Advertisement

ಕ್ಷೀಣಿಸುತ್ತಿದೆ ಹವಳ ಸಂಪನ್ಮೂಲ

08:55 AM Mar 05, 2018 | Harsha Rao |

ಹೊಸದಿಲ್ಲಿ: ಹವಾಮಾನ ವೈಪರೀತ್ಯದಿಂದಾಗಿ ದೇಶದ ಹವಳ ಸಂಪನ್ಮೂಲ ಇಳಿಕೆಯಾಗಿದ್ದು, ಕಳೆದ ಎರಡು ದಶಕಗಳಲ್ಲಿ ಅಭಿವೃದ್ಧಿಯೂ ಕುಂಠಿತಗೊಂಡಿದೆ ಎಂದು ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ ಹೇಳಿದೆ. ಅವುಗಳ ರಕ್ಷಣೆಗೆ ತುರ್ತು ಕ್ರಮ ಅಗತ್ಯವಿದೆ. ಹವಳಗಳ ರಕ್ಷಣೆಯಲ್ಲಿ ಸಿಹಿನೀರು, ಕರಾವಳಿ ಮತ್ತು ಜಲಚರಗಳ ರಕ್ಷಣೆಯನ್ನೂ ಪರಿಗಣಿಸಬೇಕಿದೆ ಎಂದು ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ ತನ್ನ ವರದಿಯಲ್ಲಿ  ವಿವರಿಸಿದೆ.

Advertisement

ಹವಳ ಸಂಪನ್ಮೂಲವು ಕಛ… ಪ್ರಾಂತ್ಯ, ಲಕ್ಷದ್ವೀಪ, ಮನ್ನಾರ್‌, ಅಂಡಮಾನ್‌ ನಿಕೋ ಬಾರ್‌ ದ್ವೀಪಗಳಲ್ಲಿ ಕೇಂದ್ರೀಕೃತವಾಗಿದೆ. ಇದರ ಹೊರತಾಗಿಯೂ ಹಲವು ಕಡೆಗಳಲ್ಲಿ ಹವಳ ನಿಕ್ಷೇಪಗಳಿವೆ. ಗೋವಾದ ಕೆಲವು ಭಾಗಗಳಲ್ಲಿ, ಮಾಲ್ವನ್‌ ನ್ಯಾಶನಲ್‌ ಪಾರ್ಕ್‌ ಹಾಗೂ ಕನ್ಯಾಕುಮಾರಿ ಸಹಿತ ಅಲ್ಲಲ್ಲಿ ಸಣ್ಣ ಪ್ರಮಾಣದ ನಿಕ್ಷೇಪಗಳು ಕಂಡುಬರುತ್ತವೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆದ ಹವಾಮಾನ ವೈಪರೀತ್ಯಗಳು ಹವಳಗಳ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿವೆ. ಅದರಲ್ಲೂ ಎರಡು ದಶಕಗಳಲ್ಲಿ ಹವಳಗಳ ಮೇಲೆ ಭಾರೀ ಪರಿಣಾಮ ಉಂಟಾಗಿದೆ. ಕಾರ್ಬನ್‌ ಡೈ ಆಕ್ಸೆ„ಡ್‌ನ‌ ಪ್ರಮಾಣ ಏರಿಕೆ ಯಿಂದಲೂ ಹವಳಗಳಿಗೆ ಹಾನಿ ಉಂಟು ಮಾಡಿವೆ. ಇನ್ನೊಂದೆಡೆ ಪೋಷಕಾಂಶಗಳು, ಭಾರೀ ಲೋಹಾಂಶ, ರಾಸಾಯನಿಕ ಮಾಲಿನ್ಯ, ಹವಳ ಗಣಿಗಾರಿಕೆ ಮತ್ತು ಕೊಳೆಯಿಂದಾಗಿ ಯೂ ಪ್ರತಿಕೂಲ ಪರಿಣಾಮ ಉಂಟಾಗಿದ್ದು, ಇದಕ್ಕೆ ಮಾನವ ಹಸ್ತಕ್ಷೇಪ ಕಾರಣ ಎಂದು ಡಬ್ಲ್ಯುಡಬ್ಲ್ಯುಎಫ್  ಇಂಡಿಯಾದ ಅಜಯ್‌ ಅರುಣ್‌ ವೆಂಕಟರಾಮನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next