Advertisement

ಸಮೂಹ ಸಾರಿಗೆ ಬಳಕೆ ಇಳಿಕೆ; ಮಾಲಿನ್ಯ ಏರಿಕೆ

12:28 PM Nov 10, 2020 | Suhan S |

ಬೆಂಗಳೂರು: ಕೋವಿಡ್ ಭೀತಿಯಿಂದಾಗಿ ನಗರ‌ ನಿವಾಸಿಗಳು ಸಮೂಹ ಸಾರಿಗೆ ಬಳಸುವುದು ಕಡಿಮೆ ಮಾಡಿದ್ದು, ಸ್ವಂತ ವಾಹನಗಳ ‌ ಬಳಕೆ ಹೆಚ್ಚಳ ‌, ಕಾಮಗಾರಿಗಳ ಧೂಳಿನಿಂದ ವಾಯು ಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.

Advertisement

ನಗರದ ‌ ವಿವಿಧ ಪ್ರದೇಶಗಳಲ್ಲಿ 2019ರ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ಅವಧಿಗಿಂತ 2020ರ ಆಗಸ್ಟ್ ಮತ್ತು ಸೆಪ್ಟೆಂಬರ್‌ ಅವಧಿಯಲ್ಲಿ ವಾಯು ಮಾಲಿನ್ಯಪ್ರಮಾಣಹೆಚ್ಚಾಗಿರುವುದು ಸೆಂಟರ್‌ ಆಫ್ ಸ್ಟಡಿ ಆಫ್ ಸೈನ್ಸ್‌, ಟೆಕ್ನಾಲಜಿ ಆ್ಯಂಡ್‌ ಪಾಲಿಸಿ (ಸಿಎಸ್‌ಟಿ ಇಪಿ)ಸಂಸ್ಥೆಯ ಅಧ್ಯಯನ ‌ ವರದಿಯಲ್ಲಿ ಬೆಳಕಿಗೆ ಬಂದಿದೆ.

ನಗರದ‌ ವಿವಿಧ‌ ಪ್ರದೇಶ ‌ಗಳಲ್ಲಿ ಗಾಳಿಯಲ್ಲಿ ಪಿಎಂ 2.5(2.5 ಮೈಕ್ರಾ ನ್‌ಗಿಂತ ಕಡಿಮೆ ಗಾತ್ರದ ‌) ಮಾಲಿನ್ಯ ಕಾರಕ ‌ ಕಣಗ ‌ಳು ಹೆಚ್ಚಾಗಿರುವುದು ಕಂಡುಬಂದಿದೆ. ಅ.29ರಿಂದ ಸೆ.11ರವರೆಗಿನ ಅವಧಿಯಲ್ಲಿನ ವಾಯು ಮಾಲಿನ್ಯ ಪ್ರಮಾಣದ ಹಿಂದಿನ ವರ್ಷಕ್ಕಿಂತ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಪಿಎಂ 2.5, ಪಿಎಂ 10 ಮತ್ತು ನೈಟ್ರೋಜನ್‌ ಆಕ್ಸೈಡ್‌ ಪ್ರಮಾಣವನ್ನು ಸಹ ಹೆಚ್ಚಾಗಿರುವುದು ಸಾಬೀತಾಗಿದೆ.

ಲಾಕ್‌ಡೌನ್‌ ವೇಳೆ ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ಗಣ ನೀಯವಾಗಿ ಇಳಿದಿತ್ತು. ಅದರೆ, ಅನ್‌ ಲಾಕ್‌ ಬಳಿಕ ಮಾಲಿನ್ಯ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಹೆಬ್ಬಾಳ ‌ ರಾಷ್ಟ್ರೀಯ ಹೆದ್ದಾರಿ 47ರಲ್ಲಿ ವಾಹನ ಸಂಚಾರ ಹೆಚ್ಚಿದ್ದಾಗ (2020ರ ಅ.22ರಿಂದ ‌ ಸೆ.4) ಮಾಲಿನ್ಯ 2019ಕ್ಕಿಂತ ಧೂಳಿನ ಪ್ರಮಾಣ, ಹೊಗೆ ಪ್ರಮಾಣದಿಂದ ‌ ಮಾಲಿನ್ಯ ಹೆಚ್ಚಾಗಿದೆ.

