Advertisement
ಜನ ಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರದ ಸೇವೆಯನ್ನು ಒದಗಿಸುವ ಜನ ಸೇವಕ ಯೋಜನೆಗೆ ಕೆಲವು ತಿಂಗಳ ಹಿಂದೆ ಚಾಲನೆ ನೀಡಲಾಗಿತ್ತು. ಆದರೆ, ಕೊರೊನಾದಿಂದ ಸೇವೆ ತಾತ್ಕಾಲಿಕ ಸ್ಥಗಿತ ಕಂಡಿತ್ತು. ಈ ಸೇವೆಯ ಪುನರ್ ಆರಂಭ ಕುರಿತು ಸಚಿವ ಸುರೇಶ್ ಕುಮಾರ್ ಅವರು ಗುರುವಾರ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದರು. ಯಾವುದೇ ಹೊರಗಿನ ವ್ಯಕ್ತಿ ಕುರಿತು ಇಂದು ಮುಕ್ತ ಮನಸ್ಸಿನಿಂದ ನೋಡುವ ಪರಿಸ್ಥಿತಿ ಇಲ್ಲ. ಈ ವಾತಾವರಣದಲ್ಲಿ ಜನಸೇವಕಪುನರಾರಂಭಿಸುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯ ಸಭೆಯಲ್ಲಿ ಬಂದಿದೆ. ಈ ಹಿನ್ನೆಲೆಯಲ್ಲಿ ಜೂನ್ ಮೊದಲ ವಾರದಲ್ಲಿ ಪರಿಸ್ಥಿತಿ ಅವಲೋಕಿಸಿ ಜನಸೇವಕ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ. ಈಗ ಜನಸೇವಕ ಕಾರ್ಯವನ್ನು ಪುನರಾರಂಭಿಸುವುದಕ್ಕೆ ಮುಖ್ಯ ಸಮಸ್ಯೆಯೆಂದರೆ ಸಮಾಜದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ಪರಸ್ಪರ ಸಂಶಯ. ನಮ್ಮ ಜನಸೇವಕರು ನಾಗರಿಕ ಸೇವೆ ಹೋದಾಗ ಮನೆಗಳಲ್ಲಿ ಯಾವ ರೀತಿ ಅವರನ್ನು ನೋಡುತ್ತಾರೆ ಎಂಬುದು ಇಂದಿನ ಪ್ರಶ್ನೆಯಾಗಿದೆ. ಹೀಗಾಗಿ ಜೂನ್ ಮೊದಲ ವಾರದಲ್ಲಿ ಈ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ನಗರದ ಎಲ್ಲಾ ಕ್ಷೇತ್ರಗಳಿಗೂ ನಂತರ ರಾಜ್ಯದ ಎಲ್ಲ ನಗರ ಪ್ರದೇಶಗಳಿಗೂ ಜನಸೇವಕ ಸೇವೆ ವಿಸ್ತರಿಸುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ನಾಗರಿಕರ
ಮನೆಬಾಗಿಲಿಗೆ ಸರ್ಕಾರಿ ಸೇವೆಗಳನ್ನು ತಲುಪಿಸುವುದು ಜನಸೇವಕನ ಕಾರ್ಯವಾಗಿದೆ. ಜನಸೇವಕ ಕಾರ್ಯಕ್ರಮದಡಿ ಸುಮಾರು 50 ನಾಗರಿಕ ಸೇವೆಗಳು ಲಭ್ಯವಿದೆ. ಕೊರೋನಾ ವೈರಸ್ ಆಕ್ರಮಣದಿಂದ ಜನಸೇವಕ ಬೀದಿಗೆ ಬರುವಂತಿಲ್ಲ. ಆದ್ದರಿಂದ ಈ ಅತ್ಯುತ್ತಮ ಸೇವೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಸರ್ಕಾರದ ಎಲ್ಲ ಕಚೇರಿಗಳು ಕ 45 ದಿನಗಳಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಜನಸೇವಕ ಸೇವೆಯೂ ತಾತ್ಕಾಲಿಕವಾಗಿ ನಿಂತಿತ್ತು ಎಂದು ವಿವರ ನೀಡಿದರು.