Advertisement

ದಟ್ಟಣೆ, ಪಾರ್ಕಿಂಗ್‌ ಶುಲ್ಕ ವಿಧಿಸಲು ಚರ್ಚೆ

05:48 AM May 22, 2020 | Lakshmi GovindaRaj |

ಬೆಂಗಳೂರು: ಅತ್ತ ಲಾಕ್‌ಡೌನ್‌ ತೆರವಾಗುತ್ತಿದ್ದಂತೆ, ಇತ್ತ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಸಂಚಾರದಟ್ಟಣೆ ಮುನ್ಸೂಚನೆ ಬೆನ್ನಲ್ಲೇ ಸಂಚಾರ ದಟ್ಟಣೆ ಶುಲ್ಕ ಮತ್ತು ವಾಹನ ನಿಲುಗಡೆ ಶುಲ್ಕ ವಿಧಿಸುವ ಕುರಿತ ಚರ್ಚೆ ಮತ್ತೆ  ಮುನ್ನೆಲೆಗೆ ಬಂದಿದೆ. ಕೊರೊನಾ ಭೀತಿಯಿಂದ ಮುಂಬರುವ ದಿನಗಳಲ್ಲಿ ಸಮೂಹ ಸಾರಿಗೆಯಿಂದ ಖಾಸಗಿ ವಾಹನಗಳತ್ತ ಮುಖಮಾಡುವ ಸಾಧ್ಯತೆ ಹೆಚ್ಚಿದೆ.

Advertisement

ಈ ಮೊದಲೇ ಸಂಚಾರದಟ್ಟಣೆಯಿಂದ ನರಕವಾಗಿದ್ದು, ಅದು ಇನ್ನಷ್ಟು ಉಲ್ಬಣಗೊಳ್ಳಲಿದೆ. ಈ ದಟ್ಟಣೆಯೊಂದಿಗೇ ನಗರದ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಪ್ರಮಾಣ ಏರಿಕೆ ಆಗಲಿದ್ದು, ಮತ್ತೂಂದು ರೀತಿಯ ಆರೋಗ್ಯ ಸಮಸ್ಯೆಗೆ ಎಡೆಮಾಡಿಕೊಡಲಿದೆ. ಆದ್ದರಿಂದ ಸಮೂಹ ಸಾರಿಗೆಗೆ  ಹೆಚ್ಚು ಒತ್ತುನೀಡುವ ಅವಶ್ಯಕತೆಯಿದ್ದು, ಸಂಚಾರದಟ್ಟಣೆ ಮತ್ತು ವಾಹನ ನಿಲುಗಡೆ ಶುಲ್ಕ ವಿಧಿಸಲು ಇದು ಸಕಾಲ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ  ಟ್ರಾನ್ಸ್‌ಪೊರ್ಟ್‌ ಸಿಸ್ಟ್‌ಂ ಎಂಜಿನಿಯರಿಂಗ್‌ ತಂಡ “ಕೋವಿಡ್‌-19 ನಂತರ ಸುಸ್ಥಿರ ಸಾರಿಗೆಗೆ ಕೈಗೊಳ್ಳಬೇಕಾದ ಕ್ರಮಗಳು’ ಕುರಿತ ಅಧ್ಯಯನ ಮಾಡಿ ರೂಪುರೇಷೆ ಸಿದಟಛಿಪಡಿಸಿದೆ. ಅದರಂತೆ ಲಾಕ್‌ಡೌನ್‌ ತೆರವು ಬಳಿಕ ಸಂಚಾರದಟ್ಟಣೆ  ಹೆಚ್ಚಲಿದ್ದು, ನಿರ್ವಹಣೆ ತಲೆನೋವಾಗಿ ಪರಿಣಮಿಸಲಿದೆ. ಇದನ್ನು ತಗ್ಗಿಸುವುದರ ಜತೆಗೆ ಜನರನ್ನು ಸಮೂಹ ಸಾರಿಗೆಯತ್ತ ಆಕರ್ಷಿಸಲು ದಟ್ಟಣೆ ಶುಲ್ಕ, ವಾಹನ ನಿಲುಗಡೆ ಶುಲ್ಕ ವಿಧಿಸುವ ಮೂಲಕ ಖಾಸಗಿ ವಾಹನಗಳ ಬಳಕೆ  ತಗ್ಗಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದೆ.

ಹಿಂದೆಯೂ ಪ್ರಸ್ತಾವನೆ: ಹಲವು ವರ್ಷಗಳಿಂದ ಈ ಪ್ರಸ್ತಾವನೆಗಳು ಇವೆ. ಈಚೆಗೆ ಬಿಬಿಎಂಪಿ ಬಜೆಟ್‌ ನಲ್ಲಿ ಕೂಡ ಪಾರ್ಕಿಂಗ್‌ ಶುಲ್ಕದ ಬಗ್ಗೆ ಪ್ರಸ್ತಾಪಿಸಲಾಗಿತ್ತು. “ಪೀಕ್‌ ಅವರ್‌’ನಲ್ಲಿ ನಗರದ ಹೆಚ್ಚು ದಟ್ಟಣೆ ಇರುವ ಹೃದಯಭಾಗಗಳಲ್ಲಿ  ಖಾಸಗಿ ವಾಹನಗಳ ಪ್ರವೇಶ ಮತ್ತು ನಿಲುಗಡೆಗೆ ಶುಲ್ಕ ವಿಧಿಸಬೇಕು ಎಂಬ ಒತ್ತಾಯ ಬಿಎಂಟಿಸಿ, ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಮತ್ತಿತರ ಸ್ಥಳೀಯ ಸಂಸ್ಥೆಗಳು ಕೂಡ ಸರ್ಕಾರದ ಮೇಲೆ ಹಿಂದಿನಿಂದಲೂ ಒತ್ತಡ  ಹಾಕುತ್ತಿವೆ. ಮುಂದುವರಿದ ದೇಶಗಳಲ್ಲಿ ಈ ವ್ಯವಸ್ಥೆಯಿದೆ. ಇದರ ಮುಖ್ಯ ಉದ್ದೇಶ ಸಮೂಹ ಸಾರಿಗೆಯನ್ನು ಪ್ರೋತ್ಸಾಹಿಸುವುದು. ಪ್ರಸ್ತುತ ಕೊರೊನಾ ಹಾವಳಿ ಯಿಂದ ಸಮೂಹ ಸಾರಿಗೆಗೆ ಹಿನ್ನಡೆಯಾಗಿರುವ ಕಾರಣ ಈ ಚರ್ಚೆ  ಮುನ್ನೆಲೆಗೆ ಬಂದಿದೆ.

