ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ಇಳಿಮುಖವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಇಂದಿರಾ ಆರ್‌ಕಬಾಡೆ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ತಡೆಗಟ್ಟಲು 14 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಪ್ರಸಕ್ತ ಸಾಲಿನಲ್ಲಿ “ಜಾಗತಿಕ ಒಗ್ಗಟ್ಟು ಜವಾಬ್ದಾರಿಯ ಹಂಚಿಕೆ’ ಘೋಷಣೆಯೊಂದಿಗೆ ಡಿ.1 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಂದರು.
ಜಿಲ್ಲಾ ಆಸ್ಪತ್ರೆ ಆವರಣದಿಂದ ನಗರದ ಪ್ರಮುಖ ರಸ್ತೆ ಗಳಲ್ಲಿ ಜಾಥಾ ಕಾರ್ಯಕ್ರಮ ನಡೆಯಲಿದ್ದು, ಎಚ್‌ಐವಿ ಏಡ್ಸ್ ನಿಯಂತ್ರಣದ ಬಗ್ಗೆ ಪ್ರಮಾಣ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಚ್ ಐವಿ ಏಡ್ಸ್‌ಕ್ಷಯ ಐಸಿಟಿಸಿ, ಎಆರ್‌ಟಿ, ಎಸ್‌ಟಿಡಿ, ಸ್ವಯಂ ಸೇವಾ ಸಂಘ ಸಂಸ್ಥೆ ಸೇವೆಗಳ ಮಾಹಿತಿ ಮಳಿಗೆ ಉದ್ಘಾಟನೆ ಮಾಡಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ಉಚಿತ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಸೌಲಭ್ಯ, ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ ಎಸ್‌ಟಿಐ ಆರ್‌ಟಿಐ ಸೋಂಕಿತರಿಗೆ ಉಚಿತಔಷಧಿಸೌಲಭ್ಯ,ಸೋಂಕಿತರಿಗೆ ಉಚಿತ ಎಆರ್‌ಟಿ ಚಿಕಿತ್ಸೆ ಮತ್ತು ಮನೋ ಸಾಮಾಜಿಕ ಆಪ್ತ ಸಮಾಲೋಚನೆ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಸಾಮಾನ್ಯ 175 ಮತ್ತು 12 ಗರ್ಭಿಣಿಯರು ಸೇರಿದಂತೆ 187 ಎಚ್‌ಐವಿ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡುವ ಕೆಲಸವನ್ನು ಮಾಡಿದ್ದೇವೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ 6 ತಿಂಗಳಿಗೊಮ್ಮೆ ನೆರೆ ರಾಜ್ಯಗಳಿಗೆ ಹೋಗಿ ಬರುವ ಸರಕು ಸಾಕಾಣಿಕೆ ವಾಹನ ಚಾಲಕರರ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿ ಜನರಲ್ಲಿ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸಿದ್ದೇವೆ ಅದರ ಫಲದಿಂದಾಗಿ ಪ್ರಸಕ್ತ ಸಾಲಿನಲ್ಲಿಕೇವಲ 10 ಗ ರ್ಭಿಣಿಯರು ಸಹಿತ96 ಮಂದಿ ಎಚ್‌ಐವಿ ಪೀಡಿತರಿದ್ದು ಅವರಿಗೆ ಚಿಕಿತ್ಸಾ ಕಾರ್ಯ ಮುಂದುವರಿದಿದೆ ಎಂದರು.