Advertisement

ಸಡಗರದ ಸ್ವಾತಂತ್ರ್ಯಾ ದಿನಾಚರಣೆಗೆ ನಿರ್ಧಾರ

04:56 PM Aug 05, 2018 | Team Udayavani |

ಕಲಬುರಗಿ: ನಗರದ ಡಿ.ಎ.ಆರ್‌. ಪೊಲೀಸ್‌ ಪರೇಡ್‌ ಮೈದಾನದಲ್ಲಿ ಆ. 15ರಂದು ದೇಶದ 72ನೇ ಸ್ವಾತಂತ್ರ್ಯಾ
ದಿನವನ್ನು ಸಡಗರದಿಂದ ಆಚರಿಸಲು ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಧಾರ ಕೈಗೊಂಡಿತು. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಿಸಲು ಹಾಗೂ ಧ್ವಜಾರೋಹಣ  ಕಾರ್ಯಕ್ರಮಕ್ಕೆ ಜಿಲ್ಲೆಯ ಜನಪ್ರತಿನಿಧಿಗಳನ್ನು,ಗಣ್ಯರನ್ನು ಆಹ್ವಾನಿಸಲು ತಿಳಿಸಲಾಯಿತು.

Advertisement

ಅಂದು ಬೆಳಗ್ಗೆ 7 ರಿಂದ 8:30 ರೊಳಗೆ ಎಲ್ಲ ಸರ್ಕಾರಿ, ಸರ್ಕಾರದ ನಿಗಮ ಮಂಡಳಿ, ಸರ್ಕಾರಿ ಸ್ವಾಮ್ಯದ ಎಲ್ಲ ಕಚೇರಿ ಹಾಗೂ ಎಲ್ಲ ಶಾಲೆ-ಕಾಲೇಜುಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಎಲ್ಲ ಅಧಿಕಾರಿಗಳು, ಶಾಲೆ-ಕಾಲೇಜು ಮಕ್ಕಳು ಪೊಲೀಸ್‌ ಪರೇಡ್‌ ಮೈದಾನಕ್ಕೆ 8:30 ರೊಳಗೆ ಆಗಮಿಸಬೇಕು. ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಸ್ವಾತಂತ್ರ್ಯಾ ದಿನಾಚರಣೆಗೆ ಆಗಮಿಸಿ ಹಾಜರಾತಿ ನೀಡಬೇಕೆಂದು ಸೂಚಿಸಲಾಯಿತು.

ಡಿಎಆರ್‌ ಮೈದಾನದಲ್ಲಿ ಆ. 15 ರಂದು ಬೆಳಗ್ಗೆ 9ಕ್ಕೆ ನಡೆಯುವ ಸ್ವಾತಂತ್ರ್ಯಾ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಆಕರ್ಷಕ ತ್ರಿವರ್ಣದ ಬಲೂನ್‌ ಹಾರಿಸುವ ವ್ಯವಸ್ಥೆ ಮಾಡಬೇಕು. ಆರೋಗ್ಯ, ತೋಟಗಾರಿಕೆ, ಪ್ರವಾಸೋದ್ಯಮ, ಅರಣ್ಯ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಸ್ತಬ್ಧ ಚಿತ್ರಗಳನ್ನು ನಿರ್ಮಿಸಬೇಕು ಎಂದು ತಿಳಿಸಲಾಯಿತು. ಶಾಲೆ-ಕಾಲೇಜು ವಿದ್ಯಾರ್ಥಿಗಳು ನೀಡುವ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಡಿ.ಎ.ಆರ್‌., ಕೆ.ಎಸ್‌.ಆರ್‌.ಪಿ. ಹಾಗೂ ಅಗ್ನಿಶಾಮಕದಳದಿಂದ ಆಕರ್ಷಕ ಕಾರ್ಯಕ್ರಮಗಳನ್ನು ನೀಡಬೇಕು. 

ನಗರದ ಎಲ್ಲ ಪ್ರಮುಖ ವೃತ್ತಗಳನ್ನು ಹಾಗೂ ಸರ್ಕಾರಿ ಕಚೇರಿಗಳಲ್ಲಿ ವಿದ್ಯುದ್ದೀಪಗಳಿಂದ ಅಲಂಕರಿಸಬೇಕು. ಸ್ವಾತಂತ್ರ್ಯಾ ದಿನಾಚರಣೆಯ ಬೆಳಗಿನ ಮುಖ್ಯ ಸಮಾರಂಭದಲ್ಲಿ ಸ್ವಾತಂತ್ರ್ಯಾ ಹೋರಾಟಗಾರರನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು, ಎಸ್‌.ಎಸ್‌.ಎಲ್‌.ಸಿ., ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಪಡೆದ, ಸಿ.ಇ.ಟಿ., ಎನ್‌.ಸಿ.ಸಿ. ವಿದ್ಯಾರ್ಥಿಗಳನ್ನು, ರಾಷ್ಟ್ರ ಮತ್ತು ರಾಜ್ಯಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರತಿಭಾವಂತ ಕ್ರೀಡಾಪಟುಗಳನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಕ್ರಮ ಕೈಗೊಳ್ಳಬೇಕು.
ಕಾರ್ಯಕ್ರಮಗಳಲ್ಲಿ ಸನ್ಮಾನಕ್ಕೆ ಬಳಸುವ ಅನುದಾನವನ್ನು ರೆಡ್‌ಕ್ರಾಸ್‌ ಸಂಸ್ಥೆಗೆ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಲೋಖಂಡೆ ಸ್ನೇಹಲ್‌ ಸುಧಾಕರ, ಶಿಷ್ಟಾಚಾರ ತಹಶೀಲ್ದಾರ
ಪ್ರಕಾಶ ಚಿಂಚೋಳಿಕರ, ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. 

