Advertisement

ಹೊಸ ಸೋಂಕು ಪ್ರಕರಣಗಳ ದಾಖಲಾತಿಯಲ್ಲಿ ಇಳಿಕೆ

01:43 AM Aug 27, 2020 | mahesh |

ಮಣಿಪಾಲ: ಸೋಂಕು ಪೀಡಿತ ರಾಷ್ಟ್ರಗಳಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಕೆಲ ರಾಷ್ಟ್ರಗಳಲ್ಲಿ ಹೊಸ ಸೋಂಕು ಪ್ರಕರಣಗಳ ಪ್ರಮಾಣ ಕಡಿಮೆ ಆಗುತ್ತಿದೆ. ದಕ್ಷಿಣ ಆಫ್ರಿಕಾ, ರಷ್ಯಾ, ಪಾಕಿಸ್ಥಾನ, ಸೌದಿ ಅರೇಬಿಯಾದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು,

Advertisement

ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಬಾರ್‌, ಜಿಮ್, ಚಿತ್ರಮಂದಿರಗಳ ಕಾರ್ಯಾಚರಣೆ ಮೇಲೆ ನಿಷೇಧ ಸೇರಿದಂತೆ ಇತರೆ ನಿಬಂಧನೆಗಳು ಸೋಂಕಿತರು ಕಡಿಮೆಯಾಗಲು ಒಂದು ಕಾರಣವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜುಲೈ ಮೊದಲ ವಾರದಿಂದ ಆಗಸ್ಟ್ 22ರ ವರೆಗಿನ ಅಂಕಿ ಅಂಶವನ್ನು ಗಮನಿಸಿದರೆ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ಥಾನದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗಿವೆ.

ದಕ್ಷಿಣ ಆಫ್ರಿಕಾದಲ್ಲಿ ಜುಲೈ 15ರಂದು 12,341 ಪ್ರಕರಣಗಳು ಪತ್ತೆಯಾಗಿದ್ದವು, ಈಗ ಅದು 3342ಕ್ಕೆ ಬಂದು ನಿಂತಿದೆ.
ರಷ್ಯಾದಲ್ಲಿ ಜುಲೈನಲ್ಲಿ ಪ್ರತಿದಿನ 6 ಸಾವಿರ ಪ್ರಕರಣಗಳಿದ್ದವು, ಆದರೀಗ ಆ ಪ್ರಮಾಣ 5 ಸಾವಿರಕ್ಕೆ ಇಳಿದಿದೆ.

ಇನ್ನು ಪಾಕಿಸ್ಥಾನದಲ್ಲಿ ಜುಲೈನಲ್ಲಿ ದೈನಂದಿನ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು, ಆದರೆ ಸದ್ಯ 58ರಿಂದ 620ಕ್ಕೆ ಬಂದು ನಿಂತಿದೆ. ಸೌದಿ ಅರೇಬಿಯಾದಲ್ಲಿ ಜುಲೈನಲ್ಲಿ 3700 ಪ್ರಕರಣಗಳಿದ್ದವು, ಆಗಸ್ಟ್‌ನಲ್ಲಿ 1200 ಪ್ರಕರಣಗಳು ದಾಖಲಾಗಿವೆ.
ಆದರೆ ಸ್ಪೇನ್‌, ಇಟಲಿ, ಫ್ರಾನ್ಸ್‌ನ ದೇಶಗಳಲ್ಲಿ ಮಾತ್ರ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರ್ಥಿಕವಾಗಿ ಈ ದೇಶಗಲು ಹಿನ್ನಡೆ ಕಾಣುತ್ತಿವೆ.

Advertisement

ಕೋವಿಡ್‌ ಪತ್ರಕರ್ತರು ಹೆಚ್ಚು ಸಾವಿಗೀಡಾಗುತ್ತಾರೆ: ಬ್ರೆಜಿಲ್‌ ಅಧ್ಯಕ್ಷ
ಸಾವೋಪೌಲೊ: ದೇಶದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಪತ್ರಕರ್ತರ ವಿರುದ್ಧ ಟೀಕೆ ಮಾಡಿರುವ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸೊನಾರೊ, ಪತ್ರಕರ್ತರು ದೈಹಿಕವಾಗಿ ದುರ್ಬಲರು ಎಂದು ಬಣ್ಣಿಸಿದ್ದು, ಅವರು ಗಟ್ಟಿಮುಟ್ಟಾದ ದೇಹಗಳನ್ನು ಹೊಂದಿಲ್ಲದ ಕಾರಣ ಕೊರೊನಾ ಸೋಕಿನಿಂದಾಗಿ ಸಾಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಮೊದಲಿನಿಂದಲೂ ಪತ್ರಕರ್ತರೊಂದಿಗೆ ಜಟಾಪಟಿ ಮಾಡುತ್ತಾ ಬಂದಿರುವ ಬೊಲ್ಸೊನಾರೊ ಮಾಧ್ಯಮ ಪ್ರತಿನಿಧಿಗಳೊಂದಿಗೆ ವೈಮನಸ್ಸನ್ನು ಹೊಂದಿದ್ದು, ಅಲ್ಲಿನ ಕೆಲ ನಿರ್ದಿಷ್ಟ ಸ್ಥಳೀಯ ಪತ್ರಿಕೆಗಳು ಮತ್ತು ಪತ್ರಕರ್ತರ ವಿರುದ್ಧ ತಮ್ಮ ಕೋಪವನ್ನು ತೋರ್ಪಡಿಸುತ್ತಲೇ ಬಂದಿದ್ದಾರೆ.
ಇದೀಗ ದೇಶದಲ್ಲಿ ನಡೆದ ಕೊರೊನಾ ಬಿಕ್ಕಟ್ಟು ನಿರ್ವಹಣ ಸಭೆಯಲ್ಲಿ ಮಾತನಾಡುತ್ತಾ, ಕೊರೊನಾ ಸೋಂಕಿನಿಂದ ಪತ್ರಕರ್ತರು ಸಾವಿಗೀಡಾಗುತ್ತಾರೆ ಎಂದು ಹೇಳಿದ್ದಾರೆ. ನಾನು ಹಿಂದೆ ಆ್ಯತ್ಲೆಟ್‌ ಆಗಿದ್ದುದರಿಂದ ಇತ್ತೀಚೆಗೆ ಕೊರೊನಾ ಸೋಂಕು ವಿರುದ್ಧ ಹೋರಾಡುವುದು ಸುಲಭ ವಾಯಿತು. ಆದರೆ ನಾನು ಆ್ಯತ್ಲೆಟ್‌ ಆಗಿದ್ದೆ ಎಂದು ಹೇಳಿದಾಗ ಪತ್ರಿಕೆಗಳು ತಮಾಷೆ ಮಾಡಿವೆ. ಆದರೆ, ನಿಮ್ಮಂಥ ಬೊಜ್ಜು ದೇಹದ ಪತ್ರಕರ್ತರಿಗೆ ಕೊರೊನಾ ಸೋಂಕು ಬಂದರೆ ನೀವು ಬದುಕುವ ಸಂಭವನೀಯತೆ ಅತ್ಯಲ್ಪ ಎಂದು ಬೊಲ್ಸೊನಾರೊ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next