರೀಜಿ

03:54 PM Apr 29, 2018 | |

ಹರಪನಹಳ್ಳಿ: ಪಟ್ಟಣದ ಶೇಷಜೀಹಸ್ತಮಲ್‌ ಜೈನ್‌ ವಸತಿ ನಿಲಯದ ಆವರಣದಲ್ಲಿ ಜೈನ ಭಗವತಿ ದೀಕ್ಷಾ ಸಮಾರಂಭವು ಶ್ರದ್ಧೆ ಮತ್ತು ಭಕ್ತಿಪೂರ್ವಕವಾಗಿ ನಡೆಯಿತು. ಜೈನ ಮುನಿಗಳು ಹಾಗೂ ಸಹಸ್ರಾರು ಸಮಾಜ ಬಾಂಧವರ ಸಮ್ಮುಖದಲ್ಲಿ ಕುಮಾರಿ ಪೂಜಾ ಸನ್ಯಾಸತ್ವವನ್ನು ಸ್ವೀಕರಿಸಿದರು.

Advertisement

ಆರಂಭದಲ್ಲಿ ಒಡವೆ ಹಾಗೂ ದುಬಾರಿ ಸೀರೆಯೊಂದಿಗೆ ಅಲಂಕೃತರಾಗಿದ್ದ ಅವರು ಮುನಿ ಹಾಗೂ ಸಾ ಧ್ವಿಗಳಿಗೆ ವಂದಿಸಿದರು. ನಂತರ ಶ್ವೇತವಸ್ತ್ರಧಾರಿಯಾಗಿ ಕಾಣಿಸಿಕೊಂಡು ಅಭಯ್‌ ಚಂದ್ರ ಸುರಿಶ್ವರಜಿ ಮಹಾರಾಜ್‌, ವಿಜಯ ಹಿರಚಂದ್ರ ಸುರಿಶ್ವರಜಿ ಸಾನ್ನಿಧ್ಯದಲ್ಲಿ ಶ್ರದ್ಧಾಂಗ ಪ್ರಿಯ ಶ್ರೀಜಿ ಹಾಗೂ ಕರುಣಾಂಗ ಪ್ರಿಯ ಶ್ರೀಜಿ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ಪಡೆದು ಅವರನ್ನು ಗುರುಗಳಾಗಿ ಸ್ವೀಕರಿಸಿದರು. ಪೂಜಾ ಅವರಿಗೆ ಗೀತಾರ್ಥ ಪ್ರಿಯ ಶ್ರೀಜಿ ಎಂದು ಮರುನಾಮಕರಣ ಮಾಡಲಾಯಿತು.

ಪೂಜಾ ಕುಮಾರಿ ಅಹಿಂಸಾ ವ್ರತ, ಬ್ರಹ್ಮಚರ್ಯ, ಸತ್ಯಸಂಧತೆ ಹಾಗೂ ಅಚೌರ್ಯ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಪ್ರಮಾಣ ಮಾಡಿದರು. ಮಗಳು ಸನ್ಯಾಸ ದೀಕ್ಷೆ ಸ್ವೀಕರಿಸುವಾಗ ತಂದೆ ಗಣಪತರಾಜ್‌ ಜೈನ್‌ ಅರೆಕ್ಷಣ ಭಾವುಕರಾದರು.

ಜೈನ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಾರುವುದರೊಂದಿಗೆ ಮಾನವೀಯತೆಯ ಗುಣಗಳನ್ನು ಪ್ರತಿಪಾದಿಸುವುದು ಸನ್ಯಾಸತ್ವ ಸ್ವೀಕರಿಸುವವರ ಪ್ರಮುಖ ಧರ್ಮ. ಎಲ್ಲ ಧರ್ಮಗಳನ್ನು ಗೌರವಿಸುತ್ತಲೇ ಸತ್ಯ ಮತ್ತು ಅಹಿಂಸೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಭಯ್‌ ಚಂದ್ರ ಸುರಿಶ್ವರಜಿ ಮಹಾರಾಜ್‌ ತಿಳಿಸಿದರು.

ಪೂಜಾ ತಂದೆ ಗಣಪತರಾಜ್‌ ಜೈನ್‌, ತಾಯಿ ಕಂಕುಬೇನ್‌, ಶ್ವೇತಾಂಬರ ಜೈನ್‌ ಸಮಾಜದ ಮುಖಂಡರಾದ ಧನರಾಜ ಜೈನ್‌, ಸುಮೀರ್‌ಮಲ್‌ ಜೈನ್‌, ವಿಜಯಕುಮಾರ್‌, ಮಹಾವೀರಕುಮಾರ್‌, ಗೌತಮಚಂದ್‌, ಅಶೋಕಕುಮಾರ್‌, ಕಾಂತಿಲಾಲ್‌, ಉತ್ತಮಚಂದ ಜೈನ್‌, ಶ್ರೀಪಾಲ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next