ನವದೆಹಲಿ: ದೆಹಲಿಯ ಮೆಟ್ರೋ ನಿರ್ಮಾಣ ಪ್ರದೇಶದಲ್ಲಿ ಮಹಿಳೆಯ ಕೊಳೆತ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶನಿವಾರ ಆಗ್ನೇಯ ದೆಹಲಿಯ ಸರಾಯ್ ಕಾಲೆ ಖಾನ್‌ನಲ್ಲಿರುವ ರಾಪಿಡ್ ಮೆಟ್ರೋ ನಿರ್ಮಾಣದ ಸ್ಥಳದ ಸಮೀಪ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಸುತ್ತಿಟ್ಟ ಸ್ಥತಿಯಲ್ಲಿ ಮಹಿಳೆಯ ಕೊಳೆತ ದೇಹದ ಭಾಗಗಳು ಮತ್ತು ಕೂದಲುಗಳು ಪತ್ತೆಯಾಗಿದ್ದು ಘಟನೆಗೆ ಸಂಬಂಧಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಕೊಳೆತ ದೇಹದ ಭಾಗಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ಉಪ ಪೊಲೀಸ್ ಆಯುಕ್ತ (ಆಗ್ನೇಯ) ರಾಜೇಶ್ ಡಿಯೋ ಮಾತನಾಡಿ ರಾಪಿಡ್ ಮೆಟ್ರೋ ನಿರ್ಮಾಣದ ಸ್ಥಳದಲ್ಲಿ ಕೆಲವು ದಿನಗಳ ಹಿಂದೆ ಯಾರೋ ಕಿಡಿಗೇಡಿಗಳು ಮಹಿಳೆಯನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಬಿಸಾಕಿರುವುದು ಕಂಡುಬಂದ್ದಿದ್ದು ಮಹಿಳೆ ಯಾರು ಯಾವ ಊರು ಎಂಬ ಮಾಹಿತಿ ಇನ್ನಷ್ಟೇ ಪತ್ತೆಯಾಗಬೇಕಿದೆ ಅಲ್ಲದೆ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು ದೇಹದ ಕೆಲವು ಭಾಗಗಳು ಮಾತ್ರ ಚೀಲದೊಳಗೆ ಇದ್ದಿದ್ದು ಉಳಿದ ಭಾಗಗಳು ಪತ್ತೆಯಾಗಬೇಕಿದೆ ಎಂದು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಅಪರಾಧ ಪತ್ತೆ ತಂಡ ಮತ್ತು ವಿಧಿವಿಜ್ಞಾನ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದು. ಮುಂದಿನ ಪ್ರಕ್ರಿಯೆಗಳಿಗಾಗಿ ಅವಶೇಷಗಳನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ವರ್ಗಾಯಿಸಲಾಗಿದೆ.
ಸದ್ಯ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದು ಫ್ಲೋರೆನ್ಸಿಕ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗುರುವಾಯೂರ್ ದೇವಸ್ಥಾನದ ‘ಮೇಲ್ಶಾಂತಿ’ ಆಗಿ ಆಯ್ಕೆಯಾದ ಆಯುರ್ವೇದ ವೈದ್ಯ