ಸಮೂಹ ಸಾರಿಗೆ ಬಳಕೆ ಇಳಿಕೆ: ನಗರ‌ದಲ್ಲಿ ಕೋವಿಡ್ ಮುನ್ನ ನಿತ್ಯ ಅಂದಾಜು 30-35 ಲಕ್ಷ ಜನ ಬಿಎಂಟಿಸಿ ಸೇವೆ ಬಳಸುತ್ತಿದ್ದರು. ಆದರೆ, ಕೋವಿಡ್ ಬಳಿಕ 15 ರಿಂದ‌ 16 ಲಕ್ಷ ಜನ (ಶೇ.50 ರಷ್ಟು) ಜನ ಮಾತ್ರ ಬಿಎಂಟಿಸಿ ಬಳಸುತ್ತಿದ್ದಾರೆ. ಸೋಂಕು ಭೀತಿಯಿಂದ ಸಮೂಹ ಸಾರಿಗೆ ಬಳಸಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ.

Advertisement

ನೈಟ್ರೋಜನ್‌ ಆಕ್ಸೈಡ್‌ ಪ್ರಮಾಣ ಹೆಚ್ಚಳ :  ನಗರದ ಕೆಲವು ನಿರ್ದಿಷ್ಟ ಭಾಗದಲ್ಲಿ ಪಿಎಂ2.5ನ ಪ್ರಮಾಣ ಹೆಚ್ಚಳವಾಗಿದೆ. ಇದೇ ವೇಳೆ ವಾಹನಗಳಿಂದ ಹೊರ ಹೊಮ್ಮುವ ಹೊಗೆಯಿಂದಾಗಿ ಗಾಳಿಯಲ್ಲಿ ನೈಟ್ರೋಜನ್‌ ಆಕ್ಸೈಡ್‌ ಪ್ರಮಾಣ ಸಹ ಹೆಚ್ಚಳವಾಗಿದೆ. ಆದರೆ, ನೈಟ್ರೋಜನ್‌ ಆಕ್ಸೈಡ್‌ ಪ್ರಮಾಣ ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇದಕ್ಕಾಗಿ ನಗರದಲ್ಲಿ ವಾಹನಗಳ ಬಳಕೆಯ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಸಮೂಹ ಸಾರಿಗೆ ಬಳಕೆ ಈ ಹಿಂದೆ ಮತ್ತು ಈಗ ಇರುವುದು ಅಧ್ಯಯನ ಮಾಡಬೇಕಿದೆ ಎನ್ನುತ್ತಾರೆ ಸಿಎಸ್‌ಟಿಇಪಿ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ. ಪ್ರತಿಮಾ ಸಿಂಗ್‌.

ಏನಿದು ಪಿಎಂ 2.5 ಮತ್ತು ಪಿಎಂ 10? :  ಪಿಎಂ 2.5ನ ಸಂಕ್ಷಿಪ್ತ ರೂಪ ಪರ್ಟಿಕ್ಯೂಲರ್‌ ಮ್ಯಾಟರ್‌ಆಗಿದೆ. ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳನ್ನು ಗುರುತಿಸಲು ಪಿಎಂ 2.5 ಮತ್ತು ಪಿಎಂ 10 ಎಂದು ಉಲ್ಲೇಖ ಮಾಡಲಾಗುತ್ತದೆ. ಗಾಳಿಯಲ್ಲಿ ಪಿಎಂ 2.5 ಮತ್ತು ಪಿಎಂ 10 ಮಾನದಂಡಗಳ ಆಧಾರದ ಮೇಲೆ ಮಾಲಿನ್ಯ ಪ್ರಮಾಣ ಗುರುತಿಸಲಾಗುತ್ತದೆ. ಇನ್ನು ಗಾಳಿಯಯಲ್ಲಿರುವ ಮಾಲಿನ್ಯಕಾರಕ ಕಣಗಳ ಆಧಾರದ ಮೇಲೆ ಪಿಎಂ 2.5 ಮತ್ತು ಪಿಎಂ10 ಎಂದು ವರ್ಗೀಕರಿಸಲಾಗುತ್ತದೆ.

ಉಳಿದ ನಗರಗಳಿಗಿಂತ ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆ ಇದೆ. ವಾರ್ಷಿಕ ಸರಾಸರಿ ಪಿಎಂ 10 ಪ್ರಮಾಣವು 89ರಲ್ಲಿ ಇದೆ. ಇದನ್ನು ಮತ್ತಷ್ಟು ಇಳಿಸಲುಯೋಜನೆ ರೂಪಿಸಿಕೊಳ್ಳುತ್ತೇವೆ. ಇದಕ್ಕಾಗಿ ಕೇಂದ್ರ ಸರ್ಕಾರ 279 ಕೋಟಿ ರೂ. ಆರ್ಥಿಕ ನೆರವು ನೀಡುತ್ತಿದೆ. ವಿಜಯಕುಮಾರ್‌ ಗೋಗಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next