Advertisement

ಬೇಡಿಕೆಗಾಗಿ ಮುಷ್ಕರ ನಡೆಸಲು ನಿರ್ಧಾರ

03:10 PM Jul 07, 2019 | Suhan S |

ಮೂಡಲಗಿ: ರಾಜ್ಯದಲ್ಲಿರುವ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾರಕವಾಗುವ ನಿಟ್ಟಿನಲ್ಲಿ ವೃಂದ ಬಲ ಹಾಗೂ ನೇಮಕಾತಿ ನಿಯಮದ ವಿರುದ್ಧ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜು.9ರಂದು ಚಿಕ್ಕೋಡಿಯ ಡಯಟ್ ಆವರಣದಲ್ಲಿ ಒಂದು ದಿನ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಿದೆ.

Advertisement

ಈ ಕುರಿತು ಮೂಡಲಗಿ ತಾಲೂಕು ಘಟಕ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದು, ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು. ಎನ್‌.ಪಿ.ಎಸ್‌ ರದ್ದುಗೊಳಿಸುವುದು. ಎಲ್.ಕೆ.ಜಿ, ಯು.ಕೆ.ಜಿ ಪ್ರಾರಂಭಿಸಬೇಕು. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿಯ ನ್ಯೂನ್ಯತೆ ಸರಿ ಪಡಿಸುವುದು. 6ನೇ ವೇತನ ಆಯೋಗ ಅಂತಿಮ ವರದಿಯ ಶಿಫಾರಸ್ಸನ್ನು ಅನುಷ್ಠಾನಗೊಳಿಸುವುದು. ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ ಆರ್ಥಿಕ ಹಾಗೂ ಇನ್ನಿತರ ಎಲ್ಲಾ ಸೇವಾ ಸೌಲಭ್ಯ ಒದಗಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಲೋಕನ್ನವರ, ತಾಲೂಕಾಧ್ಯಕ್ಷ ಬಿ.ಆರ್‌. ಥರಕಾರ, ಕಾರ್ಯದರ್ಶಿ ಎಲ್.ಎಂ. ಬಡಕಲ, ಸಹ ಕಾರ್ಯದರ್ಶಿ ಎ.ಪಿ. ಪರಸಣ್ಣವರ, ಸಂಘಟನಾ ಕಾರ್ಯದರ್ಶಿ ವೈ.ಡಿ ಜಲ್ಲಿ, ಸರಕಾರಿ ನೌಕರ ಸಂಘದ ರಾಜ್ಯ ಪರಿಷತ್‌ ಸದಸ್ಯ ಆರ್‌.ಎಂ. ಮಹಾಲಿಂಗಪುರ, ಸದಸ್ಯರಾದ ಎಂ.ವೈ. ಸಣ್ಣಕ್ಕಿ, ಕೆ.ಆರ್‌ ಅಜ್ಜಪ್ಪನವರ, ಎಲ್.ಎಂ. ಬೂಮನ್ನವರ, ಕೆ.ಎಲ್. ಮೀಶಿ, ಪಿ.ಬಿ ಕುಲಕರ್ಣಿ, ಬಿ.ಎ ಡಾಂಗೆ, ಎಸ್‌.ಎಂ. ಮಂಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next