Advertisement
ಹುಬ್ಬಳ್ಳಿ ಆನಂದನಗರದ ನಿವಾಸಿ ಸಲೀಂ ಮಕಾಂದಾರ (35), ಮರಾಠಾ ಕಾಲೊನಿ ನಿವಾಸಿ ಆಶೀತ್ ಹಿರೇಮಠ(32), ಹುಬ್ಬಳ್ಳಿ ಆನಂದನಗರದ ಇನೋ°ರ್ವ ನಿವಾಸಿ ಮೆಹಬೂಬ್ ದೇಸಾಯಿ (55) ಹಾಗೂ ಹುಬ್ಬಳ್ಳಿಯ ಶಿವಶಕ್ತಿನಗರದ ಮಾಬೂಸಾಬ್ ರಾಯಚೂರ (48), ಕುಮಾರೇಶ್ವರ ನಗರ ನಿವಾಸಿ, ಅಸ್ಲಂ ಮುಲ್ಲಾ (43) ಹಾಗೂ ಧಾರವಾಡ ತಪೋವನ ನಿವಾಸಿ ಮಹೇಶ್ವರ ಹಿರೇಮಠ (65) ಮೃತರು. ಅವಶೇಷಗಳಡಿ ಮತ್ತಷ್ಟು ಮಂದಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ತಂಡ ಕಟ್ಟಡದ ಮೇಲಿನ ಕೆಲವು ಅವಶೇಷಗಳನ್ನು ಕೊರೆದು ಬದುಕಿರುವವರ ಚಲನವಲನ ವೀಕ್ಷಿಸಿತು.
Related Articles
Advertisement
ನಾಯಿ-ಕ್ಯಾಮರಾ ಬಳಕೆ:ಎನ್‌ಡಿಆರ್‌ಎಫ್ ತಂಡದ ಶ್ವಾನ ದಳವು ಬೆಳಗ್ಗೆ 5 ಗಂಟೆಯಿಂದಲೇ ಕಾರ್ಯಾಚರಣೆಗೆ ಇಳಿಯಿತು. ನಾಲ್ಕು ನುರಿತ ಶ್ವಾನಗಳು ಅವಶೇಷಗಳಡಿ ಸಿಲುಕಿದ ವ್ಯಕ್ತಿಗಳ ಪತ್ತೆಗೆ ನೆರವಾದವು. ಇದರ ಆಧಾರದ ಮೇಲೆಯೇ “ವಿಕ್ಟಿಮ್ ಲೋಕೇಶನ್ ಕ್ಯಾಮರಾ’ಗಳನ್ನು ಬಳಸಿಕೊಂಡು ಕೆಳಗಡೆ ಸಿಲುಕಿದವರ ರಕ್ಷಣೆಗೆ ವ್ಯೂಹ ರಚಿಸಲಾಯಿತು. ಈ ಕ್ಯಾಮರಾದಲ್ಲಿ ಬರೀ ಉಸಿರಾಟವಿದ್ದರೂ ವ್ಯಕ್ತಿ ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಿರುವುದರಿಂದ ನೆಲಮಹಡಿಯಲ್ಲಿ ಸಿಲುಕಿದವರ ಚಲನ-ವಲನ ಗುರುತಿಸಲು ಇದನ್ನು ಬಳಕೆ ಮಾಡಿಕೊಳ್ಳಲಾಯಿತು. ಈ ನಡುವೆ ನೆಲಮಹಡಿಯಲ್ಲಿದ್ದವರ ರಕ್ಷಣೆಗೆ ಬುಧವಾರ ಮಧ್ಯಾಹ್ನ 12:30ರ ಸುಮಾರಿಗೆ ಕಟ್ಟಡದ ಮುಂಭಾಗದಲ್ಲಿ ಅಂದರೆ ಪಶ್ಚಿಮ ದಿಕ್ಕಿನಿಂದ ಜೆಸಿಬಿ ಬಳಸಿಕೊಂಡು ದೈತ್ಯ ಸುರಂಗ ಮಾರ್ಗವನ್ನು ಕೊರೆಯಲಾಯಿತು. ಅ ಮೂಲಕ ಬಣ್ಣದ ಅಂಗಡಿ ಮತ್ತು ಪೀಠೊಪಕರಣದ ಅಂಗಡಿಗಳಲ್ಲಿ ಇದ್ದವರ ರಕ್ಷಣೆಗೆ ಯತ್ನಿಸಲಾಯಿತಾದರೂ, ಅಲ್ಲಿಂದ ಇಬ್ಬರ ಶವಗಳನ್ನು ಹೊರತರಲಾಯಿತು. ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆಯ ಕಲಂ 304 ಅಡಿ ಕಟ್ಟಡದ ನಾಲ್ವರು ಮಾಲೀಕರು ಹಾಗೂ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಕುಸಿದ ಕಟ್ಟಡಕ್ಕೆ ಪರವಾನಗಿ ನೀಡುವ ಹಂತ, ತಾಂತ್ರಿಕ ದೋಷ ಅಥವಾ ಯಾವುದೇ ಲೋಪಗಳಿದ್ದರೂಕೂಡಾ ತಜ್ಞರನ್ನೊಳಗೊಂಡ ಸಮಿತಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ನಿರ್ದಾಕ್ಷಿಣ್ಯವಾಗಿ ತಪ್ಪಿತಸ್ಥರ
ವಿರುದಟಛಿ ಕ್ರಮ ಜರುಗಿಸಲಾಗುವುದು.
● ಆರ್.ವಿ.ದೇಶಪಾಂಡೆ, ಸಚಿವ