Advertisement

ಸಾಲಬಾಧೆ: ವಿವಿಧೆಡೆ ನಾಲ್ವರು ರೈತರ ಆತ್ಮಹತ್ಯೆ

07:00 AM Jul 10, 2018 | Team Udayavani |

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಸಾಲಬಾಧೆ ತಾಳದೆ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹಳೇಬೀಡು ಗ್ರಾಮದ ಪುಟ್ಟಸ್ವಾಮಿ(53) ಎಂಬುವರು ನೇಣು
ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂದೂವರೆ ಎಕರೆ ಜಮೀನು ಹೊಂದಿರುವ ಪುಟ್ಟಸ್ವಾಮಿ, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ 60 ಸಾವಿರ ರೂ. ಸಾಲ ಪಡೆದಿದ್ದು, ಖಾಸಗಿ ವ್ಯಕ್ತಿಗಳಿಂದ ಸುಮಾರು 6ಲಕ್ಷ ರೂ.ಗಳವರೆಗೆ ಕೈಸಾಲ ಮಾಡಿದ್ದರು ಎನ್ನಲಾಗಿದೆ. 

ಖಾಸಗಿ ವ್ಯಕ್ತಿಗಳಿಂದ ಪಡೆದಿದ್ದ ಸಾಲ ವಾಪಸ್‌ ನೀಡುವಂತೆ ಸಾಲಗಾರರು ಪೀಡಿಸುತ್ತಿದ್ದರು, ಇದರಿಂದ ಒತ್ತಡಕ್ಕೆ ಒಳಗಾದ ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ.

ಬೀದರ ತಾಲೂಕಿನ ಮಿರ್ಜಾಪುರ ಗ್ರಾಮದ ರಾಜರೆಡ್ಡಿ ಪ್ರಭುರೆಡ್ಡಿ ಚೋಟೆನವರ್‌ (31) ಎಂಬುವರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇವರಿಗೆ 3.14 ಎಕರೆ ಭೂಮಿ ಇದ್ದು, ಸ್ಥಳೀಯ ಪಿಕೆಜಿಬಿ, ಎಸ್‌ಬಿಐ,ಪಿಕೆಪಿಎಸ್‌ ಬ್ಯಾಂಕಿನಲ್ಲಿ 2 ಲಕ್ಷಕ್ಕೂ ಅಧಿಕ ಸಾಲ ಇದೆ ಎಂದು ತಿಳಿದು ಬಂದಿದೆ.

ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ (ಎಂ) ಗ್ರಾಮದ ಪಂಡಿತ ಮಲ್ಲಪ್ಪ ಮದಪೆ (52) ಬಾವಿಗೆ
ಬಿದ್ದು ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಹೆಸರಿನಲ್ಲಿ 2 ಎಕರೆ, 27 ಗುಂಟೆ ಜಮೀನಿದ್ದು, ನಗರದ ಕಾರ್ಪೋ ರೇಶನ್‌ ಬ್ಯಾಂಕ್‌ನಲ್ಲಿ 2.90 ಲಕ್ಷ ರೂ. ಸೇರಿ ಇತರ ಖಾಸಗಿ ಸಾಲವಿದೆ ಎನ್ನಲಾಗಿದೆ. ಮೃತ ರೈತನಿಗೆ ಪುತ್ರ ಹಾಗೂ ಐವರು ಪುತ್ರಿಯರಿದ್ದು, ಕಳೆದ ಒಂದು ತಿಂಗಳ ಹಿಂದೆಯಷ್ಟೇ ಮಗಳ ಮದುವೆ ಮಾಡಿದ್ದರು. ಹೀಗಾಗಿ ಸಾಲದ ಹೊರೆ ಹೆಚ್ಚಾಗಿತ್ತು ಎನ್ನಲಾಗಿದೆ.

Advertisement

ಚನ್ನಮ್ಮ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ರೈತ ಚಿಂತಾಮಣಿ ಬಸವಣ್ಣೆಪ್ಪಾ ದಾಸ್ತಿಕೊಪ್ಪ (58) ನೇಣಿಗೆ ಶರಣಾಗಿದ್ದಾರೆ. ಗ್ರಾಮದಲ್ಲಿ 7 ಎಕರೆ ಜಮೀನು ಹೊಂದಿದ್ದ ಇವರು ಕರ್ನಾಟಕ ವಿಕಾಸ ಬ್ಯಾಂಕಿನಲ್ಲಿ 3 ಲಕ್ಷ ರೂ. ಸಾಲ ಹಾಗೂ ಹುಬ್ಬಳ್ಳಿಯ ಖಾಸಗಿ ಫೈನಾನ್ಸ್‌ನಲ್ಲಿ ಟ್ರ್ಯಾಕ್ಟರ್  ಖರೀದಿಗೆ 10 ಲಕ್ಷ ಸಾಲ ಮಾಡಿಕೊಂಡಿದ್ದರು. ಮಗಳ ಮದುವೆಗಾಗಿ ಮಾಡಿದ ಕೈಸಾಲ ಕೂಡ ಇತ್ತು ಎನ್ನಲಾಗಿದೆ. ಟ್ರ್ಯಾಕ್ಟರ್  ಸಾಲ ಮರುಪಾವತಿಸಲು ಫೈನಾನ್ಸ್‌ನವರು ರೈತನ ಮೇಲೆ ಒತ್ತಡ ಹಾಕಿದ್ದರೂ ಮರುಪಾವತಿಸದೇ ಇರುವುದರಿಂದ ಅವರು ಟ್ರಾÂಕ್ಟರ್‌ ಜಪ್ತಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next