Advertisement

ಕಡಿಮೆಯಾಗುತ್ತಿದೆ ನಕ್ಸಲ್‌ ಚಟುವಟಿಕೆಗಳು

09:45 AM Oct 29, 2019 | Team Udayavani |

ಹೊಸದಿಲ್ಲಿ: ದೇಶದಲ್ಲಿ ನಕ್ಸಲ್‌ ಚಟುವಟಿಕೆಗಳ ಕುರಿತಾಗಿ ಕೇಂದ್ರ ಗೃಹ ಸಚಿವಾಲಯ ವರದಿಯೊಂದನ್ನು ಬಿಡುಗಡೆ ಮಾಡಿದೆ. ನಕ್ಸಲ್‌ ಚಟುವಟಿಕೆ ವರ್ಷದಲ್ಲಿ ಎಷ್ಟೆಷ್ಟು ಸಂಭವಿಸಿದೆ ಮತ್ತು ಯಾವೆಲ್ಲ ರಾಜ್ಯಗಳಲ್ಲಿ ಸಂಭವಿಸಿವೆ ಎಂಬ ವರದಿಯನ್ನು ಇದು ಒಳಗೊಂಡಿದೆ. ಇದರಲ್ಲಿ ಕಳೆದ 9 ವರ್ಷಗಳ ಸಂಪೂರ್ಣ ಚಿತ್ರಣವನ್ನು ಬಿಡಿಸಿಡಲಾಗಿದ್ದು, 9 ವರ್ಷಗಳಲ್ಲಿ ನಕ್ಸಲರ ಹಿಂಸಾಚಾರ ಕಡಿಮೆಯಾಗಿದೆ. ಅವರು ದಾಳಿಗಳು ಮತ್ತು ಅದರಲ್ಲಿ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿಯೂ ಇಳಿಕೆಯಾಗುತ್ತಿವೆ. ಆ ವರದಿಯ ಅಂಶಗಳನ್ನು ಇಲ್ಲಿ ನೀಡಲಾಗಿದೆ.

Advertisement

ಶೇ. 88ರಷ್ಟು

ನಕ್ಸಲರು ಸಂಘಟಿಸುವ ಶೇ. 88 ದಾಳಿಗಳಲ್ಲಿ ಹೆಚ್ಚಿನ ಸಾವು ನೋವುಗಳು ಸಂಭವಿಸುತ್ತದೆ. ಇಲ್ಲಿ ಬಹುತೇಕ ಮುಗ್ಧಜನರೇ ತಮ್ಮ ಪ್ರಾಣವನ್ನು ತೆತ್ತಿದ್ದಾರೆ. 2010ರ ಬಳಿಕ 3749 ಮಂದಿ ನಕ್ಸಲರ ಅಟ್ಟಹಾಸದಿಂದ ಬಲಿಯಾಗಿದ್ದಾರೆ. 2010ರ ಬಳಿಕ ನಡೆದ ಒಟ್ಟು ದಾಳಿಗಳ ಸಂಖ್ಯೆ 10,660.

ಎಲ್ಲೆಲ್ಲಿ ನಕ್ಸಲ್‌ ಚಟುವಟಿಕೆ

ಛತ್ತೀಸ್‌ಗಢ್‌, ಜಾರ್ಖಂಡ್‌, ಬಿಹಾರ, ಒಡಿಶಾ, ಪಶ್ಚಿಮ ಬಂಗಾಲ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ.

Advertisement

1,370

2010ರ ಬಳಿಕ ಛತ್ತೀಸ್‌ಗಢ್‌ದಲ್ಲಿ 3,769 ದಾಳಿಗಳು ನಡೆದಿದ್ದು, ಅವುಗಳ ಪರಿಣಾಮವಾಗಿ1,370 ಮಂದಿ ಬಲಿಯಾಗಿದ್ದಾರೆ. ಜಾರ್ಖಂಡ್‌ನ‌ಲ್ಲಿ 2010ರ ಬಳಿಕ ಒಟ್ಟು 3,358 ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ 997 ಮಂದಿಬಲಿಯಾಗಿದ್ದಾರೆ. ಬಿಹಾರದಲ್ಲಿ 1,526 ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ 387 ಮಂದಿಪ್ರಾಣ ತೆತ್ತವರು.

ಶೇ. 71.7 ಪಾಲು

ಒಟ್ಟು ಪ್ರಕರಣಗಳ ಪೈಕಿ ಛತ್ತೀಸ್‌ಗಢ್‌ ಮತ್ತು ಜಾರ್ಖಂಡ್‌ ರಾಜ್ಯಗಳು ಶೇ. 71.7 ಪ್ರಕರಣಗಳನ್ನು ಕಂಡಿವೆ. ಒಟ್ಟು ಸಾವನ್ನಪ್ಪಿದವರಲ್ಲಿ 81.7 ಶೇ ಜನ ಇದೇ ಎರಡು ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಉಳಿದ ಪ್ರಕರಣಗಳನ್ನು ಇತರ ರಾಜ್ಯಗಳು ಹಂಚಿಕೊಂಡಿವೆ.

ಇಳಿಕೆ

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ನಕ್ಸಲ್‌ ಪ್ರಕರಣಗಳು ಕಡಿಮೆಯಾಗುತ್ತಿವೆ. 2013ರಲ್ಲಿ 1,136 ಪ್ರಕರಣಗಳಲ್ಲಿ 397 ಮಂದಿ ಬಲಿಯಾಗಿದ್ದರೆ, 2018ರಲ್ಲಿ 833 ಪ್ರಕರಣಗಳು ನಡೆದಿದ್ದು, 240 ಮಂದಿ ಸಾವನ್ನಪ್ಪಿದ್ದಾರೆ. 2013ರಲ್ಲಿ 10 ರಾಜ್ಯಗಳ 76 ಜಿಲ್ಲೆಗಳಲ್ಲಿ ನಕ್ಸಲರು ತಮ್ಮ ಅಟ್ಟಹಾಸ ತೋರಿಸುತ್ತಿದ್ದರು. ಈ 76 ಜಿಲ್ಲೆಗಳ 330 ಪೊಲೀಸ್‌ ಸ್ಟೇಶನ್‌ಗಳು ನಕ್ಸಲ್‌ ಪೀಡಿತ ಪ್ರದೇಶಗಳಲ್ಲೇ ಇದ್ದವು.

2018ರಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗಿದ್ದು. 10 ರಾಜ್ಯಗಳ ಪೈಕಿ 2 ರಾಜ್ಯಗಳು ನಕ್ಸಲ್‌ ಚಟುವಟಿಕೆ ಮುಕ್ತರಾಜ್ಯವಾಗಿದೆ. 2013ರಲ್ಲಿ ಇದ್ದ 76 ಜಿಲ್ಲೆಗಳ ಪೈಕಿ ಕೇವಲ 60 ಜಿಲ್ಲೆಗಳು ಮಾತ್ರ ನಕ್ಸಲ್‌ ವಲಯದಲ್ಲಿವೆ. ಈ ಭಾಗಗಳ 251 ಪೊಲೀಸ್‌ ಸ್ಟೇಶನ್‌ಗಳು ಮಾತ್ರ ನಕ್ಸಲ್‌ ವಲಯದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next