Advertisement

ರಿವರ್ಸ್‌ ಶಾಪಿಂಗ್‌ಗಾಗಿ ಡೆಕಥ್ಲಾನ್‌ “ಉಲ್ಟಾ’!

12:54 AM Oct 15, 2022 | Team Udayavani |

ಬ್ರುಸೆಲ್ಸ್‌: ಕ್ರೀಡಾ ವಸ್ತುಗಳ ಪ್ರಮುಖ ಚಿಲ್ಲರೆ ಮಾರಾಟಗಾರ ಕಂಪೆನಿ ಡೆಕಥ್ಲಾನ್‌, ರಿವರ್ಸ್‌ ಶಾಪಿಂಗ್‌ ಅನ್ನು ಪ್ರೋತ್ಸಾಹಿಸಲು ಒಂದು ತಿಂಗಳ ಮಟ್ಟಿಗೆ ತನ್ನ ಹೆಸರನ್ನು ಉಲ್ಟಾ ಮಾಡಿ ಫ‌ಲಕ ಹಾಕಲು ನಿರ್ಧರಿಸಿದೆ.

Advertisement

ಬೆಲ್ಜಿಯಂನ ನಗರಗಳಾದ ಎವೆರೆ, ನಮೂರ್‌ ಮತ್ತು ಗೆಂಟ್‌ನಲ್ಲಿರುವ ಡೆಕಥ್ಲಾನ್‌ ಔಟ್‌ಲೆಟ್‌ಗಳಲ್ಲಿ ಉಲ್ಟಾ ಹೆಸರಿನ “”NOLHTACED’ ಎಂದು ನಾಮಫ‌ಲಕವನ್ನು ಅಳವಡಿಸಲಾಗಿದೆ.

ರಿವರ್ಸ್‌ ಶಾಪಿಂಗ್‌ನಲ್ಲಿ ಮುಖ್ಯವಾಗಿ ಖರೀದಿದಾರರು ಬಳಸಿದ ಅಥವಾ ಅನಗತ್ಯವಾದ ಆ್ಯತ್ಲೆಟಿಕ್‌ ವಸ್ತುಗಳನ್ನು ಚಿಲ್ಲರೆ ಮಾರಾಟಗಾರರಿಗೆ ಹಿಂದಿರುಗಿಸುತ್ತಾರೆ. ಅನಂತರ ಅವರು ಅದನ್ನು ರಿಪೇರಿ ಮಾಡಿ, ಕಡಿಮೆ ಮೊತ್ತಕ್ಕೆ ಮರು ಮಾರಾಟ ಮಾಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next