Advertisement
ಭಾರತ-ಚೀನ ನಡುವೆ ಈಗಾಗಲೇ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ. ಪ್ರತಿ ಮಾತುಕತೆಯ ವೇಳೆಯೂ ಭಾರತ, ಚೀನಕ್ಕೆ ಗಡಿಯಲ್ಲಿ ಏಪ್ರಿಲ್ 20ಕ್ಕೂ ಮೊದಲು ಇದ್ದ ಪರಿಸ್ಥಿತಿಯನ್ನೇ ಪುನಃ ನಿರ್ಮಾಣ ಮಾಡಲು ಸಹಕರಿಸುವಂತೆ ತಾಕೀತು ಮಾಡುತ್ತಾ ಬಂದಿದ್ದಾರೆ. ಇದರ ನಡುವೆಯೇ ಚೀನ, ಗಡಿ ರೇಖೆಯ ಬಳಿಯ ಪ್ರದೇಶಗಳ ಪುನರ್ ವಿಂಗಡಿಸುವ ಪ್ರಸ್ತಾವನೆಯನ್ನಿಟ್ಟಿದೆ. ಈ ಪ್ರಸ್ತಾವನೆಯನ್ನು ಭಾರತೀಯ ಸೇನಾಧಿಕಾರಿಗಳು ಸಾರಾಸಗಟಾಗಿ ತಳ್ಳಿಹಾಕಿದ್ದು, ಬಿಕ್ಕಟ್ಟಿಗೂ ಮೊದಲು ಇದ್ದ ಗಡಿ ಪರಿಸ್ಥಿತಿಯೇ ಮುಂದುವರಿಯಬೇಕು ಎಂದಿದ್ದಾರೆ. ಆದರೆ, ಭಾರತದ ತಾಕೀತನ್ನು ಚೀನ ಒಪ್ಪುತ್ತಿಲ್ಲ. ಹಾಗಾಗಿ, ಗಡಿ ರೇಖೆ ಬಳಿ ಭಾರತೀಯ ಸೈನಿಕರ ಜಮಾವಣೆಯನ್ನು ಇನ್ನಷ್ಟು ದಿನ ಮುಂದುವರಿಸಲು ನಿರ್ಧರಿಸಲಾಗಿದೆ. Advertisement
ಲಡಾಖ್ ಗಡಿಯಲ್ಲಿ ಕಾವಲು ಮುಂದುವರಿಸಲು ನಿರ್ಧಾರ
11:35 AM Aug 08, 2020 | mahesh |
Advertisement
Udayavani is now on Telegram. Click here to join our channel and stay updated with the latest news.