Advertisement
ಅಗತ್ಯ ಬಿದ್ದರೆ ಗಡಿಯ ಒಳಭಾಗದಲ್ಲಿ ಮತ್ತು ಗಡಿಯಾಚೆಗೆ ಕೂಡ ತೆರಳಿ ದಾಳಿ ನಡೆಸಲಿದೆ. ಪುಲ್ವಾಮಾ ಮತ್ತು ಉರಿಯಲ್ಲಿನ ಘಟನೆಗಳು ದುರದೃಷ್ಟಕರ. ಅದರ ವಿರುದ್ಧ ಪ್ರತೀಕಾರ ತೀರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಕೇವಲ ಹತ್ತು ನಿಮಿಷಗಳಲ್ಲಿ ತೀರ್ಮಾನ ಕೈಗೊಂಡಿದ್ದಾರೆ. ಪ್ರಧಾನಮಂತ್ರಿಗೆ ಖಚಿತ ತೀರ್ಮಾನ ಕೈಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಹೇಳಿದ್ದಾರೆ.
ನೀವು ನಿಮ್ಮ ದೇಶದ ವ್ಯವಸ್ಥೆಯನ್ನು ಮೊದಲು ಸುಧಾರಿಸಿಕೊಳ್ಳಿ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ನಮಗೆ ಯಾವಾಗ ಬೇಕಿದ್ದರೂ ವಶಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ಭಯೋತ್ಪಾದನೆ ವಿಚಾರದಲ್ಲಿ ಮೋದಿ ಅಮೆರಿಕ ಪ್ರವಾಸದ ವೇಳೆ ನೀಡಿದ್ದ ಜಂಟಿ ಹೇಳಿಕೆಯನ್ನು ಟೀಕಿಸಿದ ಪಾಕ್ ಸರ್ಕಾರದ ನಿಲುವಿಗೆ ಆಕ್ಷೇಪ ಮಾಡಿದ ಅವರು, “ಪ್ರಧಾನಿ ಮತ್ತು ಅಧ್ಯಕ್ಷ ಮೋದಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಉಗ್ರವಾಗಿ ಖಂಡಿಸಿದ್ದಾರೆ. ಇದು ಪಾಕಿಸ್ತಾನಕ್ಕೆ ಕಿರಿಕಿರಿಯಾಗಿದೆ”ಎಂದರು ರಾಜನಾಥ್ ಸಿಂಗ್.