Advertisement

ಹೊಸ ಚಿಂತೆಯಿಂದ ಋಣ ತೀರಿಸುವೆ

12:19 PM Jul 24, 2018 | |

ಹುಣಸೂರು: ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿ ಕೈಹಿಡಿದ ಜೆಡಿಎಸ್‌ ಪಕ್ಷ ಮತ್ತು ಕಾರ್ಯಕರ್ತರು, ಮತದಾರರ ಋಣ ತಮ್ಮ ಮೇಲಿದ್ದು, ಸಂಘಟನೆ ಮೂಲಕ ಹಾಗೂ ಹೊಸ ಚಿಂತನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಋಣತೀರಿಸುವೆ ಎಂದು ಶಾಸಕ ಎಚ್‌.ವಿಶ್ವನಾಥ್‌ ವ್ಯಾಖ್ಯಾನಿಸಿದರು.

Advertisement

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ತಾಲೂಕು ಜೆಡಿಎಸ್‌ ವತಿಯಿಂದ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು ಜೆಡಿಎಸ್‌ ಪಕ್ಷಕ್ಕೆ ವರ್ಷದ ಹಿಂದಷ್ಟೆ ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿಯವರ ಕೃಪಾಶಿರ್ವಾದದಿಂದ ಸೇರಿದ ತಮ್ಮನ್ನು  ಕ್ಷೇತ್ರದ ಜನತೆ ಆಶೀರ್ವದಿಸಿದ್ದಾರೆ.

ನನ್ನ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬಿಎಸ್‌ಪಿ ಕಾರ್ಯಕರ್ತರು ಕ್ಷೇತ್ರದ ಮತದಾರರ ಮನವೊಲಿಸಿ ಮತ ಹಾಕಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಶಾಸಕರಾಗಿದ್ದ ಚಿಕ್ಕಮಾದು ನನ್ನ ಬರುವಿಕೆಗೆ ಅಸ್ಥಿಭಾರ ಹಾಕಿದ್ದರೆ, ತಾವು ಹುಣಸೂರಿಗೆ ಅಭ್ಯರ್ಥಿಯೆಂದು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ, ಜಿ.ಟಿ.ದೇವೇಗೌಡರೇ ಘೋಷಿಸಿದ್ದರು ನಾನೀಗ ಪಕ್ಷದ ಋಣ ತೀರಿಸಬೇಕಿದೆ ಎಂದರು.

ಆಮೂಲಾಗ್ರ ಬದಲಾವಣೆ: ಮುಂಬರುವ ಲೋಕಸಭಾ ಹಾಗೂ ಸ್ಥಳೀಯಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಬೇಕಿದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ, ಅ ಧಿಕಾರ ಕೊಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮೊದಲಿಗೆ ಪಕ್ಷದ ಅಧ್ಯಕ್ಷ ಮಹದೇವೇಗೌಡರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದಾಗಿ ವಾಗ್ಧಾನ ಮಾಡಿದರು.

ಹೊಸ ಪರಂಪರೆಯ ಆಡಳಿತ: ತಾವು ಜನರ ಕೈಗೆಸಿಗುವುದಿಲ್ಲವೆಂಬ ಕೂಗಿದೆ. ಗ್ರಾಪಂಗಳು ಸ್ಥಳೀಯ ವಿಧಾನಸಭೆ ಇದ್ದಂತೆ, ಇವುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಪಂ ಕೇಂದ್ರಕ್ಕೆ ತಾಲೂಕು ಮಟ್ಟದ ಅಧಿ ಕಾರಿಗಳನ್ನು ಕರೆಸಿ, ಜನಸ್ಪಂದನ ನಡೆಸಲಾಗುವುದು. ಆಮೂಲಕ ಗ್ರಾಪಂಗಳನ್ನು ಬಲಪಡಿಸಲಾಗುವುದು ಎಂದರು.

Advertisement

ಸಭೆಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಮಾದೇಗೌಡ,ಬಿ.ಎಸ್‌.ಪಿ.ಅಧ್ಯಕ್ಷ ಡಾ.ಮಹದೇವ್‌, ನಗರಸಭಾಧ್ಯಕ್ಷಶಿವಕುಮಾರ್‌, ಸದಸ್ಯರಾದ ಸುನಿತಾಜಯರಾಮೇಗೌಡ, ಎಚ್‌.ವೈ.ಮಹದೇವ್‌, ಸತೀಶ, ಜಿ.ಪಂ.ಸದಸ್ಯ ಸುರೇಂದ್ರ, ಮಾಜಿ ಸದಸ್ಯರಾದ ತೊಂಡಾಳುರಾಮಕೃಷ್ಣೇಗೌಡ, ಫಜಲುಲ್ಲಾ, ಪರಮೇಶ್‌, ಕುನ್ನೇಗೌಡ, ಪಕ್ಷದಮುಖಂಡರಾದ ಬಾಲಕೃಷ್ಣೇಗೌಡ, ಹರಿಹರ ಆನಂದಸ್ವಾಮಿ,ಶಿವಶೇಖರ, ಬಿಳಿಕೆರೆರಾಜು, ನಿಂಗರಾಜಮಲ್ಲಾಡಿ, ವಕೀಲಪುಟ್ಟರಾಜು ಮಾತನಾಡಿದರು. 

ಬೆಳ್ಳಿ ಕಿರೀಟ-ಗಧೆ ಸನ್ಮಾನ: ಅಖೀಲ ಕರ್ನಾಟಕ ಕುರುಬರ ಯುವಒಕ್ಕೂಟದವತಿಯಿಂದ ಶಾಸಕ ವಿಶ್ವನಾಥರಿಗೆ ಐದು ಕೆ.ಜಿ ತೂಕದ ಬೆಳ್ಳಿಗಧೆ ನೀಡಿ, ಕಿರೀಟತೊಡಿಸಿ ಸನ್ಮಾನಿಸಿದರು, ವಿವಿಧ ಸಂಘ-ಸಂಸ್ಥೆ ಪ್ರಮುಖರು ಅಭಿನಂದನೆ ಸಲ್ಲಿಸಿದರು. ತಾವು ದೇವರಾಜ ಅರಸರ ಗರಡಿಯ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರೆ, 71 ವಸಂತಕ್ಕೆ ಕಾಲಿರಿಸುತ್ತಿರುವ ಈ ಸಂದ್ಯಾಕಾಲದಲ್ಲಿ ಎಚ್‌.ಡಿ.ದೇವೇಗೌಡರ ಗರಡಿ ಮೂಲಕ ನಿರ್ಗಮನವಾಗುತ್ತಿದ್ದು, ಮನುಜ ಸಹಜ ಆಸೆ ಈಡೇರಿದೆ ಎಂದು ಶಾಸಕ ಎಚ್‌.ವಿಶ್ವನಾಥ್‌ ಸಂತಸ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next