Advertisement

ಎಚ್‌ಐವಿ ಸೋಂಕು ಪ್ರಮಾಣ ಇಳಿಕೆ

10:48 AM Dec 01, 2019 | Suhan S |

ದೇವನಹಳ್ಳಿ : ಜಿಲ್ಲೆಯಲ್ಲಿ 2007 ರಿಂದ 2019 ನವೆಂಬರ್‌ ತಿಂಗಳವರೆಗೆ ಒಟ್ಟು 3,431 ಜನರಿಗೆ ಎಚ್‌ಐವಿ ಸೋಂಕು ದೃಢ ಪಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾ ತಿಳಿಸಿದರು. ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತ ನಾಡಿದರು.

Advertisement

ಗಣನೀಯ ಇಳಿಕೆ: ಕಳೆದ ಐದು ವರ್ಷಗಳಿಂದ ಎಚ್‌ಐವಿ ಸೋಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದ್ದು, ಈ ವರ್ಷದಲ್ಲಿ ಅಕ್ಟೋಬರ್‌ವರೆಗೆ ಹತ್ತು ಜನ ಗರ್ಭಿಣೀಯರು ಸೇರಿ ಒಟ್ಟು 162ಜನರಿಗೆ ಎಚ್‌ ಐವಿ ಸೋಂಕು ಇರುವುದು ದೃಢ ಪಟ್ಟಿದೆ. ಜಿಲ್ಲೆಯಲ್ಲಿ

2007 ರಿಂದ ಅ.2019 ವರೆಗೆ ಹೊಸಕೋಟೆಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು 1082 ಎಚ್‌ ಐವಿ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಜನರಲ್ಲಿ ಎಚ್‌ ಐವಿ ಸಂಬಂಧಿಸಿದಂತೆ ನಿರಂತರ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಜನ ಸಾಮಾನ್ಯರಿಗೆ ಎಚ್‌ಐವಿ ಸೋಂಕು ಮತ್ತು ಸೋಂಕಿನೊಂದಿಗೆ ಬದುಕುತ್ತಿರುವವರ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯದ ಭಾವನೆಗಳು ಸೋಂಕಿತರ ಬದುಕಲ್ಲಿ ಕೀಳರಿಮೆ, ಜಿಗುಪ್ಸೆ ಹುಟ್ಟಿಸಿದೆ. ಎಚ್‌ಐವಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇ ಶದಿಂದ ಪ್ರತಿವರ್ಷ ಡಿಸೆಂಬರ್‌ 1 ರಂದು ವಿಶ್ವ ಏಡ್ಸ್‌ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಾಳೆ ಏಡ್ಸ್‌ ದಿನಾಚರಣೆ : ಜಿಲ್ಲಾಡಳಿತ, ಜಿಪಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನೆಲಮಂಗಲ ಶ್ರೀ ಬಸವೇಶ್ವರ ಸಮೂಹ ವಿದ್ಯಾ ಸಂಸ್ಥೆವತಿಯಿಂದ ಡಿ.2 ರಂದು ಬೆಳಿಗ್ಗೆ 11 ಗಂಟೆನೆಲಮಂಗಲದ ಪವಾಡ ಬಸವಣ್ಣ ದೇವರಮಠದಲ್ಲಿ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ10 ಗಂಟೆಗೆ ಜಾಗೃತಿ ಜಾಥಾಗೆ ಚಾಲನೆ ನೀಡಲಾಗುವುದು. ಪವಾಡ ಬಸವಣ್ಣ ದೇವರ ಮಠದಬಸವೇಶ್ವರ ಸಮೂಹ ವಿಧ್ಯಾ ಸಂಸ್ಥೆಯ ಅಧ್ಯಕ್ಷ ಶ್ರೀ ಸಿದ್ಧ ಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಪಿ.ಎನ್‌.ರವೀಂದ್ರ, ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಎನ್‌.ಎಮ್‌ .ನಾಗರಾಜು, ಜಿಲ್ಲಾ ಕಾನೂನು ಸೇವೆಗಳಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌ ನಟರಾಜ್‌, ಮತ್ತಿತತರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕ್ಷಯ ರೋಗದಜಿಲ್ಲಾ ನಿಯಂತ್ರಣಾಧಿಕಾರಿ ಡಾ.ಶಕಿಲಾ, ಏಡ್ಸ್‌ ಜಿಲ್ಲಾ ನಿಯಂತ್ರಣಾಧಿಕಾರಿ ಸರಿತಾ ಹೆಗ್ಡೆ, ಸೇರಿದಂತೆ ಮತ್ತಿತತರು ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next