Advertisement

ಪರಿಣಾಮಕಾರಿ ಕ್ರಮಗಳಿಂದ ಕೋವಿಡ್‌ ಮರಣ ದರ ಇಳಿಮುಖ: ಜಿಲ್ಲಾಧಿಕಾರಿ

02:32 PM Oct 10, 2020 | Suhan S |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌-19 ನಿಯಂತ್ರಣ ಕ್ರಮಗಳನ್ನು ಜಿಲ್ಲಾಡಳಿತ ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದ್ದು, ಕೋವಿಡ್‌ನಿಂದ ಸಂಭವಿಸುತ್ತಿರುವ ಮರಣ ದರ ಸಂಖ್ಯೆ ಇಳಿಮುಖವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಕೋವಿಡ್‌-19ರ ನಿರ್ವಹಣೆ ಸಂಬಂಧ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಅವರು ಶುಕ್ರವಾರ ಫೇಸ್‌ಬುಕ್‌ ಲೈವ್‌ ಮೂಲಕ ವಿವರ ನೀಡಿದರು. ಜಿಲ್ಲೆಯಲ್ಲಿ ಕಳೆದ 2 ತಿಂಗಳಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚು ಕಂಡು ಬಂದಿದ್ದವು. ಮರಣದ ದರ ಸಹ ಹೆಚ್ಚಳವಾ ‌ಗಿತ್ತು. ಡೆತ್‌ ಆಡಿಟ್‌ ವರದಿಯನ್ನು ವಿಶ್ಲೇಷಿಸಿ ತಕ್ಷಣವೇವೈದ್ಯರ ಸಹಕಾರದೊಂದಿಗೆ ಜಿಲ್ಲಾಡಳಿತ ಸಂಪೂರ್ಣ ನೆರವು ನೀಡಿ ಮರಣಕ್ಕೆ ಯಾವ ಅಂಶಗಳು ಕಾರಣವಾಗುತ್ತಿವೆ ಎಂಬುದನ್ನು ಮನಗಂಡು ಪರಿಣಾಮಕಾರಿಯಾಗಿ ಕ್ರಮ ವಹಿಸಿದ ಪರಿಣಾಮ ಕಳೆದ ತಿಂಗಳು ಶೇ.1.80  ರಷ್ಟಿದ್ದ ಮರಣದ ದರ, ಕಳೆದ 15 ದಿನಗಳಲ್ಲಿ1.27ಕ್ಕೆ ಇಳಿಮುಖವಾಗಿದೆ. ಕಳೆದ ವಾರ 1.02ಕ್ಕೆ ಇಳಿಕೆಯಾಯಿತು. ಕಳೆದ 5 ದಿನಗಳಲ್ಲಿ ಈ ದರ ಶೇ.1ಕ್ಕಿಂತಲೂ ಕಡಿಮೆಯಾಗಿದೆ ಎಂದರು.

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿರುವ ತೀವ್ರ ನಿಗಾ ಘಟಕದಲ್ಲಿ ಪರಿಣಾಮಕಾರಿಯಾಗಿ ಕ್ರಮಗಳನ್ನು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮರಣದ ಪ್ರಮಾಣ ಸಂಖ್ಯೆ ಕಡಿಮೆಯಾಗುತ್ತಿರುವುದು ಆಶಾದಾಯಕವಾಗಿದೆ. ಜೊತೆಗೆ ಕೋವಿಡ್‌ ಸೋಂಕು ಹಾಗೂ ಮರಣ ಹೆಚ್ಚುಕಂಡು ಬಂದ ಪ್ರದೇಶಗಳಲ್ಲಿ ತೀವ್ರಕಣ್ಗಾವಲು ವ್ಯವಸ್ಥೆ ಕೈಗೊಂಡ ಕಾರಣದಿಂದಲೂ ಮರಣಪ್ರಮಾಣದ ಸಂಖ್ಯೆ ತಗ್ಗಿದೆ ಎಂದರು. ಇದುವರೆಗೆ ಕೋವಿಡ್‌ನಿಂದ ಮೃತಪಟ್ಟವರ ಪೈಕಿ 40 ರಿಂದ60 ವರ್ಷದವರು 37 ಜನರಿದ್ದಾರೆ. ಹೀಗಾಗಿ 40 ರಿಂದ 60ರ ವಯೋಮಾನದವರು ಕೋವಿಡ್‌ ಬಗ್ಗೆ ಯಾವುದೇ ಉದಾಸೀನ ಮಾಡಬಾರದು. ಮಾಸ್ಕ್ ಧರಿಸುವುದು, ಅಂತರಕಾಯ್ದುಕೊಳ್ಳುವುದು, ಆರೋಗ್ಯ ತಪಾಸಣೆ ಒಳಗಾಗುವುದೂ ಸೇರಿದಂತೆ ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ಮಾಡಿದರು.

ಸಂತೆಮರಹಳ್ಳಿಯಲ್ಲಿ ಕೋವಿಡ್‌ ಸೆಂಟರ್‌: ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಉತ್ತಮ ಆರೈಕೆ, ಔಷಧ ಉಪಚಾರ ಮಾಡಲಾಗುತ್ತಿದೆ. ವೆಂಟಿಲೇಟರ್‌, ಆಕ್ಸಿಜನ್‌ ವ್ಯವಸ್ಥೆಗೆ ಯಾವುದೇ ಕೊರತೆಯಿಲ್ಲ.ಸಂತೇಮರಹಳ್ಳಿಯಲ್ಲಿ ಕಳೆದ ಸೋಮವಾರದಿಂದ80 ಹಾಸಿಗೆಗಗಳಕೋವಿಡ್‌ ಹೆಲ್ತ್‌ ಕೇರ್‌ ಸೆಂಟರ್‌ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಜಿಲ್ಲಾಡಳಿತ ವೈದ್ಯರ ಸಹಕಾರದಿಂದ ಕೋವಿಡ್‌ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಕೈಗೊಂಡಿದೆ. ಜಿಲ್ಲೆಯ ಜನತೆ ಸಹಕಾರ ಸಹ ಮುಖ್ಯವಾಗಿದೆ. ಯಾರೇ ಆಗಲಿ ನೆಗಡಿ, ಕೆಮ್ಮು, ಜ್ವರ, ಉಸಿರಾಟ ತೊಂದರೆ ಲಕ್ಷಣಗಳು ಕಾಣಿಸಿಕೊಂಡಲ್ಲಿ ಉಪೇಕ್ಷೆಬಿಟ್ಟು ಉಚಿತವಾಗಿ ಮಾಡಲಾಗುತ್ತಿರುವ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ನಮ್ಮ ಜೀವ ನಮ್ಮ ಕೈಯಲ್ಲಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಕೋವಿಡ್‌ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ರವಿ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next