Advertisement

ಪ್ರವಾಹ: ಬಿಹಾರ, ಉ.ಪ್ರದೇಶದಲ್ಲಿ 386 ಮಂದಿ ಸಾವು

09:00 AM Aug 23, 2017 | Team Udayavani |

ನವದೆಹಲಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಬಿಹಾರದಲ್ಲಿ ಈವರೆಗೆ 304 ಮಂದಿ ಸಾವನ್ನಪ್ಪಿದ್ದು, ಸುಮಾರು 1.4 ಕೋಟಿ ಜನರು ಸಂತ್ರಸ್ತರಾಗಿದ್ದಾರೆ. ರಾಜ್ಯದ ಅರಾರಿಯಾ, ಪುರ್ನಿಯಾ, ಕತಿಹಾರ, ಮೋತಿಹಾರ, ದರ್ಬಾಂಗ ಮತ್ತಿತರ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದ್ದು, ಈ ಪೈಕಿ ಅರಾರಿಯಾದಲ್ಲಿ 74 ಮಂದಿ ಮೃತಪಟ್ಟಿದ್ದಾರೆ. ನೆರೆ ಸಂತ್ರಸ್ತ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್, ಸೇನೆ, ವಾಯುಪಡೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಮಂಗಳವಾರ ಹಲವೆಡೆ ಪ್ರವಾಹ ತುಸು ತಗ್ಗಿದೆ.

Advertisement

ಉ.ಪ್ರ.ದಲ್ಲಿ 82 ಸಾವು: ಉತ್ತರಪ್ರದೇಶ, ಅಸ್ಸಾಂನಲ್ಲೂ ಪ್ರವಾಹ ಮುಂದುವರಿದಿದೆ. ಉತ್ತರಪ್ರದೇಶದಲ್ಲಿ ಮಂಗಳವಾರ 10 ಮಂದಿ ಅಸುನೀಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. 25 ಜಿಲ್ಲೆಗಳ 2,855 ಹಳ್ಳಿಗಳು ಹಾನಿಗೊಳಗಾಗಿವೆ. 50 ಸಾವಿರ ಸಂತ್ರಸ್ತರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next