Advertisement
ಹಸಿದವರಿಗೆ ಆಹಾರ ನೀಡಿ ಹಸಿವನ್ನು ನೀಗಿಸಿದ ಹಿರಿಮೆಗೆ ಉಡುಪಿ ಜಿಲ್ಲೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಹಾಗೇ ರಕ್ತದಾನದ ಮೂಲಕ ನೂರಾರು ಜೀವಗಳನ್ನ ಉಳಿಸುವ ಜವಾಬ್ದಾರಿ ಜನರ ಮೇಲಿದೆ. ಈ ನಿಟ್ಟಿನಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಹೃದಯವೈಶಾಲ್ಯ ಮೆರೆಯುವಂತಾಗಲಿ ಎಂದು ಉಡುಪಿ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ, ಜಿಲ್ಲಾ ಸರಕಾರಿ ಎನ್‌ಪಿಎಸ್ ನೌಕರರ ಸಂಘ, ಜಿಲ್ಲಾ ಪತ್ರಕರ್ತರ ಸಂಘ, ಜಯಂಟ್ಸ್ ಗ್ರೂಪ್, ಗಂಗೊಳ್ಳಿ ಕರಾವಳಿ ಸಂಘದ ಜಂಟಿ ಆಶ್ರಯದಲ್ಲಿ ಎ. 29ರ ಬುಧವಾರ ಅಜ್ಜರಕಾಡು ಪುರಭವನದ ಬಳಿಯ ನೂತನ ಗ್ರಂಥಾಲಯ ಕಟ್ಟಡದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿದೆ.
ಜಿಲ್ಲಾಡಳಿತದ ಎಲ್ಲ ನೀತಿ ನಿಬಂಧನೆಯನ್ನುಗಳಾದ ಸಾಮಾಜಿಕ ಅಂತರ, ಜ್ವರದ ಪರೀಕ್ಷೆ , ಒಬ್ಬ ವ್ಯಕ್ತಿಯ ಬಳಿಕ ಬೆಡ್‌ಶೀಟ್ ಬದಲಾವಣೆ ಹೀಗೆ ಎಲ್ಲ ಮುಂಜಾಗೃತಿ ಕ್ರಮಗಳನ್ನು ಕಟ್ಟುನಿಟ್ಟಿನಲ್ಲಿ ಪಾಲಿಸುವ ವ್ಯವಸ್ಥೆ ಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಸದ್ಯ ಶೇ. 60 ಜಿಲ್ಲಾ ರಕ್ತನಿಧಿ ರಕ್ತದ ಕೊರತೆಯನ್ನು ಎದುರಿಸಿದೆ.