Advertisement

ನಿರ್ಣಯಗಳು ಹೊಸದಾಗಿರಲಿ

09:18 AM Jan 21, 2019 | Team Udayavani |

ಹೊಸ ವರ್ಷದ ಆರಂಭದಲ್ಲಿದ್ದೇವೆ. ವೃತ್ತಿ ಬದುಕಿನಲ್ಲಿ ಉನ್ನತ ಸಾಧನೆಯನ್ನು ಮಾಡಲು ಹೊಸ ಹೊಸ ನಿರ್ಣಯಗಳನ್ನು ಕೈಗೊಳ್ಳಲು ಇದು ಸಕಾಲ ಮತ್ತು ಅದನ್ನು ಪರಿಪೂರ್ಣಗೊಳಿಸಲು ದೃಢವಾದ ಹೆಜ್ಜೆ ಇಡಲು ಕಟಿಬದ್ಧರಾಗಬೇಕು. ಅದಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ.

Advertisement

·ಬೆಳವಣಿಗೆ ಪರಿಶೀಲಿಸಿ
ವೃತ್ತಿ ಜೀವನ ಹೇಗೆ ತೆರೆದುಕೊಳ್ಳುತ್ತಿದೆ ಎಂಬುದು ನಿಮ್ಮ ವರ್ಷಾಂತ್ಯದ ಪ್ರತಿಫ‌ಲವನ್ನು ಬಿಂಬಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ಹೊಸ ಕೆಲಸ ಹುಡುಕುತ್ತಿದ್ದೀರಾ ಅಥವಾ ನಿಮ್ಮ ಗುರಿ ಸಾಧಿಸಲು ನೀವು ಏನು ಮಾಡಬೇಕು? ನಿಮ್ಮ ನಿಜವಾದ ಅಗತ್ಯಗಳು ಮತ್ತು ಕನಸುಗಳು ಯಾವುದು ಎಂದು ಯೋಚಿಸಿ ಅದನ್ನು ಪರಿಪೂರ್ಣಗೊಳಿಸಲು ನಿರ್ಣಯಕೈಗೊಳ್ಳಿ.

·ಆರೋಗ್ಯಕರ ಆಯ್ಕೆ
ನಿಮ್ಮ ಕೆಲಸದ ಆವೃತ್ತಿ ಆರೋಗ್ಯಕರವಾಗಿರಬೇಕು. ಅದಕ್ಕಾಗಿ ಆಫೀಸ್‌ ಗಳಲ್ಲಿ ಆರೋಗ್ಯ ವೃದ್ಧಿಸವುದನ್ನು ಆಯ್ದು ಕೊಳ್ಳಿ. ದಿನವೂ ಎಲಿವೇಟರ್‌ ಬಳಸುವುದಕ್ಕಿಂತ ಮೆಟ್ಟಿಲುಗಳನ್ನು ಹತ್ತಿ, ಪ್ಯಾಕ್‌ ಮಾಡಲಾದ ಅಥವಾ ಜಂಕ್‌ ಫ‌ುಡ್‌ ಗಳಿಂದ ದೂರವಿರಿ. ಕೆμàನ್‌ ಮತ್ತು ಸಕ್ಕರೆಯುಕ್ತ ಪಾನೀಯ ಸೇವನೆಯನ್ನು ಕಡಿಮೆ ಮಾಡಿ.

·ಬ್ಲಾಗ್‌ಗೆ ಸೈನ್‌ ಆಪ್‌ ಮಾಡಿಕೊಳ್ಳಿ.
ಯಾವುದಾದರೂ ಪ್ರೇರಕ ಬ್ಲಾಗ್‌ ಸೈನ್‌ ಅಪ್‌ ಮಾಡಿಕೊಳ್ಳಿ ಅಥವಾ ಮಾದರಿ ಬ್ಲಾಗ್‌ ಅನ್ನು ಪ್ರಾರಂಭಿಸಿ. ವರ್ಷ ಪೂರ್ತಿ ನಿಮ್ಮನ್ನು ಪ್ರೇರೆಪಿಸಲು ಇದು ಸಹಾಯ ಮಾಡುತ್ತದೆ.

·ಓದುತ್ತಲೇ ಇರಿ
ನಿರಂತರವಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.

Advertisement

·ಒತ್ತಡ ಪರಿಶೀಲಿಸಿ
ನಿಮ್ಮಲ್ಲಿ ನೀವು ಭರವಸೆ ಇಡಬೇಕು. ಶ್ರಮವಹಿಸಿ ಕೆಲಸ ಮಾಡಿದ ಅನಂತರ ಒತ್ತಡ ಮಟ್ಟವನ್ನು ಸ್ಥಿರತೆಯಲ್ಲಿ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಆರೋಗ್ಯವು ಹತೋಟಿಯಲ್ಲಿರುತ್ತದೆ.

·ಸಂಪರ್ಕ ಬೆಳೆಸಿಕೊಳ್ಳಿ
ವೃತ್ತಿ ಪರ ಜೀವನ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಕಚೇರಿ ಕೆಲಸದಲ್ಲಿ, ಕಾರ್ಯಾಗಾರದಲ್ಲಿ,
ಸಭೆ ಅಥವಾ ಸಮ್ಮೇಳನಗಳಲ್ಲಿ ಯಾರನ್ನಾದರೂ ನೀವು ಭೇಟಿಯಾದಾಗ ಅವರೊಂದಿಗೆ ಸಂವಾದ ನಡೆಸಿ ಅವರೊಂದಿಗೆ ಒಳ್ಳೆಯ ಸಂಪರ್ಕ ಬೆಳೆಸಿಕೊಳ್ಳಿ.

·ಇಲ್ಲ ಎನ್ನಿ
ಸಮಯವನ್ನು ವ್ಯರ್ಥಗೊಳಿಸು ಕಾರ್ಯಕ್ರಮಗಳಿಗೆ ಬರುವುದಿಲ್ಲ ಎನ್ನಲು ಪ್ರಾರಂಭಿಸಿ. ಇದರಿಂದ ಸಾಕಷ್ಟು ಸಮಯವನ್ನು ನೀವು ನಿಮ್ಮ ವೃತ್ತಿಯ ಕಡೆಗೆ ಕೊಡಬಹುದು.

·ಹೊಸ ಕೌಶಲ ಕಲಿಯಿರಿ
ವೃತ್ತಿ ಜೀವನದ ವಾರಾಂತ್ಯದಲ್ಲಿ ಆನ್‌ ಲೈನ್‌ ಕೋರ್ಸ್‌ಗಳಿಗೆ ಅಥವಾ ವಿಶೇಷ ಕಾರ್ಯಾಗಾರಗಳಿಗೆ ಹೋಗುವುದನ್ನು ಕಲಿಯಿರಿ. ನಿಮ್ಮ ಹವ್ಯಾಸ ವರ್ಗವಾದರೂ ಸರಿ. ನೃತ್ಯ, ಕುಂಬಾರಿಕೆ, ಸಂಗೀತ ಹೀಗೆ ಸಾವಿರ ರೀತಿಯ ಆಯ್ಕೆಗಳಿರುತ್ತವೆ ಅದನ್ನು ಆಯ್ದು ಕಲಿಯಿರಿ. ಇದರಿಂದ ನಿಮ್ಮ ಜ್ಞಾನ ಮಟ್ಟ ಸುಧಾರಿಸುತ್ತದೆ.

ಕಾತ್ಯಾಯಿನಿ

Advertisement

Udayavani is now on Telegram. Click here to join our channel and stay updated with the latest news.

Next