Advertisement

7 ಐಸಿಸ್‌ ಸಂಪರ್ಕಿತ ಉಗ್ರರಿಗೆ ಮರಣದಂಡನೆ

08:58 PM Mar 01, 2023 | Team Udayavani |

ನವದೆಹಲಿ: ಇಸ್ಲಾಂ ಹೆಸರಲ್ಲಿ ಉಗ್ರಕೃತ್ಯ ನಡೆಸಲು ಐಸಿಸ್‌ಗೆ ಸೇರಿದ್ದ 7 ಉಗ್ರರಿಗೆ ಎನ್‌ಐಎ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಹಾಗೆಯೇ ಇನ್ನೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

2017ರ ಉತ್ತರಪ್ರದೇಶದ ಟ್ರೈನೊಂದರಲ್ಲಿ ಬಾಂಬ್‌ ಸ್ಫೋಟಿಸಿದ್ದೂ ಸೇರಿ ಮತ್ತಿತರ ಪ್ರಕರಣಗಳಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.

ಗುಜರಾತ್‌ನಲ್ಲಿರುವ ಇನ್ನೊಂದು ವಿಶೇಷ ಎನ್‌ಐಎ ನ್ಯಾಯಾಲಯ ಇಬ್ಬರು ಸಹೋದರರಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಅವರು ದೇಶಾದ್ಯಂತ ಜಿಹಾದಿ ಉಗ್ರಕೃತ್ಯ ನಡೆಸಲು ಐಸಿಸ್‌ ಹೆಸರಲ್ಲಿ ಜನರನ್ನು ಸೇರಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಮಾತನಾಡಿದ ಎನ್‌ಐಎ ಅಧಿಕಾರಿ ಎರಡೂ ಪ್ರಕರಣಗಳಲ್ಲಿ ಆನ್‌ಲೈನ್‌ ಮೂಲಕ ಮೂಲಭೂತವಾದವನ್ನು ಹರಡಲಾಗುತ್ತಿತ್ತು ಎಂದಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next