ಕೋಲಾರ: ಕೋವಿಡ್ ಸಂಕಷ್ಟದಲ್ಲಿಸರ್ಕಾರ ಘೋಷಣೆ ಮಾಡಿದ್ದ ಬೆಳೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಟೊಮೆಟೋ,ಆಲೂಗಡ್ಡೆ ಬೆಳೆ ಬಾಧಿಸುವ ಅಂಗಮಾರಿಊಜಿ ನೊಣಕ್ಕೆ ಅವಶ್ಯಕತೆಯಿರುವ ಔಷಧಿ ಉಚಿತವಾಗಿ ನೀಡಬೇಕು ಮತ್ತು ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಉನ್ನತ ಅಧಿಕಾರಿಗಳಿಂದತನಿಖೆ ನಡೆಸಲು ಒತ್ತಾಯಿಸಿ ಸೆ.14ರಂದು ಜಿಲ್ಲೆಗೆ ಆಗಮಿಸುತ್ತಿರುವ ತೋಟಗಾರಿಗೆ ಸಚಿವ ನಾರಾಯಣಗೌಡ ಅವರಿಗೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿ ಭಾನುವಾರ ನಡೆದ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಸಭೆಯಲ್ಲಿ ಸಚಿವರಿಗೆ ಬೆಳೆ ಸಮೇತ ಮುತ್ತಿಗೆ ಹಾಕಲು ನಿರ್ಣಯ ಕೈಗೊಂಡರು.
ಅವೈಜ್ಞಾನಿಕ ಸಮೀಕ್ಷೆ: ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣ ಗೌಡ ಮಾತನಾಡಿ, ರೈತರನ್ನು ಕೋವಿಡ್ ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಬೆಳೆ ನಷ್ಟ ಪರಿಹಾರ ಘೋಷಣೆ ಮಾಡಿತು. ಕ್ಯಾಪ್ಸಿಕಾಂ, ಟೊಮೆಟೋಗೆ ಹೆಕ್ಟೇರ್‌ಗೆ 18 ಸಾವಿರ, ಹೂವಿಗೆ 25 ಸಾವಿರ ಹಾಗೂ ಇತರೆ ಬೆಳೆಗಳಿಗೂ ಪರಿಹಾರ ಘೋಷಣೆ ಮಾಡಿತು. ಆದರೆ ಇಲಾಖೆಯ ಅಧಿಕಾರಿಗಳು ನಡೆಸಿದ ಅವೈಜ್ಞಾನಿಕ ಸಮೀಕ್ಷೆಯಿಂದರೈತರು ಪರಿಹಾರದಿಂದ ವಂಚನೆಗೆ ಒಳಗಾಗಿದ್ದಾರೆ ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಜಾರಿಗೆ ತಂದಿರುವಪಾಲಿಹೌಸ್ ಯೋಜನೆಯಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರೈತರಿಗೆ ಉಚಿತವಾಗಿ ಔಷಧಿಗಳನ್ನುವಿತರಣೆ ಮಾಡುವ ಮೂಲಕ ಸಂಕಷ್ಟದಿಂದ ಪಾರು ಮಾಡಲು ಸಚಿವರಗಮನಕ್ಕೆ ತರಲು ಮುತ್ತಿಗೆ ಹಾಕಬೇಕಾದ ಅನಿವಾರ್ಯ ಇದೆ, ಈ ಸಂದರ್ಭದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ಕೋರಿದರು.
ಸಭೆಯಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಎ.ನಳಿನಿ, ಕೋಲಾರ ತಾಲೂಕು ಅಧ್ಯಕ್ಷ ಈಕ್ಕಂಬಳ್ಳಿ ಮಂಜುನಾಥ್, ಶ್ರೀನಿವಾಸಪುರ ಅಧ್ಯಕ್ಷ ತೆರನಹಳ್ಳಿ ಆಂಜಿನಪ್ಪ, ಮುಳಬಾಗಿಲು ಅಧ್ಯಕ್ಷ ಫಾರೂಕ್‌ಪಾಷ, ಕೆಜಿಎಫ್ ಅಧ್ಯಕ್ಷ ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ಮಾಲೂರು ಅಧ್ಯಕ್ಷಹೊಸಹಳ್ಳಿ ವೆಂಟಕೇಶ್, ಚಂದ್ರಪ್ಪ, ರಾಮಣ್ಣ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ವಕ್ಕಲೇರಿ ಹನುಮಯ್ಯ, ಶಾಂತಮ್ಮ, ಲೋಕೇಶ್, ನಾಲ್ಲಂಡಹಳ್ಳಿಕೇಶವ, ಮಣಿ, ಐತಾಂಡಹಳ್ಳಿ ಮಂಜುನಾಥ್, ಚಲ, ಶಿವು ಇದ್ದರು.