Advertisement

ಕನ್ನಡ ರಾಜ್ಯೋತ್ಸವ ಆಚರಣೆಗೆ ತೀರ್ಮಾನ

03:28 PM Oct 28, 2020 | Suhan S |

ಕಲಬುರಗಿ: ಕೋವಿಡ್‌-19 ಸೋಂಕು ಹಾಗೂ ಪರಿಷತ್‌ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯೋತ್ಸವ ಆಚರಣೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೂತ್ಸವ ದಿನ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನು ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿತ್ತು. ಈಗಲೂ ಕೋವಿಡ್‌ ಹಾಗೂ ಈಶಾನ್ಯ ಕರ್ನಾಟಕ ಶಿಕ್ಷಕರ ವಿಧಾನ ಪರಿಷತ್‌ ಚುನಾವಣೆಯ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಜ್ಯೋತ್ಸವವನ್ನೂ ಸರಳವಾಗಿ ಆಚರಿಸಬೇಕಾಗಿದೆ ಎಂದರು.

ನ.1ರಂದು ನಗರೇಶ್ವರ ಶಾಲಾ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ಇದಕ್ಕೂ ಮುನ್ನ ಅಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾ ಕೇಂದ್ರದಲ್ಲಿರುವ ಎಲ್ಲಾ ಕಚೇರಿಗಳ ಹಾಗೂ ವಿದ್ಯಾ ಸಂಸ್ಥೆಗಳಲ್ಲಿ ಸಂಬಂಧಪಟ್ಟ ಕಚೇರಿ ಮುಖ್ಯಸ್ಥರು ಮತ್ತು ಸಿಬ್ಬಂದಿ ಧ್ವಜಾರೋಹಣ ನೆರವೇರಿಸಿ ನಂತರ ನಗರೇಶ್ವರ ಶಾಲಾ ಮೈದಾನದಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮಕ್ಕೆ ಆಗಮಿಸಬೇಕು. ಆದರೆ, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಮೆರವಣಿಗೆ, ಸ್ತಬ್ದ ಚಿತ್ರಗಳ ನಿರ್ಮಾಣ ಹಾಗೂ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಇರುವುದಿಲ್ಲ ಎಂದು ಹೇಳಿದರು.

ಮುಖ್ಯ ಕಾರ್ಯಕ್ರಮದ ವೇದಿಕೆಯನ್ನು ಹೂದಾನಿಗಳಿಂದ ಸಿಂಗರಿಸಬೇಕು. ಧ್ವನಿವರ್ಧಕ, ಲೈಟಿಂಗ್‌ ಮುಂತಾದ ವ್ಯವಸ್ಥೆಗಳು ಸೇರಿದಂತೆ ವಹಿಸಲಾದ ಕೆಲಸ-ಕಾರ್ಯಗಳನ್ನು ಅ.31ರ ಸಂಜೆ 6 ಗಂಟೆಯೊಳಗಾಗಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮಿನಿ ವಿಧಾನಸೌಧ, ಮಹಾನಗರ ಪಾಲಿಕೆ ಕಚೇರಿ, ಕನ್ನಡಭವನ ಮುಂತಾದ ಸರ್ಕಾರಿ ಕಟ್ಟಡಗಳಿಗೆ ಅ.31 ಹಾಗೂ ನ.1ರಂದು ವಿದ್ಯುದ್ದೀಪಲಂಕಾರ ಮಾಡಬೇಕು ಎಂದು ಕಲಬುರಗಿ ಪಾಲಿಕೆ ಆಯುಕ್ತರು ಹಾಗೂ ಜೆಸ್ಕಾಂ ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ, ಖಾಸಗಿ ಅಂಗಡಿ,ವಾಣಿಜ್ಯ ಮಳಿಗೆಗಳ ಮೇಲೂ ದೀಪಾಲಂಕಾರ ಮಾಡುವಂತೆ ಹೈದ್ರಾಬಾದ್‌ ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷರಿಗೆ ತಿಳಿಸಬೇಕೆಂದು ಅವರು ಹೇಳಿದರು.

Advertisement

ಜಿಪಂ ಸಿಇಒ ಡಾ.ರಾಜಾ ಪಿ., ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಡಿವೈಎಸ್‌ಪಿ ಪ್ರಸನ್ನ ದೇಸಾಯಿ,ಅಪರ ಜಿಲ್ಲಾಧಿಕಾರಿ ಡಾ.ಶಂಕರ್‌ ವಣಿಕ್ಯಾಳ, ಎಸಿಪಿ ಅನುಪ್ ಕುಮಾರ್‌ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ರಾಜ್ಯೋತ್ಸವಅಂಗವಾಗಿ ಅಂಗಡಿ, ವಾಣಿಜ್ಯ ಮಳಿಗೆ ಮುಂತಾದವುಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯವಾಗಿ ಹಾಕಿರಬೇಕು. ನಾಮಫಲಕ ಇಲ್ಲದಂತಹ ಅಂಗಡಿ, ಮಳಿಗೆಗಳ ಗುರುತಿಸಿ ಕನ್ನಡದಲ್ಲಿ ನಾಮಫಲಕ ಹಾಕಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.  ಜ್ಯೋತ್ಸ್ನಾ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next