Advertisement

ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಘೋಷವಾಕ್ಯ

06:00 AM May 30, 2018 | Team Udayavani |

ಬೆಂಗಳೂರು: ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಘೋಷವಾಕ್ಯಗಳನ್ನು ಸಿದಟಛಿಪಡಿಸಿದೆ. “ಮಕ್ಕಳು ಜಗತ್ತನ್ನು ನೋಡಲು ಶಿಕ್ಷಣ ಕೊಡಿ’, “ಕಲಿತವರು ಕಲಿಸಿರಿ-ಕಲಿಯದವರು ಕಲಿಯಿರಿ’, “ಶಿಕ್ಷಣ ಕೊಡಿಸುವಲ್ಲಿ ಲಿಂಗಭೇದ ಮಾಡಬೇಡಿ’, “ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದಟಛಿರಾಗಿ-ನಾವು ಶಿಕ್ಷಣ ಕೊಡಲು ಸಿದ್ಧರಿದ್ದೇವೆ’, “ಶಿಕ್ಷಣ ಕೊಡಿಸಿ-ಮಕ್ಕಳ ಬಾಳು ಬೆಳಗಿಸಿ’, “ಅರಿವೇ ಗುರು-ಗುರುವೇ ಶಿಕ್ಷಣ’, “ಅರ್ಹ ವಯಸ್ಸಿನ ಮಕ್ಕಳು ಕಲಿಕೆಯಲ್ಲಿ ತೊಡಗಿರಲಿ’, “ಅಕ್ಷರ ಜ್ಯೋತಿ ಹೊತ್ತಿಸಿ-ಅದಕ್ಕೆ ಪಾಲಕರು ಹಣತೆ, ಬತ್ತಿ ಮತ್ತು ಎಣ್ಣೆಯಾಗಿರಿ’, “ಅರಿವಿಗೆ ಆಧಾರ ಶಿಕ್ಷಣ’, ಶ್ರೇಷ್ಠತೆ ಗಳಿಸಿ ದವರೆಲ್ಲರೂ ಶಿಕ್ಷಣವಂತರು’, “ಇತರರನ್ನು ಗೌರವಿಸಲು ಶಿಕ್ಷಣ ಬೇಕು’, “ಸಮೃದ್ಧ ಸಮಾಜ
ನಿರ್ಮಾಣಕ್ಕೆ ಉತ್ತಮ ಶಿಕ್ಷಣ ಬೇಕು, “ಯಾರೂ ಕದಿಯದ ಆಸ್ತಿ ಶಿಕ್ಷಣ’, “ಬಳಸಿದಷ್ಟು ಬೆಳೆಯುವ ಸಂಪತ್ತು ಶಿಕ್ಷಣ’ ಹೀಗೆ 30ಕ್ಕೂ ಅಧಿಕ ಘೋಷವಾಕ್ಯಗಳನ್ನು ಸಿದಟಛಿಪಡಿಸಲಾಗಿದ್ದು, ಅದನ್ನು ಎಲ್ಲ ಶಾಲೆಯ ಮುಖ್ಯಶಿಕ್ಷಕರಿಗೆ, ಸಹ ಶಿಕ್ಷಕರಿಗೆ ಆನ್‌ಲೈನ್‌ ಮೂಲಕ ಕಳುಹಿಸಲಾಗಿದೆ. 

Advertisement

ಕಿರುಚಿತ್ರ: 2018-19ನೇ ಸಾಲಿನ ಶೈಕ್ಷಣಿತ ತರಗತಿ ಆರಂಭ ದಿನ ರಾಜ್ಯಾದ್ಯಂತ ನಡೆದ ಶಾಲಾ ಪ್ರಾರಂಭೋತ್ಸ ವದ ಐದು ನಿಮಿಷದ ಕಿರುಚಿತ್ರ ಸಿದ್ಧಪಡಿಸಲಾಗಿದೆ. 3,81,505 ಶಿಕ್ಷಕರು, 1 ಕೋಟಿಗೂ ಅಧಿಕ ಮಕ್ಕಳನ್ನು ಹೊಂದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಚಿತ್ರಣವನ್ನು ಈ
ಕಿರುಚಿತ್ರದ ಮೂಲಕ ವಿವರಿಸಲಾಗಿದೆ.  8ನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್‌ ವಿತರಣೆ, ಕ್ಷೀರ ಭಾಗ್ಯ, ಪುಸ್ತಕ,
ಸಮವಸ್ತ್ರ, ಶೂ, ಸಾಕ್ಸ್‌ ವಿತರಣೆಯ ಜತೆಗೆ ಬಿಸಿಯೂಟ ತಯಾರಿಸುವುದು, ಬಡಿಸುವುದು ಸೇರಿ ಸರ್ಕಾರದಿಂದ ಮಕ್ಕಳಿಗೆ ನೀಡುವ ಸೌಲಭ್ಯದ ಮಾಹಿತಿಯ ವಿಡಿಯೋಗಳನ್ನು ಇದರಲ್ಲಿ ಸೇರಿಸಲಾಗಿದೆ. 

2017ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲಾ ಮಕ್ಕಳ ಮಾಹಿತಿಯೂ ಇದರಲ್ಲಿದೆ. ಮೇ 28ರಂದು ರಾಜ್ಯದ ವಿವಿಧ ಶಾಲೆಗಳಲ್ಲಿ ನಡೆದ ಶಾಲಾ ರಂಭೋತ್ಸವದ ವಿಡಿಯೋಗಳನ್ನು ಇದರಲ್ಲಿ ತೋರಿಸಲಾಗಿದೆ. ಅಂತಿಮವಾಗಿ ಶಾಲೆ ಕಡೆಗೆ ನನ್ನ ನಡೆ ಎಂಬ ಘೋಷ ವಾಕ್ಯದೊಂದಿಗೆ ಕಿರುಚಿತ್ರ ಕೊನೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next