Advertisement

ಸಭೆಗೆ ಗೈರಾದ 22 ಅಧಿಕಾರಿಗಳಿಗೆ ನೋಟಿಸ್‌
ಕಲಬುರಗಿ: ಸ್ವಾತಂತ್ರ್ಯಾದಿನಾಚರಣೆಯನ್ನು ಅಚುrಕಟ್ಟಾಗಿ ಹಾಗೂ ಸಂಭ್ರಮದಿಂದ ಆಚರಿಸಲು ಅನುಕೂಲವಾಗುವ ಹಾಗೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಜಿಲ್ಲಾಮಟ್ಟದ ಅ ಧಿಕಾರಿಗಳ ಸಭೆ ಕರೆಯಲಾಗುತ್ತದೆ. ಸ್ವಾತಂತ್ರ್ಯಾ ದಿನಾಚರಣೆಯನ್ನು ಹಗುರವಾಗಿ ತಿಳಿದು ಪೂರ್ವ ಸಿದ್ಧತಾ ಸಭೆಗೆ ಗೈರು ಹಾಜರಾದ 22 ಅ ಧಿಕಾರಿಗಳಿಗೆ ನೋಟೀಸು
ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯಾ ದಿನಾಚರಣೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶಕ್ಕೆ ಆ. 15ರಂದು ಸ್ವಾತಂತ್ರ್ಯಾ ದೊರೆತಿದೆ. ಸ್ವಾತಂತ್ರ್ಯಾ ದೊರೆತಿರುವುದರಿಂದಲೇ ಎಲ್ಲರೂ ತಮ್ಮ ಇಷ್ಟದಂತೆ ಹಾಗೂ ಗೌರವಯುತವಾಗಿ ಬದುಕುವಂತಾಗಿದೆ. ಸ್ವಾತಂತ್ರ್ಯಾ ದಿನಾಚರಣೆಯನ್ನು ಸರ್ಕಾರಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಪೂರ್ವಭಾವಿ ಸಿದ್ಧತಾ ಸಭೆಗೆ ಗೆ„ರು ಹಾಜರಾದ ಅಧಿಕಾರಿಗಳು ಯಾವುದೇ ಅನುಮತಿ ಪಡೆದಿಲ್ಲ. ಅವರಿಗೆ ನೋಟಿಸ್‌ ಜಾರಿ ಮಾಡುವುದಲ್ಲದೇ ರವಿವಾರ ಬೆಳಗ್ಗೆ 10:30 ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿರುವ ಗೈರು ಹಾಜರಾದ ಅಧಿಕಾರಿಗಳ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಬೇಕು ಎಂದರು.

ಜಿಲ್ಲೆಯಾದ್ಯಂತ ಸ್ವಾತಂತ್ರ್ಯಾ ದಿನಾಚರಣೆಯಂದು ಪ್ಲಾಸ್ಟಿಕ್‌ ರಾಷ್ಟ್ರಧ್ವಜಗಳ ಬಳಕೆ ಮಾಡುವುದನ್ನು ನಿಯಮಾನುಸಾರ ನಿಷೇಧಿ ಸುವಂತೆ, ಪ್ಲ್ಯಸ್ಟಿಕ್‌ ರಾಷ್ಟ್ರಧ್ವಜ ಮಾರಾಟ ಮಾಡುವವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಭಾಗದ ಬರಹಗಾರರನ್ನು ಉತ್ತೇಜಿಸಲು ಅವರು ಬರೆದಿರುವ ಪುಸ್ತಕಗಳನ್ನು ಸನ್ಮಾನಿತರಿಗೆ ನೀಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಸ್ವಾತಂತ್ರ್ಯಾದಿನಾಚರಣೆ ಕುರಿತು ಚರ್ಚಾ ಸ್ಪರ್ಧೆ ಹಮ್ಮಿಕೊಳ್ಳಬೇಕು.  
ಆರ್‌. ವೆಂಕಟೇಶಕುಮಾರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next