Advertisement

ಬ್ಯಾಂಕ್‌ ಅಭಿವೃದ್ಧಿಗೆ ಸಾಲ ಮರು ಪಾವತಿ ಅವಶ್ಯ

07:43 AM Jul 24, 2020 | Suhan S |

ರಾಮನಗರ: ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡುವುದು ಬ್ಯಾಂಕಿನ ಪ್ರಗತಿಗೆ ಪೂರಕ ಎಂದು ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಕೆ.ಷಡಕ್ಷರಿ ತಿಳಿಸಿದರು.

Advertisement

ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ನಿರ್ಮಿಸಿರುವ ಮೇಲಂತಸ್ತಿನ ಕಟ್ಟಡ ಮತ್ತು ಇ-ಸ್ಟಾಂಪಿಂಗ್‌ ಕೇಂದ್ರ ಉದ್ಘಾಟಿಸಿ ಮಾತ ನಾಡಿದರು. ನಿರ್ದೇಶಕರು ಬ್ಯಾಂಕ್‌ ಮತ್ತು ರೈತರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಬೇಕು. ರೈತರು ಮತ್ತು ಬ್ಯಾಂಕಿನ ನಡುವಿನ ಭಾಂಧವ್ಯ ಉತ್ತಮವಾಗಿದ್ದರೆ ಬ್ಯಾಂಕಿನ ಅಭಿವೃದ್ಧಿ ಸಾಧ್ಯವೆಂದರು.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಜಿ.ಪರಮೇಶ್‌, ಎಲ್ಲಾ ನಿರ್ದೇಶಕರ ಸಹಕಾರದಿಂದ ಮೇಲಂತಸ್ತಿನ ಕಟ್ಟಡ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದರು. ಕಸ್ಕಾರ್ಡ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ಸಿ. ಯತೀಶ್‌ಕುಮಾರ್‌, ಜಿಲ್ಲಾ ವ್ಯವಸ್ಥಾಪಕ ಎ.ಪಿ. ಲೋಕೇಶ್‌, ಪಿಕಾರ್ಡ್‌ ಬ್ಯಾಂಕ್‌ ಉಪಾಧ್ಯಕ್ಷ ಅಬ್ದುಲ್‌ ಖಲೀಲ್‌, ನಿರ್ದೇಶಕರಾದ ಎಂ.ಆರ್‌. ಶಿವಕುಮಾರಸ್ವಾಮಿ, ಡಿ.ಎಂ.ಮಹದೇವಯ್ಯ, ಯು. ನರಸಿಂಹಯ್ಯ, ಆರ್‌.ಮಲ್ಲೇಶ್‌, ಶಿವಮ್ಮ, ಕೃಷ್ಣ, ಅಪ್ಪಾಜಿ, ಶಿವಲಿಂಗಮ್ಮ, ಜಯಲಕ್ಷ್ಮಮ್ಮ, ಹರೀಶ್‌, ಎಸ್‌.ಬಿ.ರಾಜಣ್ಣ, ವ್ಯವಸ್ಥಾಪಕ ವೆಂಕಟೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ತಾಲೂಕು ಜೆಡಿಎಸ್‌ ಅಧ್ಯಕ್ಷ ರಾಜಶೇಖರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next