Advertisement

ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಕುಸಿತ

10:02 AM Oct 11, 2019 | sudhir |

ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಲಭ್ಯವಿರುವ ಉದ್ಯೋಗ ಪ್ರಮಾಣದ ಮಟ್ಟ ಇಳಿಕೆಯಾಗಿದೆ ಎಂದು ಕಂಪನಿಗಳ ಕಾರ್ಯಪಡೆಯ ವಿಶ್ಲೇಷಣಾ ವರದಿ ತಿಳಿಸಿದೆ.

Advertisement

2019ರ ಹಣಕಾಸು ವರ್ಷದಲ್ಲಿ ಖಾಸಗಿ ವಲಯದಲ್ಲಿ ಶೇ.9.2ರಷ್ಟು ಉದ್ಯೋಗ ಹೆಚ್ಚಳ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಮಾತ್ರ ಶೇ.2.6ರಷ್ಟು ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ವರದಿ ಉಲ್ಲೇಖೀಸಿದೆ.

ಇನ್ನೂ ಸಮೀಕ್ಷೆಯಲ್ಲಿ ಉದ್ಯೋಗದಾತ ಸಂಸ್ಥೆಗಳಾದ ಕೋಲ್‌ ಇಂಡಿಯಾ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ತನ್ನ ನಿವ್ವಳ ದರದ ಆಧಾರದ ಮೇಲೆ ಉದ್ಯೋಗ ಕಡಿತಗೊಳಿಸಿದ್ದು, ಉದ್ಯೋಗ ಅವಕಾಶದಲ್ಲಿ ಕ್ರಮವಾಗಿ ಶೇ 4.4ರಷ್ಟು ಹಾಗೂ ಶೇ 2.6ರಷ್ಟು ಕಡಿತವಾಗಿದೆ.

ದಿನದಿಂದ ದಿನಕ್ಕೆ ಸಾರ್ವಜನಿಕ ವಲಯದ ಕಂಪನಿಗಳ ಪ್ರಾಮುಖ್ಯತೆಯು ಕುಗ್ಗುತ್ತಿದ್ದು, ಉದ್ಯೋಗಾವಕಾಗಳು ಕಡಿಮೆಯಾಗುತ್ತಿವೆ. 2007ರ ವಿತ್ತೀಯ ವರ್ಷದಲ್ಲಿ ಪಟ್ಟಿ ಮಾಡಲಾದ ಒಟ್ಟು ಸಂಸ್ಥೆಗಳಲ್ಲಿ ಶೇ.50ರಷ್ಟು ಉದ್ಯೋಗ ಅವಕಾಶಗಳಿದ್ದು, ಅದರ ಮಟ್ಟ ಇದೀಗ ಶೇ.25ಕ್ಕೆ ತಲುಪಿದೆ ಎಂದು ವಿದೇಶಿ ದಲ್ಲಾಳಿ ಸಂಸ್ಥೆ ಕ್ರೆಡಿಟ್‌ ಲಿಯೊನೈಸ್‌ ಸೆಕ್ಯುರಿಟೀಸ್‌ ಏಷ್ಯಾ (ಸಿಎಲ್ಎಸ್‌ಎ) ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next