Advertisement
ಪ್ರಜಾಪತಿಯು ಮೂವರಿಗೂ “ದ’ ಎಂಬ ಅಕ್ಷರವನ್ನು ಉಪದೇಶಿಸಿ ನಂತರ ಅವರಲ್ಲಿ “ನೀವು ಅರಿತಿರಾ?’ ಎಂದು ಪ್ರಶ್ನಿಸಿದನು. ದೇವತೆಗಳು “ಹೌದು’ “ದಾಂತರಾಗಿರಿ’ ಎಂದು ಹೇಳುತ್ತಿದ್ದೀಯೆ ಎಂದರು. ಮಾನವರು “ಹೌದು ನಾವೂ ತಿಳಿದೆವು ದಾನಿಗಳಾಗಿರಿ ಎನ್ನುತ್ತಿದ್ದೀಯಲ್ಲವೇ? ಎಂದರು. ಅಸುರರು “ಹೌದು ನಾವೂ ತಿಳಿದುಕೊಂಡೆವು ದಯಾವಂತರಾಗಿರಿ’ ಎಂದು ಉಪದೇಶಿಸಿದಿಯಲ್ಲವೇ?’ ಎಂದರು. ಪ್ರಜಾಪತಿಯು ಸಂತೋಷದಿಂದ “ಹೌದು ನೀವೆಲ್ಲರೂ ಚೆನ್ನಾಗಿ ತಿಳಿದಿರಿ’ ಎಂದು ಸಮ್ಮತಿಸಿದನು. ಉಪನಿಷತ್ತಿನ ಅತ್ಯಂತ ಮೌಲ್ಯಯುತವಾದ ಈ ವಿಚಾರಕ್ಕೆ “ದಮಾದಿ ಸಾಧನ ತ್ರಯವಿಧಿ’ ಎಂದು ಹೇಳುತ್ತಾರೆ. ಯಾವ ಗುಣದ ಕೊರತೆಯು ಯಾರಲ್ಲಿದೆಯೋ ಅವರು ಅದನ್ನು ಕಷ್ಟದಿಂದ ಸಾಧಿಸಿ ಕೊಳ್ಳಬೇಕು ಎನ್ನುವುದು ಇಲ್ಲಿನ ನೀತಿಯಾಗಿದೆ.
Related Articles
Advertisement
ಕೀರ್ತಿಯ ಬೆನ್ನೇರುವಾತ ಸಾಕಷ್ಟು ಗೌರವಾದರ ಪಡೆದ ನಂತರವೂ ಮತ್ತಷ್ಟು ದೊರಕಲಿ, ಇನ್ನಷ್ಟು ಲಭಿಸಲಿ ಎಂದು ಬಯಸುತ್ತಾನೆ. ಬಯಕೆಯ ಶಮನಕ್ಕಾಗಿ ನೈಜ ಅರ್ಹತೆ ಉಳ್ಳವನನ್ನು ಮುಟ್ಟುತ್ತಾನೆ. ಧನದಾಹಿಯೋರ್ವಧಾರಾಳ ಸಂಪತ್ತಿದ್ದರೂ ಅದನ್ನು ನೂರ್ಮಡಿಗೊಳಿಸುವುದೆಂತು ಎಂದು ಯೋಚಿಸುತ್ತಾ ಹೇಯ ಕೃತ್ಯಗಳತ್ತ ವಾಲುತ್ತಾನೆ. ಹೆಣ್ಣು, ಮಣ್ಣು, ಹೊನ್ನಿಗಾಗಿ ನಡೆದ ಐತಿಹಾಸಿಕ ಕದನಗಳ, ರಕ್ತಪಾತದ ಅಧ್ಯಯನವು ನಮ್ಮನ್ನು ಬಾಹುಬಲಿ ಯನ್ನಾಗಿಸುವ ಬದಲು ರಾವಣ, ಧುರ್ಯೋಧನನಾಗಿಸುತ್ತಿರುವುದೇ ದುರಂತವಲ್ಲವೇ? ಇಂದು ದೇವರ ದಾಸೋಹಗಳೇ ಹಾಲಾಹಲವಾಗುತ್ತದೆ. ತ್ಯಾಗದ ಸಂಕೇತವೆಂದು ಪರಿಗಣಿಸಲ್ಪಟ್ಟ “ಕಾಷಾಯ ವಸ್ತ್ರ’ವು ಷಡ್ವರ್ಗಗಳ ಪರಮಾವಧಿಯನ್ನು ಮರೆಗೊಳಿಸುವ ಒಂದು ಮರೆಪರದೆಯಂತಾಗಿದೆ. ದೇವರು, ಧರ್ಮ, ಶಾಸ್ತ್ರ, ನೀತಿ, ರೀತಿ ಇತ್ಯಾದಿಗಳೆಲ್ಲಾ ಅನುಷ್ಠಾನ ರಹಿತರ ಬಾಯಿಂದ ಹೊರಡುವ ಒಣ ಉಪದೇಶವಾಗಿದೆ. ‘ ‘ We talk like philosophers but act like fools’ ಎಂಬ ಆಂಗ್ಲ ಗಾದೆಯಂತೆ ನಮ್ಮ ನಾಟಕದ ಪಾತ್ರದಂತಹ ಸಾಧು ಸಂತರು, ಜನನಾಯಕರು, ಬುದ್ಧಿಜೀವಿಗಳು ಹೆಚ್ಚೇಕೆ ನಾವೆಲ್ಲರೂ ವರ್ತಿಸುತ್ತಿದ್ದೇವೆ. ಸದುಪದೇಶ ಪಡೆದ ಬೇಡ ವಾಲ್ಮೀಕಿಯಾದ ಈ ದೇಶದ ಭವ್ಯ ಪರಂಪರೆಯು ಇಂದು ತಿರುವು-ಮುರುವಾಗಿ ವಾಲ್ಮೀಕಿಯೇ ಮರಳಿ ಬೇಟೆಗಾರನಂತೆ ಆದಂತೆ ಅನಿಸುತ್ತಿದೆಯಲ್ಲವೇ? “ಊಧ್ವ ಮೂಲ ಅಧಃ ಶಾಖ’ ಎನ್ನೋಣವೇ? ಮೋಹನದಾಸ ಸುರತ್ಕಲ್