Advertisement
ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕುಸಿತ, ಸರಕು ಸಾಗಣೆ ವೆಚ್ಚ ಇಳಿಸಲು ರೈಲಿನ ಬಳಕೆ, ಕಾರ್ಖಾನೆ ಸೇರಿದಂತೆ ಉತ್ಪಾದನೆ ವಲಯದಲ್ಲಿ ಕಡಿಮೆ ಬಳಕೆ ಸೇರಿದಂತೆ ಹಲವು ಕಾರಣಗಳಿಂದ ದೇಶೀ ಮಾರುಕಟ್ಟೆಯಲ್ಲಿ ಡೀಸೆಲ್ ಬಳಕೆ ಕಡಿಮೆ ಯಾಗಿದೆ ಎನ್ನಲಾಗಿದೆ.
ಎಂಆರ್‌ಪಿಎಲ್ ತಿಂಗಳಿಗೆ ಸುಮಾರು 550 ಟನ್‌ಗಳಷ್ಟು ಡೀಸೆಲ್ ಉತ್ಪಾದಿಸುತ್ತದೆ. ಕೆಲವು ತಿಂಗಳ ಹಿಂದಿನ ವರೆಗೆ 200 ಟನ್‌ಗಳನ್ನು ರಫ್ತಾಗುತ್ತಿದ್ದರೆ ಉಳಿದುದು ದೇಶೀಯವಾಗಿ ಸರಬ ರಾಜಾಗುತ್ತಿತ್ತು. ಅಂದರೆ, ದೇಶೀಯ ಪೂರೈಕೆ ಶೇ.65ರಷ್ಟಿದ್ದರೆ ವಿದೇಶಗಳಿಗೆ ರಫ್ತು ಶೇ. 35 ಇತ್ತು. ಈಗ ಇದು ತಿರುವುಮುರುವಾಗಿದೆ. ಶೇ.35ರಷ್ಟಿದ್ದ ರಫ್ತು ಈಗ ಶೇ. 55ಕ್ಕೆ ಏರಿದೆ. ಉಳಿದ ಕೇವಲ ಶೇ. 45ರಷ್ಟು ಮಾತ್ರ ದೇಶೀಯವಾಗಿ ಬಳಕೆಯಾಗುತ್ತಿದೆ. ದೇಶೀಯವಾಗಿ ಐಒಸಿಎಲ್, ಎಚ್‌ಪಿಸಿಎಲ್, ಬಿಪಿಸಿಎಲ್ ಮತ್ತು ಎಂಆರ್‌ಪಿಎಲ್ ಔಟ್‌ಲೆಟ್‌ಗಳಿಗೆ ಎಂಆರ್‌ಪಿಎಲ್‌ನಿಂದ ಡೀಸೆಲ್ ಸರಬರಾಜಾಗುತ್ತಿದೆ. ಕೆಲವು ತಿಂಗಳ ಹಿಂದೆ ನೀರಿನ ಸಮಸ್ಯೆಯಿಂದ ಎಂಆರ್‌ಪಿಎಲ್‌ನ ಯೂನಿಟ್ ಕಾರ್ಯ ಸ್ಥಗಿತಗೊಳಿಸಿದ್ದು ಮತ್ತು ಆ ಬಳಿಕ ಭಾರೀ ಮಳೆಯಿಂದಲೂ ಅಡ್ಡಿಯಾಗಿದ್ದರಿಂದ ಡೀಸೆಲ್ ಸರಬರಾಜಿನಲ್ಲಿ ಕೊಂಚ ವ್ಯತ್ಯಯವಾಗಿತ್ತು. ಸದ್ಯ ಒಂದೆರಡು ತಿಂಗಳುಗಳಿಂದ ಎಲ್ಲ ಯೂನಿಟ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಡೀಸೆಲ್ ರಫ್ತಿಗೆ ನಿರ್ಧರಿಸ ಲಾಗಿದ್ದರೂ ಪೆಟ್ರೋಲ್‌ಗೆ ದೇಶೀಯವಾಗಿ ಸಾಕಷ್ಟು ಬೇಡಿಕೆ ಇದ್ದು, ರಫ್ತಿನ ಅಗತ್ಯ ಕಂಡುಬಂದಿಲ್ಲ.
