ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ಹೈಜಂಪರ್ ತೇಜಸ್ವಿನ್ ಶಂಕರ್ ಅಮೆರಿಕದ ಅರಿಜೋನಾದಲ್ಲಿ “ಯುನೈಟೆಡ್ ಸ್ಟೇಟ್ಸ್ ಟ್ರ್ಯಾಕ್ ಆ್ಯಂಡ್ ಫೀಲ್ಡ್” ಆಯೋಜಿಸಿದ್ದ “ಜಿಮ್ ಕ್ಲಿಕ್ ಶೂಟೌಟ್ ಟೂರ್ನಿ”ಯ ಡೆಕತ್ಲಾನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.
10 ಹಂತದ ಕಠಿಣ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ 7,648 ಅಂಕ ಗಳಿಸಿದರು. ಚಿನ್ನದ ಪದಕ ಅಮೆರಿಕದವರೇ ಆದ ಟಿಲ್ ಸ್ಟೀನ್‌ಫೋರ್ತ್ (7,845) ಪಾಲಾಯಿತು.
ತೇಜಸ್ವಿನ್ ಶಂಕರ್ ರಾಷ್ಟ್ರೀಯ ದಾಖಲೆಯನ್ನು ಕೇವಲ ಹತ್ತು ಅಂಕಗಳಿಂದ ತಪ್ಪಿಸಿಕೊಂಡರು. 2011ರಲ್ಲಿ ಭಾರ್ತಿಂದರ್ ಸಿಂಗ್ 7,658 ಅಂಕಗಳೊಂದಿಗೆ ಈ ದಾಖಲೆ ನಿರ್ಮಿಸಿದ್ದರು.
24 ವರ್ಷದ ತೇಜಸ್ವಿನ್ ಶಂಕರ್ ಸದ್ಯ ಅಮೆರಿಕದಲ್ಲೇ ಉದ್ಯೋಗದಲ್ಲಿದ್ದಾರೆ. 2022ರ ಕಾಮನ್ವೆಲ್ತ್ ಗೇಮ್ಸ್ ಹೈಜಂಪ್‌ನಲ್ಲಿ ಅವರು ಕಂಚಿನ ಪದಕ ಜಯಿಸಿದ್ದರು.