ಪಣಜಿ: ಗೋವಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮತ್ತು ಕೋವಿಡ್ ನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಫ್ರ್ಯೂ ಸಡಿಲಿಕೆ ಮಾಡುವ ಸೂಚನೆ ಲಭ್ಯವಾಗುತ್ತಿದೆ. ಸರ್ಕಾರವು ಎಲ್ಲ ಸರ್ಕಾರಿ ನೌಕರರು ಖಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಈಗಾಗಲೇ ಸೂಚನೆ ನೀಡಿದೆ. ಇಷ್ಟೇ ಅಲ್ಲದೆಯೇ ಶಿಕ್ಷಣ ಇಲಾಖೆಯು ಕೂಡ ಎಲ್ಲ ಶೈಕ್ಷಣಿಕ ಕರ್ಮಚಾರಿಗಳು ಸೋಮವಾರದಿಂದ ಖಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.
ಜೂನ್ 7 ರಂದು ರಾಜ್ಯದಲ್ಲಿ ಜಾರಿಯಲ್ಲಿರುವ ಕಫ್ರ್ಯೂ ಕಾಲಾವಧಿ ಮುಕ್ತಾಯಗೊಳ್ಳಲಿದೆ. ರಾಜ್ಯ ಸರ್ಕಾರವು ಸದ್ಯ ಕೈಗೊಳ್ಳುತ್ತಿರುವ ನಿರ್ಣಯವನ್ನು ಗಮನಿಸಿದರೆ ರಾಜ್ಯದಲ್ಲಿ ಕಫ್ರ್ಯೂ ಸಡಿಲಿಕೆ ಮಾಡುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.
ರಾಜ್ಯದಲ್ಲಿ ಮುನ್ಸಿಪಲ್ ಮಾರುಕಟ್ಟೆ ಹೊರತುಪಡಿಸಿ ಪ್ರತ್ಯೇಕವಾಗಿರುವ ಅಂಗಡಿಗಳನ್ನು ತೆರೆಯಲು ಜೂನ್ 8 ರಿಂದ ಅವಕಾಶ ನೀಡುವ ಸಾಧ್ಯತೆಯಿದೆ. ಹೋಟೆಲ್‍ಗಳಲ್ಲಿ ಶೇ 50 ರಷ್ಟು ಜನರಿಗೆ ಅವಕಾಶ ನೀಡುವ ಸಾಧ್ಯತೆಯಿದೆ, ನಿಗಧಿತ ಸಂಖ್ಯೆಯಲ್ಲಿ ಜನರು ಸೇರಿ ಸರಳ ವಿವಾಹ ನಡೆಸಲು ಪರವಾನಗಿ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.
ಈಗಾಗಲೇ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕಫ್ರ್ಯೂ ಸಡಿಲಿಕೆ ಅಥವಾ ಮುಂದುವರೆಸುವ ನಿಟ್ಟಿನಲ್ಲಿ ಟಾಸ್ಕ ಪೋರ್ಸ ಸಮೀತಿಯೊಂದಿಗೆ ಬೈಠಕ್ ನಡೆಸಿ ಚರ್ಚಿಸಿದ್ದಾರೆ. ಗೋವಾದಲ್ಲಿ ಕರೋನಾ ಪೋಜಿಟಿವಿಟಿ ದರ ಈ ಹಿಂದೆ ಶೇ 52 ಕ್ಕೆ ತಲುಪಿತ್ತು ಅದು ಈಗ ಶೇ 14.10 ಕ್ಕೆ ಇಳಿಕೆಯಾಗಿದೆ.