ಕಂಪನಿಗಳ ಕೆಲಸದ ಸಮಯ ಪರಿಷ್ಕರಣೆ: ಮತ್ತೂಂದೆಡೆ ಪ್ರಯಾಣ ದರ ಇಳಿಕೆ, ಬಸ್‌ಗಳ ಸಂಖ್ಯೆ ಹಾಗೂ ಫ್ರೀಕ್ವೆನ್ಸಿಗಳನ್ನು ಹೆಚ್ಚಿಸುವ ಅಗತ್ಯವೂ ಇದೆ ಎಂದು ಹೇಳಿರುವ ಐಐಎಸ್ಸಿ, ಒಮ್ಮೆಲೆ ಸಂಚಾರ ದಟ್ಟಣೆ ಉಂಟಾಗದಿರಲು ಐಟಿ  ಮತ್ತು ಬಹುರಾಷ್ಟ್ರೀಯ ಕಂಪನಿ ಉದ್ಯೋಗಿಗಳಿಗೆ ವರ್ಕ್‌ ಫ್ರಾಮ್‌ ಹೋಂ ವ್ಯವಸ್ಥೆಯನ್ನು ಇನ್ನಷ್ಟು ದಿನಗಳ ಕಾಲ ಮುಂದುವರಿಸಬೇಕು. ಅನಿವಾರ್ಯ ವಿದ್ದರೆ ಮಾತ್ರ ಕಚೇರಿಗೆ ಬರಬೇಕು ಈ ಕುರಿತು ಸರ್ಕಾರ ಮಧ್ಯಪ್ರವೇಶಿಸಿ  ಕಂಪನಿಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

Advertisement

ಕೇರಳ ಪಂಚಾಯ್ತಿ ಮಟ್ಟದಲ್ಲಿ ಪ್ರತಿ ಬಸ್‌ ನಿಲ್ದಾಣಗಳಲ್ಲಿ ಕೈತೊಳೆಯುವ ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಇದೇ ಮಾದರಿಯನ್ನು  ನಗರದಲ್ಲಿ ಅನುಸರಿಸಬಹುದು. ಹಿರಿಯ ನಾಗರಿಕರ ನೆಪದಲ್ಲಿ ಜನ ಖಾಸಗಿ ವಾಹನಗಳತ್ತ ಮುಖಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯ್ತಿ ಪಾಸಿನ ಜತೆಗೆ ಹೆಚ್ಚು ಆಸನಗಳನ್ನು ಮೀಸಲಿಡಬೇಕು ಎಂಬ ಅಂಶಗಳನ್ನೂ ಅಧ್ಯಯನ ವರದಿ ತಿಳಿಸಲಾಗಿದೆ.

ಬಸ್‌ಗಳ ಆದ್ಯತಾ ಪಥ ನಿರ್ಮಾಣಕ್ಕೆ ಅವಕಾಶ: ಆಟೋ/ ಮೆಟ್ರೋ/ ಬಸ್‌/ ರೈಡ್‌ ಶೇರ್‌ ಸರ್ವಿಸ್‌ಗಳನ್ನು ಇಂಟಿಗ್ರೇಟ್‌ ಮಾಡಿ, ಮೊದಲ ಮತ್ತು ಕೊನೆಯ ಸಂಪರ್ಕ (ಫ‌ಸ್ಟ್‌ ಆಂಡ್‌ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ) ಕಲ್ಪಿಸಬಹುದು. ಇಂಟಿಗ್ರೇಟೆಡ್‌ ಸಮೂಹ ಸಾರಿಗೆ ಬಳಕೆದಾರರಿಗೆ ರಿಯಾಯ್ತಿ ದರ ಮತ್ತಿತರ ಆದ್ಯತೆ ನೀಡುವುದು.

ಲಾಕ್‌ಡೌನ್‌ನಿಂದ ರೈಲುಗಳ ಸಂಚಾರ ರದ್ದುಗೊಳಿದ್ದರಿಂದ ರೈಲ್ವೆ ಚೈಲ್ಡ್‌ಲೈನ್‌ ಕೂಡ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಇದೀಗ ರೈಲುಗಳ ಸೇವೆ ಆರಂಭಗೊಳ್ಳುತ್ತಿದ್ದು, ಕಾರ್ಯಾಚರಣೆ ಪುನರಾರಂಭಗೊಳ್ಳಲಿದೆ. 
-ಮೌನೇಶ್‌, ಯಶವಂತಪುರ ರೈಲ್ವೆ ಚೈಲ್ಡ್‌ ಲೈನ್‌ ವಿಭಾಗದ ಸಂಯೋಜಕ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next