Advertisement

ಉತ್ತರ ಪ್ರದೇಶ, ಉತ್ತರಾಖಂಡ: ವಿಷ ಮದ್ಯ ಸೇವನೆ ಬಲಿ ಸಂಖ್ಯೆ 70ಕ್ಕೆ

11:46 AM Feb 09, 2019 | udayavani editorial |

ಹರಿದ್ವಾರ/ಸಹರಣಪುರ : ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಎರಡು ನರೆಕರೆಯ ಜಿಲ್ಲೆಗಳಲ್ಲಿ ಸಂಭವಿಸಿರುವ ವಿಷ ಮದ್ಯ ಸೇವನೆ ದುರಂತಕ್ಕೆ ಬಲಿಯಾಗಿರುವವರ ಸಂಖ್ಯೆ 70ಕ್ಕೇರಿದೆ. ಹರಿದ್ವಾರ ಗ್ರಾಮದಲ್ಲೂ ಜನರು ವಿಷ ಮದ್ಯ ಸೇವಿಸಿ ಸಾವಿಗೀಡಾಗಿದ್ದಾರೆ.

Advertisement

11 ಮೃತ ದೇಹಗಳ ಅಂಗಾಂಗಳ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದ್ದು ಇವರ ಸಾವು ವಿಷ ಮದ್ಯ ಸೇವನೆಯಿಂದ ಆಗಿರುವುದೇ ಅಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಬೇಕಿದೆ. 

ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಬಾಲುಪುರ ಮತ್ತು ನೆರೆಕರೆಯ ಗ್ರಾಮಗಳಲ್ಲಿ ವಿಷ ಮದ್ಯ ಸೇವನೆಗೆ 24 ಮಂದಿ ಬಲಿಯಾಗಿದ್ದಾರೆ ಎಂದು ರಾಜ್ಯದ ಹೆಚ್ಚುವರಿ ಮಹಾ ನಿರ್ದೇಶಕ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ. 

ಉತ್ತರ ಪ್ರದೇಶದ ನೆರೆಯ ಸಹರಣಪುರ ಜಿಲ್ಲೆಯಿಂದ ಮರಳಿದ ಕನಿಷ್ಠ 46 ಮಂದಿ ಬಾಲುಪುರದಲ್ಲಿ ಗುರುವಾರ ರಾತ್ರಿ ವಿಷ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಸಹರಣಪುರ ಜಿಲ್ಲೆಯೊಂದರಲ್ಲೇ 35 ಮಂದಿ ಸಾವಿಗೀಡಾಗಿದ್ದಾರೆ. 

ಉತ್ತರಾಖಂಡದಲ್ಲಿ  ವಿಷ ಮದ್ಯ ಸೇವಿಸಿದವರ ಪೈಕಿ  ಸುಮಾರು 20 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next