Advertisement

ಕುಸಿತ: ಗಂಗಾಮೂಲದಲ್ಲಿ  ಸಿಲುಕಿದ ಬಸ್‌

12:00 PM Aug 20, 2018 | Team Udayavani |

ಮೂಡಬಿದಿರೆ: ಕುದುರೆಮುಖ ಸಮೀಪದ ಗಂಗಾಮೂಲದ ಗುಡಿಯ ಬಳಿ ರವಿವಾರ ಬೆಳಗ್ಗೆ ಹೆದ್ದಾರಿಗೆ ಗುಡ್ಡ ಕುಸಿದ ಪರಿಣಾಮ ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ವೋಲ್ವೋ ಬಸ್‌ ಮುಂದುವರಿಯಲೂ ಆಗದೆ ತಿರುಗಿ ಬರಲೂ ಆಗದೆ ಆತಂಕಕಾರಿ ಸನ್ನಿವೇಶ ಎದುರಾಯಿತು. ಎಸ್‌ಕೆ ಬಾರ್ಡರ್‌ ವರೆಗೆ ಸುಮಾರು 2 ಕಿ.ಮೀ.ಯಷ್ಟು ಬಸ್ಸನ್ನು ರಿವರ್ಸ್‌ನಲ್ಲೇ ತಂದು ಬಳಿಕ ಶೃಂಗೇರಿ, ಬಾಳೆಹೊನ್ನೂರು, ಮೂಡಿಗೆರೆ, ಬೇಲೂರು, ಹಾಸನವಾಗಿ ಬೆಂಗಳೂರಿನತ್ತ ಸಾಗಿತು ಎಂದು ಬಸ್ಸಿನಲ್ಲಿದ್ದ ಮಂಗಳೂರಿನ ಛಾಯಾಚಿತ್ರಗ್ರಾಹಕ “ಯಜ್ಞ’ ತಿಳಿಸಿದ್ದಾರೆ. ರಾತ್ರಿ ವೇಳೆಗೆ ಮಣ್ಣನ್ನು ತೆರವುಗೊಳಿಸಲಾಗಿದ್ದು , ರಸ್ತೆ ಸಂಚಾರ ಸುಗಮವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.