Advertisement
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ 79 ವರ್ಷದ ವಿಜಯ್ ಹಾಥಿ ಅವರ ಬದುಕು ಬಡತನದ ದಿನದಲ್ಲೇ ಕಳೆಯುತ್ತಿದೆ. ತನ್ನ ಪತ್ನಿ ಹಾಗೂ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆಯಲ್ಲಿ ಮಲಗಿಯೇ ಇರುವ ಮಗನೊಂದಿಗೆ ಬದುಕು ಸಾಗಿಸಲು ವಿಜಯ್ ಅವರು ಪಡುವ ಕಷ್ಟ ಯಾರಿಗೂ ಬೇಡದಂತಿದೆ. ಹೇಗಾದರೂ ಮಾಡಿ ಮಗನ ಚಿಕಿತ್ಸೆಗೆ ಹಾಗೂ ಮನೆಯ ಖರ್ಚಿಗೆ ಚೂರಾದರೂ ಸಹಾಯವಾಗುತ್ತಿದ್ದ ಸರ್ಕಾರದ ವೃದ್ಧಾಪ್ಯ ವೇತನ ಸೌಲಭ್ಯ ಕಳೆದ ಎರಡು ವರ್ಷಗಳಿಂದ ನಿಂತಿದೆ.
Related Articles
Advertisement
ತಮ್ಮ ತಪ್ಪೆಂದು ಒಪ್ಪಿಕೊಂಡ ಬಳಿಕ ಚಿತ್ತರಂಜನ್ ಹಲ್ದರ್, ಇನ್ನೊಬ್ಬ ಪಂಚಾಯತ್ ಕಾರ್ಯಕರ್ತನ ಹೆಸರನ್ನು ಹೇಳಿದ್ದಾರೆ.
ಮತ್ತೊಂದೆಡೆ ಧೋಲಾ ಪಂಚಾಯತ್ ಮುಖ್ಯಸ್ಥೆ ರೂಬಿಯಾ ಬೀಬಿ ಕಯಾಲ್ ಅವರ ಪತಿ, ಸ್ಥಳೀಯ ತೃಣಮೂಲ ನಾಯಕ ಹೊಸೈನ್ ಕಯಾಲ್ ವೃದ್ಧಾಪ್ಯ ವೇತನ ಸೌಲಭ್ಯ ನಿಲ್ಲಿಸಲು ನಿಲ್ಲಿಸಲು ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ಕಾರಣವೆಂದು ಆರೋಪಿಸಿದ್ದಾರೆ.
ಸೌಲಭ್ಯವನ್ನು ಮತ್ತೆ ಮರು ಪ್ರಾರಂಭಿಸುವ ಪ್ರಕ್ರಿಯೆ ಆರಂಭವಾಗಿದೆ. ಪಂಚಾಯಿತಿ ಕಚೇರಿಗೆ ಈ ಸಂಬಂಧ ದಾಖಲೆಗಳನ್ನು ಕಳುಹಿಸಲಾಗಿದೆ ಎಂದು ಕುಲ್ಪಿ ಬಿಡಿಒ ಸೌರಭ್ ಗುಪ್ತಾ ಹೇಳಿದ್ದಾರೆ.