Advertisement

ಸಾಲ ವಸೂಲಾತಿ ಪ್ರಮಾಣ ಹೆಚ್ಚಳ

06:00 AM Aug 19, 2018 | |

ಹೊಸದಿಲ್ಲಿ: ಮರುಪಾವತಿಯಾಗದ ಸಾಲದ ವಿರುದ್ಧ ಬ್ಯಾಂಕ್‌ಗಳು ಕೈಗೊಳ್ಳುತ್ತಿರುವ ಕಠಿಣ ಕ್ರಮದಿಂದಾಗಿ ವಸೂಲಾತಿ ಪ್ರಮಾಣ ಹೆಚ್ಚಾಗಿದೆ. ಈ ವಿತ್ತವರ್ಷದ ಮೊದಲ ತ್ತೈಮಾಸಿಕದಲ್ಲೇ 36,500 ಕೋಟಿ ರೂ. ಮರುಪಾವತಿಯಾಗಿದ್ದು, ಇದು 2017-18ರ ಇಡೀ ವರ್ಷದಲ್ಲಿ ವಸೂಲಾತಿಯಾದ ಸಾಲದ ಅರ್ಧದಷ್ಟಾಗಿದೆ. ಕಳೆದ ವಿತ್ತ ವರ್ಷದಲ್ಲಿ 74,562 ಕೋಟಿ ರೂ. ಸಾಲ ವಸೂಲಾತಿಯಾಗಿತ್ತು. ಇದೇ ವೇಗದಲ್ಲಿ ವರ್ಷಪೂರ್ತಿ ಸಾಲ ವಸೂಲಾತಿ ಪ್ರಕ್ರಿಯೆ ನಡೆದರೆ, ಕಳೆದ ವರ್ಷಕ್ಕಿಂತ ದುಪ್ಪಟ್ಟು ಪ್ರಮಾಣದ ಸಾಲ ವಸೂಲಾಗಲಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಾಲ ವಸೂಲಿ (8445 ಕೋಟಿ ರೂ.) ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಎಸ್‌ಬಿಐ  (2426 ಕೋಟಿ ರೂ.) ಕೂಡ ಗುರಿಗಿಂತ ಹೆಚ್ಚಿನ ಸಾಲ ವಸೂಲಾತಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next