Related Articles
ಸಿಂಗಾಪುರ, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಗೆ ಸದ್ಯ ಎಂಆರ್‌ಪಿಎಲ್ ಡೀಸೆಲ್ ಪೂರೈಸುತ್ತಿದೆ. ಈಗ ಇದರ ಪ್ರಮಾಣ ಏರಿದೆ. ಯಾವ ದೇಶದ ತೈಲ ವ್ಯಾಪಾರ ಸಂಸ್ಥೆಗಳು ಬೇಡಿಕೆ ಸಲ್ಲಿಸುತ್ತವೆಯೋ ಅಲ್ಲಿಗೆ ಎಂಆರ್‌ಪಿಎಲ್ ಡೀಸೆಲ್ ಸರಬರಾಜು ಮಾಡುತ್ತಿದೆ. ವಿಶೇಷವೆಂದರೆ, ಒಮ್ಮೆ ಅಮೆರಿಕದ ಕಂಪೆನಿಗೂ ಎಂಆರ್‌ಪಿಎಲ್ ಡೀಸೆಲ್ ರಫ್ತು ಮಾಡಿದೆ.
Advertisement
ಬೆಂಗಳೂರು ಪೈಪ್‌ಲೈನ್ ಕೆಲವು ದಿನ ಬಂದ್!ಮಂಗಳೂರಿನಿಂದ ಹಾಸನ- ಬೆಂಗಳೂರು ಮಧ್ಯೆ ಇರುವ ಪೆಟ್ರೋನೆಟ್ ಪೈಪ್‌ಲೈನ್ (ಎಂಬಿಪಿಎಲ್) ಮೂಲಕ ಎಂಆರ್‌ಪಿಎಲ್‌ನಿಂದ ಪ್ರತೀ ದಿನ ಡೀಸೆಲ್ ಸರಬರಾಜು ಆಗುತ್ತಿತ್ತು. ಸದ್ಯ ಬೆಂಗಳೂರು-ಹಾಸನ ಭಾಗದಲ್ಲಿ ಬೇಡಿಕೆ ಕಡಿಮೆ ಇದ್ದು, ಕೆಲವು ದಿನ ಪೈಪ್‌ಲೆನ್ ಬಂದ್ ಮಾಡುವ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ. ಪ್ರತೀದಿನದ ಬದಲು ಎರಡು ಅಥವಾ ಮೂರು ದಿನಕ್ಕೊಮ್ಮೆ ಸರಬರಾಜು ಮಾಡುವ ಪರಿಸ್ಥಿತಿ ಇದೆ ಎಂದು ಎಂಆರ್‌ಪಿಎಲ್ ಮೂಲಗಳು ತಿಳಿಸಿವೆ. ಡೀಸೆಲ್ ಬಳಕೆ ಕುಸಿತ
ಬಿಎಸ್4ನಿಂದ ಬಿಎಸ್6 ಮಾದರಿಗೆ ವಾಹನಗಳು ಬದಲಾಗುತ್ತಿರುವುದು ಮತ್ತು ಇತರ ಕೆಲವು ಕಾರಣಗಳಿಂದ ದೇಶೀಯವಾಗಿ ಡೀಸೆಲ್ ಬಳಕೆ ಪ್ರಮಾಣ ಕುಸಿಯುತ್ತಿದೆ. ಹೀಗಾಗಿ ಸದ್ಯ ಡೀಸೆಲ್ ರಫ್ತಿಗೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ತಿಂಗಳಿನಿಂದ ದೇಶೀಯ ಬೇಡಿಕೆ ಹೆಚ್ಚುವ ಸೂಚನೆ ಇರುವುದರಿಂದ ರಫ್ತು ಕಡಿಮೆ ಆಗಬಹುದು.
– ಎಂ. ವೆಂಕಟೇಶ್, ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್ – ದಿನೇಶ್ ಇರಾ